ನವದೆಹಲಿ : ಪ್ರಧಾನಿ ಮೋದಿ ಘೋಷಿಸಿರುವ ಕಟ್ಟುನಿಟ್ಟಿನ ಲಾಕ್‌ಡೌನ್ ನಾಳೆಯಿಂದ ಸ್ವಲ್ಪ ಪ್ರಮಾಣದಲ್ಲಿ ಸಡಿಲಿಕೆಯಾಗಲಿದ್ದು,ಕೆಲ ಕ್ಷೇತ್ರಗಳಿಗೆ ಲಾಕ್ ಡೌನ್ ನಿಂದ ಷರತ್ತು ಬದ್ಧ ವಿನಾಯಿತಿ ನೀಡಿದೆ. ಕೆಲ ಸರ್ಕಾರಿ ಕಾರ್ಯಚಟುವಟಿಕೆಗಳಿಗೆ ಅನುಮತಿ ನೀಡಿದೆ. ಕೇಂದ್ರ ಗೃಹ ಇಲಾಖೆ ಜಾರಿಗೊಳಿಸಲು ಉದ್ದೇಶಿಸಿರುವ ಸೇವೆಗಳು ಹಾಗೂ ಚಟುವಟಿಕೆಗಳಿಗಾಗಿ ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಒಂದಷ್ಟು ನಿರ್ದೇಶನಗಳನ್ನು ಮತ್ತು ಮಾಹಿತಿಗಳನ್ನು ನೀಡಿದ್ದು, ಕೆಲವು ಕ್ಷೇತ್ರಗಳು ಲಾಕ್ ಡೌನ್ ನಿಂದ ವಿನಾಯಿತಿ ಪಡೆಯಲಿದೆ. ಆದರೆ ,ಈ ವಿನಾಯಿತಿ ಜಾರಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು.ಸರ್ಕಾರಗಳು ಬಯಸಿದರೆ ಇದನ್ನು ಜಾರಿಗೆ ತರಬಹುದು ಇಲ್ಲವೇ ಯಾಥಾ ಸ್ಥಿತಿ ಮುಂದುವರೆಸಬಹುದು ಎಂದೂ ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಲಾಕ್‌ಡೌನ್ 2.0 ಈಗಾಗಲೇ ಜಾರಿಯಲ್ಲಿದ್ದು, ಏ. 20ರಿಂದ ಆಯಾ ಪ್ರದೆಶಗಳ ಪರಿಸ್ಥಿತಿಗನುಗುಣವಾಗಿ ಸೀಮಿತ ಸಡಿಲಿಕೆ ಮಾಡಬಹುದಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅದರಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಸರ್ಕಾರ ಕೆಲ ಸಡಿಲಿಕೆಯೊಂದಿಗೆ ಲಾಕ್‌ಡೌನ್ ಮುಂದುವರೆಸಲಿದೆ.
ಈ ಕುರಿತು ಕೇಂದ್ರ ಟೆಲಿಕಾಂ ಹಾಗೂ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ವೊಂದನ್ನು ಮಾಡಿದ್ದು, ಈ ಟ್ವೀಟ್ ನಲ್ಲಿ ಆರೋಗ್ಯ ಸೇವೆ, ಕೃಷಿ ಉತ್ಪನ್ನ ಮಾರಾಟ , ಮೀನುಗಾರಿಕೆ, ಹೈನುಗಾರಿಕೆ ಉತ್ಪನ್ನಗಳು ಸೇರಿವೆ.ಕಂಟೆನ್ ಮೆಂಟ್ ಜೋನ್ ಗಳಲ್ಲಿ ಯಾವುದೇ ರೀತಿಯ ಅನುಮತಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಉoಒ ಸಭೆ ನಡೆಸಿದ್ದು, ಬಂದ್ ವೇಳೆ ಗೃಹ ಸಚಿವಾಲಯ ಜಾರಿಗೊಳಿಸಿರುವ ಮಾರ್ಗಸೂಚಿ
ಆಡಿಯೇ ಕೆಲ ಸೇವೆಗಳಿಗೆ ಸಡಿಲಿಕೆ ನೀಡಲಾಗುವುದು.
ಆದರೆ, ವಿವಿಧ ರಾಜ್ಯ ಸರ್ಕಾರಗಳು ತಮ್ಮದೇ ಆದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದೂ ಕೂಡ ಸೂಚಿಸಿದೆ.ಗ್ರಾಮೀಣ ಇಲಾಖೆಗಳಲ್ಲಿ ಕೋ-ಆಪ್ ರೆಟಿವ್ ಕ್ರೆಡಿಟ್ ಸೊಸೈಟಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ನೀರು ಸರಬರಾಜು, ವಿದ್ಯುತ್ ಹಾಗೂ ಸಂಚಾರಕ್ಕೆ ಸಂಬಂಧಿಸಿದ ಯೋಜನೆಗಳು ಹಾಗೂ ಚಟುವಟಿಕೆಗಳಿಗೆ ಅನುಮತಿ ನೀಡಿರುವುದು ಇಲ್ಲಿ ಗಮನಾರ್ಹ.
ಇವುಗಳಲ್ಲದೆ ಸರ್ಕಾರ, ಬಿದಿರು, ತೆಂಗು, ಅಡಿಕೆ, ಕೋಕೋ, ಮಸಾಲೆಗಳ ಕೃಷಿ, ಕಟಾವು, ಪ್ರೊಸೆಸಿಂಗ್, ಪ್ಯಾಕೆಜಿಂಗ್, ಹಣ್ಣು-ತರಕಾರಿ ಬಂಡಿಗಳು, ಸ್ವಚ್ಚತೆಯ ಸಾಮಾನುಗಳ ಮಾರಾಟ ಮಾಡುವ ಅಂಗಡಿಗಳು, ಎಲೆಕ್ಟ್ರಿಷಿಯನ್, Iಖಿ ರಿಪೆಯರ್ಸ್, ಪ್ಲಂಬರ್, ಮೋಟರ್ ಮೆಕ್ಯಾನಿಕ್, ಕಾರ್ಪೆಂಟರ್, ಕುರಿಯರ್, ಆಖಿಊ ಹಾಗೂ ಕೇಬಲ್ ಸರ್ವಿಸ್ ಗಳಿಗೆ ಕೆಲ ನಿಬಂಧನೆಗಳ ಅಡಿ ಅನುಮತಿ ನೀಡಿದೆ..
ಏಪ್ರಿಲ್ 20ರ ಬಳಿಕೆ ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ಚಟುವಟಿಕೆಗಳನ್ನೂ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಸರಕುಗಳ ದಿಲೆವರಿಗಾಗಿ ವಾಹನಗಳಿಗೆ ಬೇಕಾಗುವ ಅವಶ್ಯಕ ಅನುಮತಿಯನ್ನು ಪಡೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದೆ. ಸರ್ಕಾರಿ ಚಟುವಟಿಕೆಗಳಿಗೆ ಕಾರ್ಯನಿರ್ವಹಿಸುವ ಡೇಟಾ ಹಾಗೂ ಕಾಲ್ ಸೆಂಟರ್, Iಖಿ ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳ ಕಚೇರಿಗಳಿಗೂ ಕೂಡ ಮಂಜೂರಾತಿ ನೀಡಲಾಗಿದೆ. ಆದರೆ, ಶೇ.50ಕ್ಕಿಂತ ಸಿಬ್ಬಂದಿಗಳು ಇರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
1.ವಿತ್ತ ಕ್ಷೇತ್ರ
ವಿತ್ತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಈ ಹಿಂದಿನಂತೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಿದ್ದು, ಬ್ಯಾಂಕ್ ಗಳು, ಇತರೆ ಆರ್ಥಿಕ ಕ್ಷೇತ್ರಗಳ ಕಚೇರಿಗಳಲ್ಲಿ ಸಾಮಾಜಿಕ ಅಂತರ ಮತ್ತು ಶುಚಿತ್ವ ಮುಂಜಾಗ್ರತೆ ಕಾಯ್ದುಕೊಂಡು ಕಾರ್ಯ ನಿರ್ವಹಣೆ ಮಾಡಬಹುದಾಗಿದೆ.
2.ಮನ್ರೇಗಾ
ಕೇಂದ್ರ ಸರ್ಕಾರದ ಮನ್ರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ನಾಳೆಯಿಂದ ಕೆಲಸಕ್ಕೆ ತೆರಳಬಹುದು. ಆದರೆ ಕೆಲಸ ಮಾಡುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವಕೆ ಕಡ್ಡಾಯ ಕೆಲಸದ ವೇಳೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
3.ಸಾರ್ವಜನಿಕ ಉಪಯೋಗಿಕ ಕ್ಷೇತ್ರಗಳು
ದಿನಸಿ ಅಂಗಡಿಗಳು, ಹಣ್ಣು-ತರಕಾರಿ ಅಂಗಡಿಗಳು, ಆಸ್ಪತ್ರೆಗಳು, ವೈದ್ಯಕೀಯ ಔಷಧಾಲಯಗಳು
4.ವಾಣಿಜ್ಯ
ಅತ್ಯಗತ್ಯ ವಸ್ತುಗಳ ಪ್ಯಾಕಿಂಗ್ ಸಂಸ್ಥೆಗಳು, ಗೂಡ್ಸ್ ಅಥವಾ ಕಾರ್ಗೋ ಲೋಡಿಂಗ್ ಅನ್ ಲೋಡಿಂಗ್, ಅತ್ಯಗತ್ಯ ವಸ್ತುಗಳ ರವಾನೆ, ಆನ್ ಲೈನ್ ಟೀಚಿಂಗ್, ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು (ಶೇ.50ರಷ್ಟು ಸಿಬ್ಬಂದಿಗಳೊಂದಿಗೆ), ಖಾಸಗಿ ಮತ್ತು ಸರ್ಕಾರಿ ಕೈಗಾರಿಕಾ ಸಂಸ್ಥೆಗಳು, ಕಟ್ಟಡ ನಿರ್ಮಾಣ (ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ)
5.ಸಾರಿಗೆ
ತುರ್ತು ವಾಹನಗಳು (ಆ್ಯಂಬುಲೆನ್ಸ್), ವೈದ್ಯಕೀಯ ಪರಿಕರಗಳು, ಔಷಧಿಗಳ ರವಾನಿಸುವ ವಾಹನಗಳು, ಪಶು ವೈದ್ಯಕೀಯ ರವಾನೆ, ಅಗತ್ಯ ವಸ್ತುಗಳ ರವಾನೆ, ಕೆಲಸಕ್ಕೆ ತೆರಳುವವರ ವಾಹನಗಳು (ಬೈಕಿನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರು-ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ಒಬ್ಬರಿಗೆ ಮಾತ್ರ ಅವಕಾಶ). ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ನೌಕರರ ಕಾರ್ಯ ನಿರ್ವಹಣೆಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ.