Breaking News
Home / ರಾಜಕೀಯ / ಹಿರೋ ಆದವನು ಜಿರೋ ಆಗುತ್ತಾನೆ. ಜಿರೋ ಇದ್ದವನು ಹಿರೋ ಆಗುತ್ತಾನೆ. ಯಾವಾಗಲೂ ಹಿರೋ ಆಗಿ ಉಳಿಯುವವರು ಜನಸಾಮಾನ್ಯರು: ಲಕ್ಷ್ಮೀ ಹೆಬ್ಬಾಳ್ಕರ್

ಹಿರೋ ಆದವನು ಜಿರೋ ಆಗುತ್ತಾನೆ. ಜಿರೋ ಇದ್ದವನು ಹಿರೋ ಆಗುತ್ತಾನೆ. ಯಾವಾಗಲೂ ಹಿರೋ ಆಗಿ ಉಳಿಯುವವರು ಜನಸಾಮಾನ್ಯರು: ಲಕ್ಷ್ಮೀ ಹೆಬ್ಬಾಳ್ಕರ್

Spread the love

ಮುಂಚೆಯಿಂದಲೂ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣೆಗಳು ಬಂದಂತಹ ಸಂದರ್ಭದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿ, ಬಿಜೆಪಿ ಪರವಾಗಿ ವಾತಾವರಣ ಸೃಷ್ಟಿ ಮಾಡಿ, ಜನರ ಭಾವನೆಗಳ ಜೊತೆಗೆ ಚೆಲ್ಲಾಟ ಆಡುವುದು ಬಿಜೆಪಿಯವರಿಗೆ ರೂಢಿಯಾಗಿ ಬಿಟ್ಟಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷ ಜನರಿಗೆ ಬದುಕನ್ನು ಕಟ್ಟಿ ಕೊಟ್ಟರೆ ಬಿಜೆಪಿಯವರು ಭಾವನೆಗಳನ್ನು ಕಟ್ಟಿ ಕೊಡುತ್ತದೆ. ನಾವು ಬದುಕು, ಜೀವನ ಅಂತಾ ನೋಡುತ್ತೇವೆ. ಅವರು ಜನರ ಭಾವನೆಗಳ ಜೊತೆಗೆ ಚೆಲ್ಲಾಟ ಆಡುತ್ತಾರೆ. ಇದು ಮುಂಚೆಯಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆಯಾಗಿದೆ. ಜನಸಾಮಾನ್ಯರು ಸಾಯುತ್ತಿದ್ದರೂ ಇವರು ಮಾತ್ರ ರಾಜಕೀಯ ಮಾಡುತ್ತಿದ್ದಾರೆ. 2023ರ ಚುನಾವಣೆ ಫಲಿತಾಂಶ ಇವರಿಗೆ ತಕ್ಕ ಪಾಠ ಕಲಿಸುತ್ತದೆ ಎಂದರು.

ಕಾಂಗ್ರೆಸ್‍ನಲ್ಲಿ ಒಳ ಜಗಳವಿದೆ ಎಂಬ ನಳೀನಕುಮಾರ್ ಕಟೀಲ್ ಟೀಕೆಗೆ ಕಟೀಲ್ ಅಣ್ಣನವರು ಬಹಳ ಹಿರಿಯರು, ರಾಜ್ಯಾಧ್ಯಕ್ಷರಿದ್ದಾರೆ, ಇಡೀ ದೇಶವನ್ನು ಸುತ್ತುತ್ತಾರೆ. ಅವರ ಬಗ್ಗೆ ಕಮೆಂಟ್ ಮಾಡುವಷ್ಟು ದೊಡ್ಡವಳು ನಾನಲ್ಲ. ಅವರ ಪಕ್ಷದಲ್ಲಿ ಇರೋದನ್ನು ಅವರು ಸರಿ ಮಾಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಸರಿ ಮಾಡಿಕೊಳ್ಳುವುದಾಗಲಿ, ಸರಿ ಮಾಡಿಕೊಳ್ಳುವುದಾಗಲಿ, ಚರ್ಚೆ ಮಾಡುವುದು ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ನಾಯಕರು ಸರಿ ಆಗಿದ್ದಾರೆ. ಯಾವತ್ತೂ ಒಳಜಗಳ ಇಲ್ಲ. ಕಾಂಗ್ರೆಸ್ ಪಕ್ಷ ಎಂದರೆ ಸಮುದ್ರ ಇದ್ದ ಹಾಗೆ. ಕೂಡಿರುವ ಅಣ್ಣತಮ್ಮಂದಿರೇ ಜಗಳ ಮಾಡಿಕೊಳ್ಳುತ್ತಾರೆ. ಹೀಗಾಗಿ ನಾವು ನಮ್ಮ ಮನೆಯನ್ನು ಸರಿ ಮಾಡಿಕೊಳ್ಳುತ್ತೇವೆ. ಅವರು ತಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಲಿ ಎಂದು ಟಾಂಗ್ ಕೊಟ್ಟರು.

ರಾಜಕಾರಣ ಆಗಲಿ ಯಾವುದೇ ಕ್ಷೇತ್ರದಲ್ಲಿಯಾಗಲಿ ಹಿರೋ ಆದವನು ಜಿರೋ ಆಗುತ್ತಾನೆ. ಜಿರೋ ಇದ್ದವನು ಹಿರೋ ಆಗುತ್ತಾನೆ. ಯಾವಾಗಲೂ ಹಿರೋ ಆಗಿ ಉಳಿಯುವವರು ಜನಸಾಮಾನ್ಯರು


Spread the love

About Laxminews 24x7

Check Also

ಕಲ್ಲಿದ್ದಲು ಆಮದು ಶೇ 13.2ರಷ್ಟು ಹೆಚ್ಚಳ

Spread the love ನವದೆಹಲಿ: ಏಪ್ರಿಲ್‌ ತಿಂಗಳಲ್ಲಿ 2.61 ಕೋಟಿ ಟನ್‌ ಕಲ್ಲಿದ್ದಲು ದೇಶಕ್ಕೆ ಆಮದಾಗಿದೆ ಎಂದು ಇ-ವಾಣಿಜ್ಯ ಸಂಸ್ಥೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ