Breaking News
Home / ರಾಜಕೀಯ / ಅಂಜುಮನ್ ಶಾಲೆಯ ಲ್ಲಿ ಫುಡ್ ಫೆಸ್ಟಿವಲ್

ಅಂಜುಮನ್ ಶಾಲೆಯ ಲ್ಲಿ ಫುಡ್ ಫೆಸ್ಟಿವಲ್

Spread the love

ವಿವಿಧ ಬಗೆಯ ಖಾದ್ಯಗಳು, ಆಹಾರ ಪ್ರೀಯರಿಗೆ ಮದ ನೀಡುತ್ತಿದ್ದರೆ, ರುಚಿ‌ ರುಚಿಯಾದ ಆಹಾರ ಸೇವಿಸಿ ಖುಷಿ ಪಟ್ಟ ಜನರಿಗೆ ಪಾರವೇ ಇರಲಿಲ್ಲ.

ಬೆಳಗಾವಿ ನಗರದ ಅಂಜುಮನ್ ಸಂಸ್ಥೆಯ ಡೇಟ್ ಪಲ್ಮ ಶಾಲೆಯಲ್ಲಿ ಆಹಾರ ‌ಮೇಳವನ್ನು  ಬುಧವಾರ ಆಯೋಜನೆ ಮಾಡಲಾಗಿತ್ತು.

ಅಂಜುಮನ್ ಸಭಾಂಗಣದಲ್ಲಿ ಆಯೋಜಿಸದ ಆಹಾರ ಮೇಳದಲ್ಲಿ ಸುಮಾರು ಮೂರನೂರು ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭಾಗವಹಿಸಿ ರುಚಿ ರುಚಿ ತಿಂಡಿಗಳನ್ನು ಪ್ರದರ್ಶನಕ್ಕೆ ಇಟ್ಟು ಮಾರಾಟ ಮಾಡಲಾಯಿತು.

ಅಂಜುಮನ್ ಅಧ್ಯಕ್ಷ ರಾಜು ಸೇಠ್ ಈ ಮೇಳವನ್ನು ಉದ್ಘಾಟಿಸಿದರು. ಪ್ರತಿ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿ ಇರುವ ಪಾನಿಪುರಿ, ಶೇವಪುರಿ, ಸ್ಯಾಂಡ್ವಿಚ್, ವಡಾಪಾವ್, ಪಿಜ್ಜಾ, ಬರ್ಗರ್, ಜ್ಯೂಸ್ ಹಾಗೂ ವೆಜ್ ಮತ್ತು ನಾನ್ ವೆಜ್ 50 ಕಿಂತು ಹೆಚ್ಚು ಪದಾರ್ಥಗಳು ವಿದ್ಯಾರ್ಥಿಗಳು ಸ್ವಂತ ಅಡುಗೆ ಮಾಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಈ ವೇಳೆ ಮಾತನಾಡಿ ರಾಜು ಸೇಠ್ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆಧುನಿಕ ಪರಂಪರೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಇದರಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗುತ್ತದೆ ಎಂದರು.

ಈ ವೇಳೆ ಪ್ರಾಂಶುಪಾಲ ಸಮೀರ್ ಮಾತನಾಡಿ, ವಿದ್ಯಾರ್ಥಿ ಹಾಗೂ ಪಾಲಕರು ಬಹಳ ಉತ್ಸಾಹದಿಂದ ಈ ಆಹಾರ ಮೇಳದಲ್ಲಿ ಭಾಗಿಯಾಗಿದ್ದಾರೆ. ಬರುವ ಮುಂದಿನ ದಿನ ಮಾನದಲ್ಲಿ ಇಂತಹ ಕಾರ್ಯಕ್ರಮ ಮಾಡಲಾಗುವದು ಎಂದು ಹೇಳಿದರು.


Spread the love

About Laxminews 24x7

Check Also

ಬೀದಿನಾಯಿ ದಾಳಿ: ಮಹಿಳೆ ಸಾವು

Spread the love ಗುಬ್ಬಿ: ಬೀದಿನಾಯಿ ದಾಳಿಗೆ ತಾಲ್ಲೂಕಿನ ಕಡಬ ಹೋಬಳಿ, ಕಲ್ಲೂರು ಗ್ರಾಮದ (65) ವೃದ್ಧೆ ಗಂಗಮ್ಮ ಭಾನುವಾರ ತಡರಾತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ