Breaking News
Home / ಜಿಲ್ಲೆ / ಹಾವೇರಿ / ಅಂಬಲಿ ಹಳಸಿ ಕಂಬಳಿ ಬಿಸಿತಲೆ ಪರಾಕ್ ಎಂದು ಕಾರ್ಣಿಕ ನುಡಿದ ಗೊರವಯ್ಯ; ರೈತರು ಖುಷ್, ರಾಜಕಾರಣಿಗಳಿಗೆ ಢವ ಢವ

ಅಂಬಲಿ ಹಳಸಿ ಕಂಬಳಿ ಬಿಸಿತಲೆ ಪರಾಕ್ ಎಂದು ಕಾರ್ಣಿಕ ನುಡಿದ ಗೊರವಯ್ಯ; ರೈತರು ಖುಷ್, ರಾಜಕಾರಣಿಗಳಿಗೆ ಢವ ಢವ

Spread the love

ಹಾವೇರಿ: ರಾಜ್ಯದಲ್ಲಿ ತೀವ್ರ ಕೂತುಹಲ ಕೆರಳಿಸಿದ್ದ ಈ ಬಾರಿಯ ಮೈಲಾರ ಕಾರ್ಣಿಕೋತ್ಸವವನ್ನು (Mailara Karnikotsva) ಮಂಗಳವಾರ ಗೊರವಯ್ಯ ನುಡಿದಿದ್ದಾರೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್ ಎಂಬ ದೈವನುಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಅನ್ನದಾತರಿಗೆಲ್ಲಾ (Farmers) ಆನಂದ ತಂದಿದ್ದರೆ, ರಾಜಕೀಯ ಪಕ್ಷಗಳಲ್ಲಿ (Political Parties) ಚರ್ಚೆ ಹುಟ್ಟು ಹಾಕಿದೆ.

ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಹೊಂದಿರುವ ಐತಿಹಾಸಿಕ ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ ಅದ್ದೂರಿಯಾಗಿ ಜರುಗಿತು. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ (Mailar, Huvina hadagali) ಗ್ರಾಮದಲ್ಲಿ ಭಂಡಾರದ ಒಡೆಯ ದೈವವಾಣಿಯನ್ನು ಲಕ್ಷಾಂತರ ಜನರು ಆಲಿಸಿದರು‌.

ಭರತ ಹುಣ್ಣಿಮೆ ನಂತರ ಎರಡು ದಿನಗಳ ಬಳಿಕ 11 ದಿನಗಳ ಉಪವಾಸ ಇದ್ದು, ಗೊರವಯ್ಯ ಕಾರ್ಣಿಕ ನುಡಿಯನ್ನು ಹೇಳಿದ್ದಾರೆ.

14 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್ ಎಂದಾಗ ನೇರಿದಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಕಾರ್ಣಿಕದ ಬಳಿಕ ವಿಶ್ಲೇಷಣೆ

ಇನ್ನೂ ಕಾರ್ಣಿಕ ನುಡಿ ಆಲಿಸಿದ ನಂತರ ಲಕ್ಷಾಂತರ ಭಕ್ತರ ಮನದಲ್ಲಿ ಮೂಡಿದ ಪ್ರಶ್ನೆ ಒಂದೇ, ಅದು ಈ ದೈವವಾಣಿಯ ಅರ್ಥವೇನೂ ಅಂತ. ಹೌದು ಡೆಂಕಣಮರಡಿಯಲ್ಲಿ ಗೊರವಯ್ಯ ಹೇಳಿದ ಕಾರ್ಣಿಕ ರೈತರಿಗೂ ಹಾಗೂ ರಾಜಕೀಯ ಪಕ್ಷಗಳಿಗೂ ಆಶಾದಾಯಕ ಮೂಡಿಸಿದೆ.

ಭಂಡಾರ ನುಡಿ ಆಲಿಸಿದ ಲಕ್ಷಾಂತರ ಭಕ್ತರೆಲ್ಲಾ ಸಂತಸಪಟ್ಟರೆ, ರೈತರು ಆನಂದಕ್ಕೆ ಪಾರವೇ ಇಲ್ಲದಾಗಿತ್ತು. ಕಾರಣ ಈ ಬಾರಿ ಮಳೆ ಹೆಚ್ಚಾಗುತ್ತದೆ. ಬೆಳೆಯೂ ಕೂಡಾ ಚನ್ನಾಗಿ ಬರುತ್ತದೆ. ಅತಿವೃಷ್ಟಿಯಾದರೂ ರೈತರೆಲ್ಲಾ ಸಮೃದ್ಧವಾಗುತ್ತಾರೆ ಎಂದು ಅರ್ಥೈಸಿಲಾಗಿದೆ.

ರಾಜಕೀಯದಲ್ಲಿ ಹೊಸ ಚರ್ಚೆ

ಇನ್ನೂ ರಾಜಕೀಯವಾಗಿ ಬಹಳ ಅಚ್ಚರಿ ಸಂಗತಿ ಹೊರಬಿದ್ದಿದ್ದು, ನಿಷ್ಠೆ ಹಾಗೂ ಪ್ರಾಮಾಣಿಕ ನಾಯಕ ಈ ರಾಜ್ಯದಲ್ಲಿ ಸಿಎಂ ಆಗ್ತಾರೆ ಎಂದು ಧರ್ಮದರ್ಶಿಗಳು ಹೇಳಿದ್ದಾರೆ. ಈ ವಿಶ್ಲೇಷಣೆಯೂ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದು ಏನಾಗುತ್ತೋ ಎಂದು ಕೂತುಹಲ ಇರಿಸಿದಂತಾಗಿದೆ.


Spread the love

About Laxminews 24x7

Check Also

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿ ಕೆ ಶಿವಕುಮಾರ್ ಶಾಸಕರಿಗೆ ನೀಡಿರುವ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

Spread the love ಹಾವೇರಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ವಿಚಾರದಲ್ಲಿ, ಆಂತರಿಕ ವಿಚಾರದಲ್ಲಿ ಹೇಳಿಕೆ ನೀಡದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ