Home / ಜಿಲ್ಲೆ / ಉಡುಪಿ / ಕೊರೊನಾ ವೈರಾಣು ಭೀತಿಯಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೇಟು ಹಾಕಿದರು…! ಕೊನೆಗೆ ನಾಗರಿಕ ಸಮಿತಿಯಿಂದ ಅಂತ್ಯಸಂಸ್ಕಾರ ನಡೆಯಿತು.

ಕೊರೊನಾ ವೈರಾಣು ಭೀತಿಯಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೇಟು ಹಾಕಿದರು…! ಕೊನೆಗೆ ನಾಗರಿಕ ಸಮಿತಿಯಿಂದ ಅಂತ್ಯಸಂಸ್ಕಾರ ನಡೆಯಿತು.

Spread the love

ಕೊರೊನಾ ವೈರಾಣು ಭೀತಿಯಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೇಟು ಹಾಕಿದರು…! ಕೊನೆಗೆ ನಾಗರಿಕ ಸಮಿತಿಯಿಂದ ಅಂತ್ಯಸಂಸ್ಕಾರ ನಡೆಯಿತು.

ಉಡುಪಿ,ಏ.2; ಕೊರೊನಾ ವ್ಯಾಧಿಯ ಭಯದಿಂದ ವೃದ್ಧನ ಅಂತ್ಯಸಂಸ್ಕಾರ ನಡೆಸಲು ಮನೆ ಮಂದಿ ಭಯಭೀತರಾಗಿ ಹಿಂದೇಟು ಹಾಕಿದರು. ಕೊನೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ, ವೃದ್ಧನ ಅಂತ್ಯಸಂಸ್ಕಾರವನ್ನು ನೆರವೆರಿಸಿತು. ಇಂತಹ ಮಾನವಿತೆಯ ಸತ್ಕಾರ್ಯವು ಉಡುಪಿಯಲ್ಲಿ ಮಾ.30 ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸಿದ್ಧಾಪುರ- ಕಮಲಶಿಲೆಯ ನಿವಾಸಿ ಮಂಜುವೀರ( 80ವ) ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಿರುವಾಗ ಕೊರೊನಾ ವೈರಾಣು ಸೋಂಕಿತ ಮತ್ತು ಶಂಕಿತ ರೋಗಿಗಳಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಳು ನಡೆಯಲು ಪ್ರಾರಂಭವಾದವು. ಈ ಮೊದಲು ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯದ ಸುರಕ್ಷತೆಯ ಕಾರಣದಿಂದ ಔಷಧಿಗಳ ನೀಡಿ, ದಾಖಲಾಗಿದ್ದ ರೋಗಿಗಳ ಬಿಡುಗಡೆ ಮಾಡಲಾಯಿತು. ವೃದ್ಧ ಮಂಜವೀರನಿಗೆ ಬಳಿ ಯಾರಿಲ್ಲದೆ ಅತಂತ್ರ ಪರಿಸ್ಥಿತಿ ಎದುರಾಯಿತು. ಸರಕಾರದ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಏಲ್ಲಿಗೂ ಹೋಗಲು ಅವರಿಗೆ ದಿಕ್ಕುತೋರದಾಯಿತು. ನಗರದ ಸಾರ್ವಜನಿಕ ಸ್ಥಳದಲ್ಲಿ ವೃದ್ಧರು ಅಸಹಾಯಕರಾಗಿ ಕಂಡು ಬಂದಾಗ, ಅವರನ್ನು ರಕ್ಷಿಸಿ, ಹೂಡೆ- ಗುಜ್ಜರಬೆಟ್ಟು ಇಲ್ಲಿಯ ವಯೋವೃದ್ಧರ ಆಶ್ರಮದಲ್ಲಿ ನೆಲೆ ಕಲ್ಪಿಸಲಾಯಿತು. ನಾಲ್ಕು ದಿನಗಳ ಕಾಲ ಅಲ್ಲಿದ್ದ ವೃದ್ಧರು ಮೃತಪಟ್ಟರು. ವೃದ್ಧರ ಶವವನ್ನು ಆಶ್ರಮದ ವ್ಯವಸ್ಥಾಪಕರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ರಕ್ಷಿಸಿಟ್ಟಿದ್ದರು.

ಕೊನೆಗೆ ಮೃತನ ಕುಟುಂಬಿಕರಿಗೆ ವಿಷಯ ಮುಟ್ಟಿಸಲಾಯಿತು. ಕೊರೊನಾ ಶಂಕಿತ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ಆಸ್ಪತ್ರೆಯಲ್ಲಿ ವೃದ್ಧರು ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಕುಟುಂಬಿಕರು, ಕೊರೊನಾ ಕಾಯಿಲೆ ತಮಗೆಲ್ಲ ಬರಬಹುದು ಎನ್ನುವ ಭಯದಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೇಟು ಹಾಕಿದರು. ಅವರ ಮನವೊಲಿಸವ ಪ್ರಯತ್ನಗಳು ವಿಫಲವಾದವು. ಕೊನೆಗೆ ಆಶ್ರಮ ವ್ಯವಸ್ಥಾಪಕರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಲ್ಲಿ ನೆರವು ಯಾಚಿಸಿದ್ದಾರೆ. ಅದೇ ಸಮಯದಲ್ಲಿ ಉಡುಪಿಯಲ್ಲಿದ್ದ ವೃದ್ಧರ ಮಗ ಜಗದೀಶನನ್ನು ಪತ್ತೆಗೊಳಿಸಲಾಯಿತು.

ಕೊನೆಗೆ ಮಗನ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವೃದ್ಧನ ಅಂತ್ಯಸಂಸ್ಕಾರವನ್ನು ಇಂದ್ರಾಳಿ ಹಿಂದು ರುದ್ರಭೂಮಿಯಲ್ಲಿ ಮಾ.30 ರಂದು ನಡೆಸಲಾಯಿತು. ಶವಸಂಸ್ಕಾರದ ಖರ್ಚು ವೆಚ್ಚಗಳನ್ನು ನಾಗರಿಕ ಸಮಿತಿ ಭರಿಸಿತು. ಶವಸಾಗಟ ನಡೆಸಲು ಪಂಚರತ್ನ ಸೇವಾ ಟ್ರಸ್ಟ್ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು. ಅಂತ್ಯಸಂಸ್ಕಾರ ಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜೇಶ್ ಕಾಪು, ಪಡುಬಿದ್ರೆ ಚೇತನ್ ಭಾಗಿಗಳಾದರು. ನಂತರ ಮೃತನ ಮಗನಿಗೆ ಕಮಲಶಿಲೆಗೆ ತೆರಳಲು ವಾಹನ ವ್ಯವಸ್ಥೆ ಇಲ್ಲದ ಕಾರಣದಿಂದ ಬೊರ್ಡ್ ಹೈಸ್ಕೂಲು ಇಲ್ಲಿಯ ವಲಸೆ ಕಾರ್ಮಿಕರ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸುವ ವ್ಯವಸ್ಥೆಯನ್ನು ಸಮಿತಿಯವರು ಮಾಡಿದರು.
ಕೊರೋನಾ ಸೋಂಕು ತಡೆಗಟ್ಟೋಕೆ ಸರ್ಕಾರ ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಕೊರೋನಾ ಹರಡೋಕೆ ನೋಟುಗಳಿಗೆ ತನ್ನ ಎಂಜಲು ತಾಗಿಸುವ ವೀಡಿಯೋ ವೈರಲ್ ಮಾಡಿದ್ದಾನೆ.

ಕೊರೋನಾ ಸೋಂಕಿಗೆ ಮದ್ದು ಇಲ್ಲ, ಇದು ಅಲ್ಲಾನ ಕೊಡುಗೆ ಎಂದು ವೀಡಿಯೋದಲ್ಲಿ ಹೇಳಿರುವ ಆತ, ನೋಟುಗಳಿಗೆ ತನ್ನ ಎಂಜಲು ಅಂಟಿಸಿದ್ದಾನೆ. ಸದ್ಯ ಈ ವೀಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ಜನ ಮುಸ್ಲಿಮರ ಜೊತೆ ವ್ಯಾಪಾರ ವ್ಯವಹಾರ ಮಾಡಬೇಡಿ ಎಂದು ಕರೆಕೊಟ್ಟಿದ್ದಾರೆ. ವೀಡಿಯೋ ನೋಡಿ


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ