ಬೆಳಗಾವಿ :ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿದ್ದು ವಿಮಾನ, ರೈಲು, ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಲಾಕ್ ಡೌನ್ ನಡುವೆಯೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಖಾಸಗಿ ವಿಮಾನ ಬಂದಿದೆ.
ಈ ವಿಶೇಷ ವಿಮಾನದಲ್ಲಿ ನವಜಾತ ಶಿಶುವನ್ನು ಕರೆತರಲಾಗಿದೆ. ಗುಜರಾತ್ ನ ಸೂರತ್ ನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿ ವೈದ್ಯರ ತಂಡ ನವಜಾತ ಶಿಶುವನ್ನು ಕರೆತಂದಿದ್ದು ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೃದಯ ಸಂಬಂಧಿ ಕಾಯಿಲೆ ಇರುವ ನವಜಾತ ಶಿಶುವನ್ನು ಸೂರತ್ ನಿಂದ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿಗೆ ಬಂದ ವಿಶೇಷ ವಿಮಾನ ಬಳಿಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಶೇಷ ವೈದ್ಯರ ತಂಡದೊಂದಿಗೆ ಕರೆತರಲಾದ ನವಜಾತ ಶಿಶುವನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿದ್ದು ಅಗತ್ಯ ತುರ್ತು ಚಿಕಿತ್ಸೆ ನೀಡಲಾಗಿದೆ.