Breaking News

”ನಾಯಕತ್ವದ ಯಶಸ್ಸಿಗೆ ಧೋನಿಯ ತಾಳ್ಮೆ ಮತ್ತು ಕೊಹ್ಲಿಯ ಆಕ್ರಮಣಶೀಲತೆ ಎರಡೂ ಅಗತ್ಯ”

Spread the love

ಮುಂಬೈ : ಕ್ರಿಕೆಟ್​ ಜಗತ್ತಿನಲ್ಲಿ ಕೆಲವು ವರ್ಷಗಳಿಂದ ಭಾರತ ತಂಡ ಎಲ್ಲಾ ಮಾದರಿಯ ಕ್ರಿಕೆಟ್​​​ನಲ್ಲಿ​ ಅಧಿಪತ್ಯ ಸಾಧಿಸಿದೆ. ಎಲ್ಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆಯುವುದಕ್ಕಾಗಿ ಶ್ರಮಿಸುತ್ತಿದೆ. ಇಷ್ಟೆಲ್ಲಾ ಸಾಧನೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಂಡದಿಂದ ಹಲವು ಮೈಲಿಗಲ್ಲು ನಿರ್ಮಾಣವಾಗಲು ಅವರ ಪಾತ್ರ ಮಹತ್ವದ್ದಾಗಿದೆ.

ಆದರೆ ನಾಯಕತ್ವದಲ್ಲಿ ಯಶಸ್ವಿಯಾಗಬೇಕಾದರೆ ಕೆಲವು ಗುಣಗಳು ಅಗತ್ಯವಾಗಿ ಬೇಕಾಗಿವೆ ಎಂದಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್,​ ತಂಡ ಬಲಿಷ್ಠವಾಗಲು ಧೋನಿಯ ತಾಳ್ಮೆಯ ಮನೋಭಾವ ಹಾಗೂ ಕೊಹ್ಲಿಯಲ್ಲಿದ್ದ ಆಕ್ರಮಣಕಾರಿ ಮನೋಭಾವ ಅಗತ್ಯವಾಗಿ ಬೇಕು ಎಂದಿದ್ದಾರೆ

“ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಭಾರತ ತಂಡ 2 ವಿಶ್ವಕಪ್​ ಜಯಿಸಿದ್ದರೆ, ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್​ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ದಿನಗಳ ಕಾಲ ನಂಬರ್​ ಒನ್​ ಸ್ಥಾನ ಅಲಂಕರಿಸಿತ್ತು.

ಈ ಕಾರಣದಿಂದ ಧೋನಿ ಮತ್ತು ಕೊಹ್ಲಿ ನಾಯಕತ್ವದ ಶೈಲಿಗಳ ಮಿಶ್ರಣ ತಂಡಕ್ಕೆ ಸರಿ ಹೊಂದುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ನ ಕ್ರಿಕೆಟ್​ ಕನೆಕ್ಟ್​ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ನಾವು ಧೋನಿ ಕಾಲದಲ್ಲಿ ತಾಳ್ಮೆಯನ್ನು ನೋಡಿದ್ದೇವೆ. ಮತ್ತು ಕೊಹ್ಲಿ ಯುಗದಲ್ಲಿ ಆಕ್ರಮಣದ ಮನೋಭಾವವನ್ನು ನೋಡುತ್ತಿದ್ದೇವೆ. ಆದರೆ ಯಶಸ್ವಿ ನಾಯಕನಾಗಬೇಕಾದರೆ ಈ ಇಬ್ಬರ ಗುಣಗಳು ಅಗತ್ಯವಾಗಿ ಬೇಕಾಗಿರುತ್ತದೆ.

ಒಬ್ಬ ಆಟಗಾರ ಯಶಸ್ವಿಯಾಗಬೇಕೆಂದರೆ ತಾಳ್ಮೆ ಮತ್ತು ಆಕ್ರಮಣಶೀಲತೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದಕ್ಕೆ ಈ ಇಬ್ಬರು ನಾಯಕರು ಸಾಕ್ಷಿಯಾಗಿದ್ದಾರೆ. ಇಬ್ಬರೂ ಆಟದ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ವಿಶೇಷ ಗುಣಗಳನ್ನು ಬಳಸುತ್ತಿದ್ದರು ಮತ್ತು ಅದೇ ರೀತಿ ಯಶಸ್ಸನ್ನು ಸಾಧಿಸಿದರು ಎಂದು ಪಠಾಣ್​ ಹೇಳಿದ್ದಾರೆ.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌

Spread the loveರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌ ಹುಬ್ಬಳ್ಳಿ: ರೈತರ ಹೆಸರು ಹೇಳಿ ಹಾಲಿನ‌ ದರ ಹಚ್ಚಳಕ್ಕೆ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ