Breaking News
Home / ಜಿಲ್ಲೆ / ಬೆಳಗಾವಿ / ಈ ಬಾರಿ ಹುಕ್ಕೇರಿ ಮತಕ್ಷೇತ್ರದ ಶಾಸಕ ಯಾರಾಗ್ತಾರೆ?

ಈ ಬಾರಿ ಹುಕ್ಕೇರಿ ಮತಕ್ಷೇತ್ರದ ಶಾಸಕ ಯಾರಾಗ್ತಾರೆ?

Spread the love

ಈ ಬಾರಿ ಹುಕ್ಕೇರಿ ಮತಕ್ಷೇತ್ರದ ಶಾಸಕ ಯಾರಾಗ್ತಾರೆ ಎಂದು ಜನ ಎದುರು ನೋಡುತ್ತಿದ್ದಾರೆ, ಉತ್ತರ ಕರ್ನಾಟಕದ ಬಲಿಷ್ಟ ನಾಯಕ ಉಮೇಶ್ ಕತ್ತಿ ನಿಧನದಿಂದ ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆ ಈ ಬಾರಿ ಕುತುಹಲ ಕೇರಳಿಸಿದೆ.

ಹುಕ್ಕೇರಿ ಮತಕ್ಷೇತ್ರದಲ್ಲಿ ಯಾವದೇ ಪಕ್ಷದ ಮೇಲಿನ ಚುನಾವಣೆ ಜರುಗಿದ ಉದಾಹರಣೆಗಳಿಲ್ಲಾ, ಉಮೇಶ್ ಕತ್ತಿ ಯಾವಪಕ್ಷದಿಂದ ಸ್ಪರ್ಧೆ ಮಾಡುತ್ತಾರೋ ಅದೆ ಗೆಲವು ಪಡೆಯುತ್ತಿತ್ತು ಆದರೆ ಉಮೇಶ್ ಕತ್ತಿ ನಿಧನದಿಂದ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಚಟುವಟುಕೆಗಳು ಗದಿಗೇರಿವೆ ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಎ ಬಿ ಪಾಟೀಲ ಕಣಕ್ಕಿಳಿದು ಪ್ರಚಾರ ಕೈಕೊಂಡು ಜನರ ಬಳಿ ಹೋಗಿ ಮತ ಕೇಳುತ್ತಿದ್ದಾರೆ. ಕೆಲ ಯುವಕರ ಗುಂಪು ಮತ್ತು ಕಾಂಗ್ರೆಸ್ ಪುರಸಭೆ ಸದಸ್ಯರು ಗುಂಪು ಗುಂಪಾಗಿ ಗ್ರಾಮಗಳಿಗೆ ತೆರಳಿ ಪ್ರಚಾರ ಕೈಗೊಂಡಿದ್ದಾರೆ.

 

ಭಾರತೀಯ ಜನತಾ ಪಕ್ಷದಿಂದ ಈಗಾಗಲೇ ಉಮೇಶ್ ಕತ್ತಿ ಚಿರಂಜಿವಿ ನಿಖಿಲ್ ಕತ್ತಿ ಹಾಗೂ ಸಹೋದರ ರಮೇಶ ಕತ್ತಿ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಮಾಡುತ್ತಿದ್ದಾರೆ ಆದರೆ ಬಿ ಜೆ ಪಿ ಯಿಂದ ಅಧಿಕೃತ ಅಭ್ಯರ್ಥಿ ಘೋಷಣೆ ಆಗಿಲ್ಲ ಆದರೆ ಕತ್ತಿ ಮನೆತನದ ಯಾರಿಗೆ ಟಿಕೆಟ್ ಸಿಕ್ಕರೂ ಆಶಿರ್ವಾದ ಮಾಡಬೇಕೆಂದು ಪ್ರತಿ ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಈ ಎಲ್ಲಾ ಬೆಳವಣೆಗೆ ನಡುವೆ ಮಾಜಿ ಸಚಿವ ಶಶಿಕಾಂತ ನಾಯಿಕ ತೆರೆಮರೆಯಲ್ಲಿ ಬಿ ಜೆ ಪಿ ಯ ರಾಷ್ಟ್ರ ಮಟ್ಟದ ಮುಖಂಡರ ಸಂಪರ್ಕಮಾಡಿ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ.

ಅದೆ ರೀತಿ ಚಿಕ್ಕೋಡಿ ಜಿಲ್ಲಾ ಅದ್ಯಕ್ಷ ರಾಜೇಶ ನೆರ್ಲಿ ಜೋಲ್ಲೆ ಗ್ರುಪ್ ಸಹಕಾರದಿಂದ ಹುಕ್ಕೇರಿ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಎಪ್ರಿಲ್ 10 ನಂತರ ಸ್ಪಷ್ಟ ಬಿ ಜೆ ಪಿ ಅಭ್ಯರ್ಥಿ ಘೋಷಣೆಯಾಗಲಿದೆ.

ಏನೆ ಆದರೂ ಹುಕ್ಕೇರಿ ಕ್ಷೇತ್ರದಲ್ಲಿ ಈ ಬಾರಿ ಬಿ ಜೆ ಪಿ ಮತ್ತು ಕಾಂಗ್ರೆಸ್ ಪಕ್ಷಗಳು ನೇರ ಹಣಾಹಣಿ ನಡೆಸಲಿವೆ.
ಕ್ಷೇತ್ರದಲ್ಲಿ ಜೆ ಡಿ ಎಸ್ ಪಕ್ಷದಿಂದ ಮಾಜಿ ಪುರಸಭೆ ಸದಸ್ಯೆ ಶರೀಫಾ ನದಾಫ್ ಟಿಕೆಟ್ ಕೇಳಿದ್ದಾರೆ ಹುಕ್ಕೇರಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೆನೆ ಬಿ ಜೆ ಪಿ ಪಕ್ಷದ ಒಳ ಜಗಳದಿಂದಾಗಿ ಜೆಡಿಎಸ್ ಪಕ್ಷಕ್ಕೆ ಲಾಭವಾಗಲಿದೆ ಎನ್ನುತ್ತಾರೆ ಶರಿಫಾ ನದಾಫ್.

ಅದರಂತೆ ನಿವೃತ್ತ ಪೋಲಿಸ್ ಉಪ ಅಧೀಕ್ಷಕ ಗಣಪತಿ ಗುಡಾಜ ಸಹ ರೈತ ಸಂಘದ ಮುಖಂಡರ ಸಂಪರ್ಕದಿಂದ ಜೆ ಡಿ ಎಸ್ ಪ್ರಾಥಮಿಕ ಸದಸ್ಯತ್ವ ಪಡೆದು ಪಕ್ಷಕ್ಕೆ ಒಂದು ಲಕ್ಷ ರೂಪಾಯಿ ನೀಡಿ ಟಿಕೆಟ್ ಕೇಳಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ಈ ಸಲದ ವಿಧಾನಸಭೆ ಚುನಾವಣೆ ಹುಕ್ಕೇರಿ ಕ್ಷೇತ್ರದ ಮತದಾರ ಪ್ರಭುಗಳು ಯಾರಿಗೆ ಮಣೆ ಹಾಕುತ್ತಾರೆ ಎಂದು ಕಾದು ನೋಡಬೇಕಾಗಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ