Breaking News
Home / ಜಿಲ್ಲೆ / ಬೆಂಗಳೂರು / ಚಿತ್ರರಂಗದಲ್ಲಿ ವಾಮ ಮಾರ್ಗದಲ್ಲಿ ಗೆದ್ದವರೇ ಡ್ರಗ್ಸ್ ದಾಸರು: ಜಗ್ಗೇಶ್

ಚಿತ್ರರಂಗದಲ್ಲಿ ವಾಮ ಮಾರ್ಗದಲ್ಲಿ ಗೆದ್ದವರೇ ಡ್ರಗ್ಸ್ ದಾಸರು: ಜಗ್ಗೇಶ್

Spread the love

ಬೆಂಗಳೂರು: ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೇ ನಶೆಹಾದರದ ದಾಸರು. ಉಪ್ಪುತಿಂದವ ನೀರು ಕುಡಿಯುವ ಎಂದು ಜಗ್ಗೇಶ್ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.

ಸ್ಯಾಂಡಲ್‍ವುಡ್‍ನ ಕೆಲ ಕಲಾವಿದರಿಗೆ ಡ್ರಗ್ಸ್ ಪೂರೈಕೆ ವಿಚಾರವಾಗಿ ನಟ ಜಗ್ಗೇಶ್ ಅವರು ಆಕ್ರೋಶ ಭರಿತವಾಗಿ ಟ್ವೀಟ್ ಮಾಡುವ ಮೂಲಕ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿದರು.

“ಸರಿಯಾಗಿ ಬಾಳಿಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೇ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ, ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರೂ ನಶೆ, ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ. ಏಕ್ ಮಾರ್ ದೋ ತುಕಡ, ತಪ್ಪು ಮಾಡಿದವರ ಬೆತ್ತಲೆ ಮಾಡಿ ಆಗಲಾದರು ಜನಕ್ಕೆ ಅರಿವಾಗಲಿ” ಎಂದು ಟ್ವಿಟ್ಟರಿಯಲ್ಲಿ ಆಕ್ರೋಶದಿಂದ ಬರೆದುಕೊಂಡಿದ್ದಾರೆ.

“ಶ್ರೇಷ್ಠ ಮನುಜನ್ಮ, ಅದು ನಶ್ವರ ಸತ್ಯ. ಆದರೂ ಆ ನಶ್ವರದೇಹ ನಶಿಸುವ ಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ ಹಾದರದ ಹಿಂದೆ ಬರಿ ಸಿನಿಮಾ ಅಲ್ಲಾ ಸಮಾಜವೇ ಆಕರ್ಷಶಿತ ಆಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ. ಅವರ ಹೆಜ್ಜೆ ತಪ್ಪುದಾರಿ ತುಳಿಯದು. ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೇ ನಶೆಹಾದರದ ದಾಸರು. ಉಪ್ಪುತಿಂದವ ನೀರು ಕುಡಿಯುವ” ಎಂದು ಜಗ್ಗೇಶ್ ಹೇಳಿದರು.

“ಬಲವಂತಕ್ಕೆ 2017 ಒಬ್ಬ ರಾಜಕಾರಣಿ ಪಾರ್ಟಿಗೆ ಹೋಗಿದ್ದೆ. ಅರ್ಧ ಗಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ, ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು, ಅದಕಂಡು ನಾನು ನನ್ನ ಆತ್ಮೀಯ ಯುವನಟಗೆ ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೆಕಡೆ ಇಂದಿಗೂ ನನಗೆ ಯಾರು ಕರೆಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು” ಎಂದು 2017ರಲ್ಲಿ ನಡೆದ ಘಟನೆಯ ಬಗ್ಗೆ ಹೇಳಿದ್ದಾರೆ.

 


Spread the love

About Laxminews 24x7

Check Also

ಅಂತಿಮವಾಯ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ!

Spread the loveಬೆಂಗಳೂರು, ಮಾರ್ಚ್ 12: ಲೋಕಸಭಾ ಚುನಾವಣೆಗೆ ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು 28 ಲೋಕಸಭಾ ಕೇತ್ರಗಳನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ