Home / ಜಿಲ್ಲೆ / ನಂಗೆ ಇನ್ನೂ ಮಕ್ಕಳಾಗಿಲ್ಲ, ಪತಿ ಬಳಿ ಕರ್ಕೊಂಡು ಹೋಗಿ- ಮೋದಿಗೆ ರಾಖಿ ಮನವಿ

ನಂಗೆ ಇನ್ನೂ ಮಕ್ಕಳಾಗಿಲ್ಲ, ಪತಿ ಬಳಿ ಕರ್ಕೊಂಡು ಹೋಗಿ- ಮೋದಿಗೆ ರಾಖಿ ಮನವಿ

Spread the love

ಮುಂಬೈ: ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಮುಂಬೈನಲ್ಲಿ ನೆಲೆಸಿರುವ ಬಾಲಿವುಡ್ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರ ಬಳಿ ಪತಿ ಇರುವಲ್ಲಿಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ.

ರಾಖಿ ಸಾವಂತ್ ಈ ಬಗ್ಗೆ ಮಾತನಾಡಿರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. “ಮೋದಿ ಜೀ ಮುಂಬೈನಲ್ಲಿ ಕೊರೊನಾ ವೈರಸ್ ಕಡಿಮೆಯಾಗುವುದಿಲ್ಲ. ಹೀಗಾಗಿ ಶೀಘ್ರವೇ ನೀವು ಪ್ರೈವೇಟ್ ಜೆಟ್‍ನಲ್ಲೋ ಅಥವಾ ಹೆಲಿಕಾಪ್ಟರ್ ನಲ್ಲೋ ನನ್ನನ್ನು ಮುಂಬೈನಿಂದ ಹೊರಗೆ ಕರೆದುಕೊಂಡು ಹೋಗಿ” ಎಂದು ಮೊದಲಿಗೆ ಮನವಿ ಮಾಡಿಕೊಂಡಿದ್ದಾರೆ.

ನಾನು ಕೆಲವು ತಿಂಗಳ ಹಿಂದಷ್ಟೆ ಮದುವೆಯಾಗಿದ್ದೀನಿ, ಇನ್ನೂ ನನಗೆ ಮಕ್ಕಳು ಸಹ ಆಗಿಲ್ಲ. ಹೀಗಾಗಿ ನನ್ನನ್ನು ನನ್ನ ಗಂಡನ ಬಳಿಗೆ ಕರೆದುಕೊಂಡು ಹೋಗಿ. ನಾನು ನಿಮ್ಮನ್ನು ಬೆಂಬಲಿಸಿದ್ದೇನೆ, ಆದ್ದರಿಂದ ನೀವು ನನಗೆ ಸಹಾಯ ಮಾಡಿ. ಪ್ಲೀಸ್ ಮೋದಿಜೀ ನನ್ನನ್ನು ಪತಿಯ ಬಳಿ ಕರೆದುಕೊಂಡು ಹೋಗಿ” ಎಂದು ರಾಖಿ ಗೋಗರೆದಿದ್ದಾರೆ.

ಅಷ್ಟೇ ಅಲ್ಲದೇ ಮುಂಬೈನಲ್ಲಿ ಇನ್ನೂ ಆರು ತಿಂಗಳು ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದಿಲ್ಲ. ಅಪಾರ್ಟ್ ಮೆಂಟ್‍ನಲ್ಲಿ ಇರುವವರು ಮನೆಯಲ್ಲಿಯೇ ಇದ್ದಾರೆ. ಆದರೆ ಈ ಗುಡಿಸಿಲಿನಲ್ಲಿ ವಾಸಿಸುವರು ಮನೆಯಿಂದ ಹೊರಬಂದು ಸುಮ್ಮನೆ ತಿರುಗಾಡುತ್ತಿದ್ದಾರೆ. ಅವರಿಗೆ ಬುದ್ಧಿ ಇಲ್ಲ. ಹೀಗಾಗಿ ಮುಂಬೈನಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ರಾಖಿ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಮೋದಿ ಅವರೇ ಚಂದ್ರನ ಮೇಲೆ ಮನೆ ಏನಾದರೂ ಕಟ್ಟಿದ್ದರೆ, ಅಲ್ಲಿಗಾದರೂ ನನ್ನನ್ನು ಕಳುಹಿಸಿ ಎಂದು ಬೇಸರದಿಂದ ಕೇಳಿಕೊಂಡಿದ್ದಾರೆ. ನಮ್ಮ ಸಿಎಂ ತುಂಬಾ ತಾಳ್ಮೆ, ಸೌಮ್ಯವಿರುವವರು. ಹೀಗಾಗಿ ಅವರು ಸುಮ್ಮನೆ ಮನೆಯಿಂದ ಹೊರಗೆ ಓಡಾಡುತ್ತಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ರಾಖಿ ಸಾವಂತ್ 2019ರ ಜುಲೈ 28ರಂದು ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ