Breaking News
Home / ಜಿಲ್ಲೆ / ಬೆಂಗಳೂರು / ಮೈಸೂರು: ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್​ಐ ಪುತ್ರನ ವಶಕ್ಕೆ ಪಡೆದ ಪೊಲೀಸರು

ಮೈಸೂರು: ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್​ಐ ಪುತ್ರನ ವಶಕ್ಕೆ ಪಡೆದ ಪೊಲೀಸರು

Spread the love

ಮೈಸೂರು: ನಗರದ ರಿಂಗ್ ರಸ್ತೆ ಮತ್ತು ರಾಜೀವ್ ಗಾಂಧಿ ನಗರದ ರಸ್ತೆಗಳಲ್ಲಿ ಪಿಎಸ್‌ಐ ಪುತ್ರನೊಬ್ಬ ವ್ಹೀಲಿಂಗ್ ಮಾಡಿದ್ದು, ಈ ಸಂಬಂಧ ನಗರದ ಸಿದ್ದಾರ್ಥನಗರ ಸಂಚಾರ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ಉದಯಗಿರಿ ನಿವಾಸಿಯಾದ ಪಿಎಸ್‌ಐಯೊಬ್ಬರ ಪುತ್ರನಾಗಿದ್ದಾನೆ. ಈತ ನಗರದ ರಿಂಗ್ ರಸ್ತೆ ಮತ್ತು ರಾಜೀವ್ ನಗರದ ಪ್ರಮುಖ ರಸ್ತೆಗಳಲ್ಲಿ ತನ್ನ ಬೈಕ್​ನಲ್ಲಿ ವ್ಹೀಲಿಂಗ್ ಮಾಡಿದ್ದಾನೆ. ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳ್ಳಿ ಹಂಚಿಕೊಂಡಿದ್ದು ವಿಡಿಯೋ ಆಧರಿಸಿ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಿನಾಂಕ 19.08.2023 ರಂದು ಮಧ್ಯಾಹ್ನ 2.30 ರಿಂದ 03.00 ಗಂಟೆ ಸಮಯದಲ್ಲಿ, ಸೈಯದ್ ಐಮಾನ್ ಹೆಲ್ಮೆಟ್ ಅನ್ನು ಧರಿಸದೇ, ರಿಂಗ್ ರಸ್ತೆಯಲ್ಲಿ ಆರ್.ಟಿ.ಒ ಕಡೆಯಿಂದ ರಾಜೀವ್ ನಗರ ವಾಟರ್ ಟ್ಯಾಂಕ್ ವರೆಗೂ ಸಂಚಾರಿ ನಿಯಮ ಉಲ್ಲಂಘಿಸಿ ನಿರ್ಲಕ್ಷ್ಯತೆಯಿಂದ ಮಾನವ ಜೀವಕ್ಕೆ ಮತ್ತು ಇತರ ವಾಹನ ಸಂಚಾರಕ್ಕೆ ತೊಂದರೆಯುಂಟಾಗುವ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿಯಾಗಿ ಸ್ಕೂಟರ್ ಅನ್ನು ಚಾಲನೆ ಮಾಡಿ, ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಸಹ ಮಾಡಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿದ್ಧಾರ್ಥ ನಗರ ಸಂಚಾರಿ ಪೊಲೀಸರು, ವ್ಹೀಲಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಆಧರಿಸಿ ಯುವಕನನ್ನು ವಶಕ್ಕೆ ಕಾರ್ಯಾಚರಣೆ ನಡೆಸಿದ್ದರು. ಅದರಂತೆ ಸ್ಕೂಟರ್ ಮತ್ತು ಸವಾರನನ್ನು ಪತ್ತೆ ಮಾಡಿ ಬೈಕ್ ಮತ್ತು ರೈಡರ್​ನನ್ನು ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.


Spread the love

About Laxminews 24x7

Check Also

ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ

Spread the love ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ