Breaking News
Home / Uncategorized / ಇನ್ಮುಂದೆ ಇರಲ್ಲ ಟೆಸ್ಟ್ ಡ್ರೈವ್! ಡ್ರೈವಿಂಗ್ ಲೈಸೆನ್ಸ್’ನ ನಿಯಮದಲ್ಲಿ ಭಾರಿ ಬದಲಾವಣೆ – ಜೂನ್ 1 ರಿಂದ ಜಾರಿ

ಇನ್ಮುಂದೆ ಇರಲ್ಲ ಟೆಸ್ಟ್ ಡ್ರೈವ್! ಡ್ರೈವಿಂಗ್ ಲೈಸೆನ್ಸ್’ನ ನಿಯಮದಲ್ಲಿ ಭಾರಿ ಬದಲಾವಣೆ – ಜೂನ್ 1 ರಿಂದ ಜಾರಿ

Spread the love

ಬೆಂಗಳೂರು: ಚಾಲನಾ ಪರವಾನಗಿ ಮತ್ತು ತರಬೇತಿಗೆ ಸಂಬಂಧಿಸಿದ ನಿಯಮಗಳಲ್ಲಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮಗಳು ಜೂನ್ 1, 2024 ರಿಂದ ಜಾರಿಗೆ ಬರುತ್ತವೆ. ಹೀಗಾಗಿ ಇನ್ನು ಮುಂದೆ ಆರ್ ಟಿಒ ಕಚೇರಿಗೆ ಹೋಗಿ ಟೆಸ್ಟ್ ಡ್ರೈವ್ ಮಾಡಬೇಕಿಲ್ಲ. ಹೊಸ ನಿಯಮಗಳಲ್ಲಿ ಯಾವ ಬದಲಾವಣೆಗಳು ಬರಲಿವೆ ಎಂಬುದನ್ನು ಇಲ್ಲಿ ತಿಳಿಯಿರಿ.Driving License: ಇನ್ಮುಂದೆ ಇರಲ್ಲ ಟೆಸ್ಟ್ ಡ್ರೈವ್! ಡ್ರೈವಿಂಗ್ ಲೈಸೆನ್ಸ್'ನ ನಿಯಮದಲ್ಲಿ ಭಾರಿ ಬದಲಾವಣೆ - ಜೂನ್ 1 ರಿಂದ ಜಾರಿ

 

ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಚಾಲನಾ ಪರೀಕ್ಷೆಗೆ ಹೋಗಬೇಕಾಗಿಲ್ಲ. ಆರ್‌ಟಿಒ ಕಚೇರಿ ಬದಲಿಗೆ ಖಾಸಗಿ ತರಬೇತಿ ಕೇಂದ್ರಗಳಲ್ಲಿ ಚಾಲನಾ ಪರೀಕ್ಷೆಗೆ ಹಾಜರಾಗಬಹುದು. ಅವರು ಚಾಲನಾ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡುತ್ತಾರೆ. ಅದರೊಂದಿಗೆ ನೀವು RTO ಕಚೇರಿಯಿಂದಲೂ ಚಾಲನಾ ಪರವಾನಗಿ ಪಡೆಯಬಹುದು.

ಈ ಹೊಸ ನಿಯಮಗಳು ಜೂನ್ 1 ರಿಂದ ಜಾರಿಗೆ ಬರಲಿವೆ. ಈ ಹೊಸ ನಿಯಮಗಳ ಮುಖ್ಯ ಉದ್ದೇಶವೆಂದರೆ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿದಾರರು ನೇರವಾಗಿ ಆರ್‌ಟಿಒ ಕಚೇರಿಗಳಿಗೆ ಹೋಗುವ ಅಗತ್ಯವನ್ನು ತೊಡೆದುಹಾಕುವುದೇ ಆಗಿದೆ. ಚಾಲನಾ ಪರವಾನಗಿ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ.

ಖಾಸಗಿಚಾಲನಾತರಬೇತಿಕೇಂದ್ರಗಳಿಗೆಹೊಸನಿಯಮಗಳುಅನ್ವಯ : ಖಾಸಗಿ ಚಾಲನಾ ತರಬೇತಿ ಕೇಂದ್ರವನ್ನು ಸ್ಥಾಪಿಸಲು, ಅವರು ಹಲವು ನಿಯಮಗಳನ್ನು ಅನುಸರಿಸಬೇಕು. ಲಘು ಮೋಟಾರ್​​ ವಾಹನ ಚಾಲನಾ ತರಬೇತಿಗೆ ಒಂದು ಎಕರೆ ಜಮೀನು ಲಭ್ಯವಿರಬೇಕು. ನಾಲ್ಕು ಚಕ್ರದ ವಾಹನ ಚಾಲನೆ ತರಬೇತಿಗೆ 2 ಎಕರೆ ಜಾಗವನ್ನು ಅವರು ಹೊಂದಿರಲೇಬೇಕು. ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಮಾತ್ರವೇ ಸರ್ಕಾರ ಪರವಾನಗಿ ನೀಡುತ್ತದೆ.

ವಿದ್ಯಾರ್ಹತೆಗಳೇನೇನು?: ಈ ಖಾಸಗಿ ತರಬೇತಿ ಕೇಂದ್ರಗಳಲ್ಲಿನ ತರಬೇತುದಾರರು ಕನಿಷ್ಠ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಲ್ಲದೇ ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು. ಬಯೋಮೆಟ್ರಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಕನಿಷ್ಠ ಜ್ಞಾನವನ್ನು ಇವರು ಹೊಂದಿರಬೇಕಾಗುತ್ತದೆ.

ಲಘು ಮೋಟಾರು ವಾಹನ ತರಬೇತಿಯನ್ನು ನಾಲ್ಕು ವಾರಗಳಲ್ಲಿ ಅಥವಾ ಕನಿಷ್ಠ 29 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು. ಈ ತರಬೇತಿಯು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ವಿಧಾನಗಳಲ್ಲಿ ಇರಬೇಕು. ವಿಷಯವನ್ನು ಅರಿಯಲು ಕನಿಷ್ಠ 8 ಗಂಟೆಗಳು ಮತ್ತು ಪ್ರಾಯೋಗಿಕವಾಗಿ ಕನಿಷ್ಠ 21 ಗಂಟೆಗಳ ತರಬೇತಿ ಇರಬೇಕು. ಭಾರೀ ಮೋಟಾರ್​ ವಾಹನಗಳ ಸಂದರ್ಭದಲ್ಲಿ 6 ವಾರಗಳು ಅಥವಾ ಕನಿಷ್ಠ 38 ಗಂಟೆಗಳ ತರಬೇತಿ. ಥಿಯರಿ ಶಿಕ್ಷಣವು 8 ಗಂಟೆಗಳು ಮತ್ತು ಪ್ರಾಕ್ಟಿಕಲ್ಸ್ 31 ಗಂಟೆ ಅಭ್ಯಾಸವನ್ನು ಹೊಂದಿರಬೇಕು ಎಂಬ ಷರತ್ತುಗಳನ್ನು ಹೊಸ ನಿಯಮದಲ್ಲಿ ಸೇರ್ಪಡೆ ಮಾಡಲಾಗಿದೆ.

ಚಾಲನಾಪರವಾನಗಿಶುಲ್ಕಗಳು

  • ಕಲಿಕಾ ಪರವಾನಗಿ – 200ರೂ.
  • ಕಲಿಕಾ ಪರವಾನಗಿ ನವೀಕರಣ – 200ರೂ.
  • ಅಂತಾರಾಷ್ಟ್ರೀಯ ಪರವಾನಗಿ -1000 ರೂ.
  • ಶಾಶ್ವತ ಪರವಾನಗಿ – 200 ರೂ
  • ಶಾಶ್ವತ ಪರವಾನಗಿ ನವೀಕರಣ – 200 ರೂ.
  • ಡ್ರೈವಿಂಗ್ ಸ್ಕೂಲ್ ಲೈಸೆನ್ಸ್ ವಿತರಣೆ, ನವೀಕರಣ -10,000 ರೂ.
  • ಡ್ರೈವಿಂಗ್ ಸ್ಕೂಲ್ ನಕಲು ಪರವಾನಗಿ – 5000 ರೂ.
  • ಡ್ರೈವಿಂಗ್ ಲೈಸೆನ್ಸ್‌ಗಾಗಿ ಮೊದಲು ನೀವು https://parivahan.gov.in ಗೆ ಅರ್ಜಿ ಸಲ್ಲಿಸಿ. ವೆಬ್ ಪೋರ್ಟಲ್ ಪ್ರವೇಶ ಪಡೆದುಕೊಳ್ಳಿ
  • ಮುಖಪುಟದಲ್ಲಿ “ಚಾಲನಾ ಪರವಾನಗಿ ಅಪ್ಲಿಕೇಶನ್” ಆಯ್ಕೆಯನ್ನು ಕ್ಲಿಕ್ ಮಾಡಿ.
  • ತಕ್ಷಣ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.
  • ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಮೂದಿಸಬೇಕು.
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
  • ಅಲ್ಲಿನ ಸೂಚನೆಗಳ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕು.
  • ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
  • ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅಗತ್ಯ ದಾಖಲೆಗಳೊಂದಿಗೆ RTO ಕಚೇರಿಗೆ ಹೋಗಿ.
  • ನಿಮ್ಮ ಚಾಲನಾ ಕೌಶಲ್ಯದ ಪುರಾವೆಯನ್ನು RTO ಗೆ ತೋರಿಸಬೇಕು.
  • ನಿಮ್ಮ ಚಾಲನಾ ಕೌಶಲ್ಯವು ಪರಿಪೂರ್ಣವಾಗಿದ್ದರೆ, ಚಾಲನಾ ಪರವಾನಗಿ ನೀಡಲಾಗುತ್ತದೆ.

ದಂಡಗಳವಿವರ: ಹೊಸ ನಿಯಮಗಳ ಅಡಿಯಲ್ಲಿ ಸುಮಾರು 9 ಲಕ್ಷ ಹಳೆಯ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ರದ್ದುಗೊಳಿಸಲಾಗುವುದು. ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವವರಿಗೆ 1000 ರೂ.ನಿಂದ 2000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ 25 ಸಾವಿರ ರೂ. ಇದಲ್ಲದೇ, ವಾಹನ ಮಾಲೀಕರ ಡ್ರೈವಿಂಗ್ ನೋಂದಣಿ ಕಾರ್ಡ್ ಅನ್ನು ರದ್ದುಗೊಳಿಸುತ್ತಾರೆ. ಸಿಕ್ಕಿಬಿದ್ದ ಅಪ್ರಾಪ್ತರಿಗೆ 25 ವರ್ಷ ವಯಸ್ಸಾಗುವವರೆಗೆ ಚಾಲನಾ ಪರವಾನಗಿ ನೀಡಲಾಗುವುದಿಲ್ಲ.


Spread the love

About Laxminews 24x7

Check Also

ನಟ ದರ್ಶನ್ & ಗ್ಯಾಂಗ್ ನಿಂದ 10 ಮೊಬೈಲ್ , 30 ಲಕ್ಷ ಹಣ ಜಪ್ತಿ..!

Spread the love ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 10 ಮೊಬೈಲ್ , 30 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ