Breaking News
Home / ರಾಜ್ಯ / ಕೊರೊನಾ​: ಸದ್ಯಕ್ಕೆ ಈ 3 ದೇಶಗಳ ಪ್ರಜೆಗಳಿಗೆ ಭಾರತದ ಬಾಗಿಲು ಕ್ಲೋಸ್​​..!

ಕೊರೊನಾ​: ಸದ್ಯಕ್ಕೆ ಈ 3 ದೇಶಗಳ ಪ್ರಜೆಗಳಿಗೆ ಭಾರತದ ಬಾಗಿಲು ಕ್ಲೋಸ್​​..!

Spread the love

ನವದೆಹಲಿ: ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ವೈರಸ್​ ಹರಡುವ ಆತಂಕ ಹೆಚ್ಚಾಗ್ತಿದೆ. ಈ ಹಿನ್ನೆಲೆ ಭಾರತ, ಕೆಲವು ವಿದೇಶಿ ಪ್ರಜೆಗಳಿಗೆ ತಾತ್ಕಾಲಿಕವಾಗಿ ದೇಶದೊಳಗೆ ಎಂಟ್ರಿ ನಿಷೇಧಿಸಿದೆ. ಫ್ರಾನ್ಸ್,​ ಜರ್ಮನಿ ಹಾಗೂ ಸ್ಪೇನ್​​​​​ ಪ್ರವಾಸಿಗರಿಗೆ ಈವರೆಗೆ ನೀಡಲಾಗಿರುವ ಸಾಮಾನ್ಯ ವೀಸಾ ಹಾಗೂ ಇ-ವೀಸಾವನ್ನ ತಡೆಹಿಡಿಯಲಾಗಿದೆ.ಈವರೆಗೂ ಭಾರತವನ್ನ ಪ್ರವೇಶಿಸದ ಈ ಮೂರು ದೇಶಗಳ ಪ್ರಜೆಗಳಿಗೆ ವೀಸಾವನ್ನ ಕೂಡಲೇ ಸಸ್ಪೆಂಡ್​ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದರ ಜೊತೆಗೆ ಇನ್ನೂ ದೇಶಕ್ಕೆ ಎಂಟ್ರಿಯಾಗದ ಇಟಲಿ, ಇರಾನ್ ಪ್ರಜೆಗಳಿಗೆ 2020, ಮಾರ್ಚ್​​ 3 ಅಥವಾ ಅದಕ್ಕೂ ಮುನ್ನ ನೀಡಿರೋ ವೀಸಾ, ಇ-ವೀಸಾ ಹಾಗೂ ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರಜೆಗಳಿಗೆ ನೀಡಿರೋ ವೀಸಾ ಆನ್ ಅರೈವಲ್ ಕೂಡ, ಸಸ್ಪೆಂಡ್​ ಆಗಿರಲಿದೆ. ಹಾಗೇ ಫೆಬ್ರವರಿ 5 ಅಥವಾ ಅದಕ್ಕೂ ಮುನ್ನ ವೀಸಾ ಪಡೆದಿರೋ ಚೀನಾ ಪ್ರವಾಸಿಗರಿಗೆ ಕೂಡ ನಿರ್ಬಂಧ ಅನ್ವಯಿಸಲಿದೆ.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ