Breaking News
Home / ಜಿಲ್ಲೆ / ಬಳ್ಳಾರಿ / ಶೀಘ್ರವೇ 150 ಕ್ಷೇತ್ರಗಳ ಟಿಕೆಟ್‌ ಘೋಷಣೆ: ಡಿ.ಕೆ.ಶಿವಕುಮಾರ್‌

ಶೀಘ್ರವೇ 150 ಕ್ಷೇತ್ರಗಳ ಟಿಕೆಟ್‌ ಘೋಷಣೆ: ಡಿ.ಕೆ.ಶಿವಕುಮಾರ್‌

Spread the love

ಳ್ಳಾರಿ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ 150 ಜನರಿಗೆ ಮೊದಲೇ ಟಿಕೆಟ್‌ ಘೋಷಣೆ ಮಾಡುವ ಕಾರ್ಯ ಅಂತಿಮಘಟ್ಟ ತಲುಪಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ತಾಲೂಕಿನ ಮೋಕಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಪಾದಯಾತ್ರೆಯಲ್ಲಿ ಕೈಗೊಂಡ ಸೇವೆ, ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕ, ಪಕ್ಷದ ನಿಷ್ಠೆ ಸೇರಿ ಹಲವು ಮಾನದಂಡಗಳನ್ನು ಪರಿಗಣಿಸುವುದರ ಜತೆಗೆ ಹೊಸ ಮುಖಗಳಿಗೂ ಈ ಬಾರಿ ಟಿಕೆಟ್‌ ನೀಡಲಾಗುವುದು.

ಈ ಕುರಿತ ಸರ್ವೇ ವರದಿಗಳು ಕೈಸೇರಿದ್ದು, ಶೀಘ್ರದಲ್ಲೇ 150 ಜನರಿಗೆ ಮೊದಲೇ ಟಿಕೆಟ್‌ ಘೋಷಣೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ರಾಹುಲ್‌ ಗಾಂಧಿ ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಭಾನುವಾರ ಆಂಧ್ರದ ಗಡಿ ತಲುಪಲಿದೆ. ನಂತರ ಮಂತ್ರಾಲಯಕ್ಕೆ ತೆರಳಲಿದೆ. ಅಲ್ಲಿ ಪುನಃ ಪಾಲ್ಗೊಳ್ಳುತ್ತೇನೆ. ಪಾದಯಾತ್ರೆ ಯಶಸ್ಸು ನೋಡಿ ಬಿಜೆಪಿಗರಿಗೆ ತಡೆದುಕೊಳ್ಳಲಾಗದೆ ಜನರನ್ನು ಹಣಕೊಟ್ಟು ಕರೆಸಿದ್ದಾರೆ ಎನ್ನುತ್ತಿದ್ದಾರೆ. ಇದು ಸುಳ್ಳು. ಜನ ಬಿಜೆಪಿ ಆಡಳಿತದ ಬೆಲೆ ಏರಿಕೆ ನೀತಿಯಿಂದ ಬೇಸತ್ತು ಪಾದಯಾತ್ರೆಗೆ ಬೆಂಬಲಿಸಿದ್ದಾರೆ.

ನಮಗೆ ಈ ಬಾರಿ ಜನಾಶೀರ್ವಾದ ಖಚಿತ. 150 ಸೀಟು ಗೆಲ್ಲುತೇವೆ. ರಾಹುಲ್‌ ಗಾಂಧಿ ಹಾಗೂ ನನ್ನ ಬಗ್ಗೆ ಶ್ರೀರಾಮುಲು ಅವರಾಗಲಿ, ಬಿಜೆಪಿಯ ಯಾರೇ ಏನೇ ಮಾತಾಡಲಿ ಜನ ನಮ್ಮ ಕಡೆ ಇದ್ದಾರೆ ಅಷ್ಟು ಸಾಕು ಎಂದರು.


Spread the love

About Laxminews 24x7

Check Also

ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ಸಿದ್ಧ: ಸೋಮಶೇಖರ್ ರೆಡ್ಡಿ

Spread the love ಬಳ್ಳಾರಿ: ಹೊಸ ಪಕ್ಷವನ್ನು ಸ್ಥಾಪಿಸಿರುವ ಜನಾರ್ದನ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಅಸಮಾಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ