ಗೋಕಾಕ: ನಗರದಲ್ಲಿ ಇಂದು ಸುಮಾರು ದಿನಗಳಿ ಸ್ಥಗಿತವಾಗಿರುವ ಇಂದಿರಾ ಕ್ಯಾಂಟಿನ, ಇಂದು ಗೋಕಾಕ ಕ್ಷೇತ್ರದ ಶಾಸಕರು ಹಾಗೂ ಜಲಸಂಪನ್ಮೂಲ ಸಚಿವರು ರಮೇಶ ಜಾರಕಿಹೊಳಿ ಅವರ ಗೋಕಾಕ ಇಂದಿರಾ ಕ್ಯಾಂಟಿನ್ ಗೆ ಉದ್ಘಾಟನಾ ಮಾಡುವ ಮೂಲಕ ಚಾಲನೆ ನೀಡಿದರು.
ಬಡವರಿಗೆ ಮತ್ತು ನಿರಾಶ್ರಿತರಿಗಾಗಿ ಸರ್ಕಾರ ಇಂದಿರಾ ಕ್ಯಾಂಟೀನ್ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡವ ನಿಟ್ಟಿನಲ್ಲಿ ನಿರ್ದೇಶನಮಾಡಲಾಗಿತ್ತು, ಆದರೆ ಇಂದು ಸರಕಾರ ಕೊರೊನಾ ಲಾಕ್ಡೌನ್ ಬಳಿಕ ಕೆಲದಿನಗಳ ಕಾಲ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ನೀಡುವಂತೆ ಸೂಚನೆ ನೀಡಿದ ಸಿ.ಎಮ್ ಬಿ.ಎಸ್.ಯಡಿಯೂರಪ್ಪ ಅವರ
ಮಾರ್ಗದರ್ಶನದಂತೆ ರಮೇಶ್ ಜಾರಕಿಹೊಳಿ ಅವರು
ಹಸಿದವರ ಹಸಿವನ್ನು ನಿಗಿಸು ನಿಟ್ಟಿನಲ್ಲಿ ಗೋಕಾಕ ಇಂದಿರಾ ಕ್ಯಾಂಟಿನಗೆ ತರಾ – ತುರಿಯಲ್ಲಿ ಲಾಕ್ ಡೌನ ಮುಂದುವರಿಯುವ ಸಲುವಾಗಿ ಚಾಲನೆ ನೀಡಲಾಯಿತು. ಇನ್ನು ಗೋಕಾಕ ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಿದು ಬಡ ಬಾದವರು ಸರಿಯಾಗಿ ಬಂದು ಸದುಪಯೋಗ ಪಡೆಯುವಂತೆ ಸೂಚಿಸಿದ್ದರು. ಕೊರೊನೋ ಹಿನ್ನೆಲೆಯಲ್ಲಿ ಬರುವ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಆಂತರ ಕಾಯ್ದಿದುಕೊಂಡು ಎಲ್ಲರು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶ ಪಾಲನೆ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದರು. ಇನ್ನು ಅದೇರೀತಿಯಾಗಿ ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗು ಕ್ಯಾಂಟಿನನಲ್ಲಿ ಯಾರ ಒಬ್ಬರಿಗೊಬ್ಬರು ತೊಂದರೆ ನೀಡದೆ ಶಾಂತ ರೀತಿಯಲ್ಲಿ ವರ್ತಿಸಿ ನೋಡಿಕೊಳ್ಳುವಂತೆ ಸೂಚನೆ ನೀಡಿದರು.