Breaking News
Home / new delhi / ಬೆಂಗಳೂರಿನ ಗಾಳಿಯಲ್ಲಿ ಹೆಚ್ಚುತ್ತಿರುವ ವಿಷಕಾರಿ ಭಾರಲೋಹ : ತಜ್ಞರಿಂದ ಎಚ್ಚರಿಕೆ

ಬೆಂಗಳೂರಿನ ಗಾಳಿಯಲ್ಲಿ ಹೆಚ್ಚುತ್ತಿರುವ ವಿಷಕಾರಿ ಭಾರಲೋಹ : ತಜ್ಞರಿಂದ ಎಚ್ಚರಿಕೆ

Spread the love

ಬೆಂಗಳೂರು  : ಯೋಜಿತವಲ್ಲದ ನಗರೀಕರಣ, ಹೆಚ್ಚುತ್ತಿರುವ ಇಂಧನಗಳ ಬಳಕೆ, ಕೈಗಾರಿಕೆಗಳಿಂದ ಹೊರಸೂಸುವ ವಿಷಾನಿಲಗಳು ನಗರದಲ್ಲಿ ವಾಯು ಮಾಲಿನ್ಯಕಾರಕಗಳ ಪ್ರಮಾಣವನ್ನು ಹೆಚ್ಚಿಸಿದೆ. ಇದರ ಜೊತೆಗೆ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಭಾರಲೋಹಗಳ ಪ್ರಮಾಣವೂ ನಗರದ ಗಾಳಿಯಲ್ಲಿ ಹೆಚ್ಚುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಇಂಟರ್‍ನ್ಯಾಷನಲ್ ಜರ್ನಲ್ ಆಫ್ ಪ್ಯೂರ್ ಆಂಡ್ ಅಪ್ಲೈಡ್ ರೀಸರ್ಚ್ (ಐಜೆಪಿಎಆರ್) ತನ್ನ ಅಧ್ಯಯನದಲ್ಲಿ ವರದಿಯಲ್ಲಿ ನಗರದ ಪಕ್ಷಿಗಳ ಗರಿಗಳಲ್ಲಿ ಭಾರಲೋಹಗಳನ್ನು ಪತ್ತೆಯಾಗಿರುವುದಾಗಿ ತಿಳಿಸಿದೆ. ಪ್ರಾಣಿಗಳು ಹಾಗೂ ಮನುಷ್ಯರ ಕೂದಲಿನಲ್ಲೂ ಈ ಭಾರ ಲೋಹಗಳು ಕಂಡುಬರುತ್ತಿದ್ದು, ಕಾಡ್ಮಿಯಮ್ ಮತ್ತು ಕಬ್ಬಿಣದ ಕಣಗಳು ಹೆಚ್ಚಾಗಿವೆ.

ಕ್ರೋಮಿಯಂ, ತಾಮ್ರ, ಪಾದರಸ, ಆರ್ಸೆನಿಕ್, ಕೋಬಾಲ್ಟ್, ಮ್ಯಾಂಗನೀಸ್, ಸೆಲೆನಿಯಮ್, ಸತು ಮತ್ತು ಸೀಸದಂತಹ ಜಾಡಿನಂತಹ ಅಂಶಗಳುಲ್ಲ ಲೋಹಗಳನ್ನು ಭಾರಲೋಹಗಳೆಂದು ಪರಿಗಣಿಸಲಾಗುತ್ತದೆ. ಇವು ವಿಷಕಾರಿಗಳಾಗಿದ್ದು, ಇಂತಹ ಭಾರಲೋಹಗಳನ್ನು ಉಸಿರಾಟದ ಮೂಲಕ ಸೇವಿಸುವುದರಿಂದ ಮಾನವನ ಕೇಂದ್ರ ನರಮಂಡಲವನ್ನು ಹಾನಿಗೊಳಿಸುತ್ತದೆ ಅಥವಾ ಅದರ ಕಾರ್ಯದಕ್ಷತೆಯನ್ನು ಕಡಿಮೆಗೊಳಿಸುತ್ತವೆ.

ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸಯನ್ಸ್‍ನ ಸೆಂಟರ್ ಫಾರ್ ಇಕಾಲಜಿಕಲ್ ಸಯನ್ಸ್‍ನ ಪ್ರಾಧ್ಯಾಪಕ ಡಾ. ಟಿ.ವಿ. ರಾಮಚಂದ್ರ ಅವರು ಹೇಳುವಂತೆ `ಬೆಂಗಳೂರಿನಲ್ಲಿ ಕಸ ಸುಡುವಿಕೆ, ವಾಹನ ಸಂಚಾರ ದಟ್ಟಣೆ, ಕೈಗಾರಿಕಾ ಹೊಗೆಯುಗುಳುತ್ತವೆ ಮತ್ತು ಈ ಹೊಗೆಯು ಲೋಹಗಳು, ಪ್ಲಾಸ್ಟಿಕ್, ಏರೋಸಾಲ್ಸ್‍ಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ಕ್ರೋಮಿಯಂ, ತಾಮ್ರ, ಪಾದರಸ ಮತ್ತು ಸೀಸದಂತಹ ಭಾರವಾದ ಲೋಹಗಳು ವಾತಾವರಣವನ್ನು ಸೇರಿಕೊಳ್ಳುತ್ತವೆ’.

ಐಜೆಪಿಎಆರ್ ಅಧ್ಯಯನವು ‘ವಾಯುಮಾಲಿನ್ಯದಿಂದಾಗಿ ಕೋಳಿಯ ಗರಿಯಲ್ಲಿ ಎಲ್ಲಾ 7 ಬಗೆಯ ಭಾರಲೋಹಗಳು ಸೇರಿಕೊಂಡಿರುತ್ತವೆ. ಹದ್ದಿನ ಗರಿಯಲ್ಲಿ ಕನಿಷ್ಠ ನಾಲ್ಕು ಬಗೆಯ ಭಾರಲೋಹಗಳು ಕಂಡುಬರುತ್ತವೆ ಮತ್ತು ಪಾರಿವಾಳ, ಕಾಗೆಗಳು ತಮ್ಮ ಗರಿಗಳಲ್ಲಿ ಐದು ಬಗೆಯ ಭಾರಲೋಹಗಳ ಕಣಗಳನ್ನು ಹೊತ್ತು ಸಾಗುತ್ತವೆ. ಮನುಷ್ಯ ಕೋಳಿಮಾಂಸ ಹಾಗೂ ಪಾರಿವಾಳದ ಮಾಂಸವನ್ನು ಆಹಾರವಾಗಿ ಉಪಯೋಗಿಸುವುದರಿಂದ ಅವುಗಳ ದೇಹದೊಳಕ್ಕೆ ಸೇರಿರುವ ಈ ಭಾರಲೋಹಗಳು ಮನುಷ್ಯನ ದೇಹಕ್ಕೂ ಸೇರುವ ಪರೋಕ್ಷ ಅಪಾಯವಿದೆ’ ಎಂಬುದಾಗಿ ತಿಳಿಸಿದೆ.

ಹಕ್ಕಿಗಳ ಮೇಲಿರುವ ಭಾರಲೋಹಗಳ ಗುಣಾತ್ಮಕ ವಿಶ್ಲೇಷಣೆ (ಐಜೆಪಿಎಆರ್ ಅಧ್ಯಯನ)

ಇದೇ ರೀತಿಯಾಗಿ ಕುರಿ, ದನ, ಮೇಕೆ, ಬೆಕ್ಕು ಮತ್ತು ನಾಯಿಯ ಕೂದಲುಗಳ ಮೇಲೂ ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ಇವುಗಳ ಪೈಕಿ ಕುರಿಗಳ ತುಪ್ಪಳದಲ್ಲಿ ಮಾಲಿಬ್ಡೇನಿಯಮ್ ಪತ್ತೆಯಾಗಿತ್ತು.

ಪ್ರಾಣಿಗಳ ಮೇಲಿರುವ ಭಾರಲೋಹಗಳ ಗುಣಾತ್ಮಕ ವಿಶ್ಲೇಷಣೆ (ಐಜೆಪಿಎಆರ್ ಅಧ್ಯಯನ)

ಮನುಷ್ಯರಲ್ಲಿ ಗಂಡು ಮತ್ತು ಹೆಣ್ಣಿನ ಕೂದಲನ್ನು ಬಳಸಿ ಪ್ರಾಯೋಗಿಕವಾಗಿ ಅಧ್ಯಯನ ನಡೆಸಲಾಯಿತು. ಅದರಲ್ಲಿ ಕಬ್ಬಿಣ, ಕ್ಯಾಡ್ಮಿಯಮ್, ಮೆಗ್ನೀಶಿಯಮ್ ಮತ್ತು ಸೋಡಿಯಂನಂತಹ ಸಾಮಾನ್ಯ ಭಾರಲೋಹಗಳಿರುವುದು ಕಂಡುಬಂತು. ಹೆಣ್ಣಿನ ಕೂದಲಿನಲ್ಲಿ ಪಾದರಸ ಹಾಗೂ ಗಂಡಿನ ಕೂದಲಿನಲ್ಲಿ ಸತು ಕಣಗಳಿರುವುದನ್ನೂ ಅಧ್ಯಯನ ಗುರುತಿಸಿದೆ.

ಮನುಷ್ಯರ ಮೇಲಿರುವ ಭಾರಲೋಹಗಳ ಗುಣಾತ್ಮಕ ವಿಶ್ಲೇಷಣೆ (ಐಜೆಪಿಎಆರ್ ಅಧ್ಯಯನ)

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರಲೋಹಗಳಾದ ಕಾಡ್ಮಿಯಂ, ಸೀಸ, ಪಾದರಸಗಳು ಸಾಮಾನ್ಯ ವಾಯು ಮಾಲಿನ್ಯಕಾರಕಗಳಾಗಿವೆ. ಕೈಗಾರಿಕಾ ಚಟುವಟಿಕೆಗಳ ಕಾರಣದಿಂದ ಇವು ವಾತಾವರಣವನ್ನು ಸೇರುತ್ತವೆ. ಕಡಿಮೆ ವಾತಾವರಣದ ಮಟ್ಟ ಇರುವ ಪ್ರದೇಶಗಳಲ್ಲಿನ ಮಣ್ಣು ಹಾಗೂ ನೀರಿನಲ್ಲೂ ಈ ಭಾರಲೋಹಗಳು ಸೇರಿಕೊಂಡುಬಿಡುತ್ತವೆ. ಹೀಗೆ ಮನುಷ್ಯ ಸೇವಿಸುವ ಆಹಾರಕ್ಕೂ ಇವು ಸೇರಿಕೊಂಡು ಮನುಷ್ಯನ ಮೂತ್ರಪಿಂಡ, ಮೂಳೆಗಳಿಗೂ ಹಾನಿಯೆಸಗುತ್ತವೆ. ನರಮಂಡಲದ ಅಸ್ವಸ್ಥತೆ ಹಾಗೂ ಬೆಳವಣಿಗೆಗೆ ಮಾರಕವಾಗುವ ಈ ಭಾರಲೋಹಗಳು ಅಧಿಕ ರಕ್ತದೊತ್ತಡ, ಶ್ವಾಸಕೋಶದ ಕ್ಯಾನ್ಸರ್‍ಗಳಿಗೂ ಕಾರಣವಾಗುತ್ತವೆ.

ಬೆಂಗಳೂರಿನ ಸೆಂಟರ್ ಫಾರ್ ಸಯನ್ಸ್ ಸ್ಪಿರಿಚ್ವಾಲಿಟಿ ಕೇಂದ್ರದ ಶ್ವಾಸಕೋಶಶಾಸ್ತ್ರಜ್ಞ ಡಾ. ಶಶಿಧರ ಗಂಗಯ್ಯ ಸೀಸ, ಸತು, ಪಾದರಸ, ಆರ್ಸೆನಿಕ್ ಮತ್ತು ಕ್ರೋಮಿಯಂನಂತಹ ಭಾರಲೋಹಗಳು ಯಾವುದೇ ವ್ಯಕ್ತಿಯ ಅಥವಾ ವಿಶೇಷವಾಗಿ ಮಕ್ಕಳಲ್ಲಿ ಅನುವಂಶಿಕ ಬೆಳವಣಿಗೆಯನ್ನೇ ಹಾನಿಗೊಳಿಸುತ್ತದೆ. ಇಂತಹ ಭಾರಲೋಹಗಳು ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶ, ಪೀಣ್ಯ ಕೈಗಾರಿಕಾ ಪ್ರದೇಶಗಳು ಈ ಭಾರಲೋಹಗಳ ಪ್ರಮುಖ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಡಾ. ಯಲ್ಲಪ್ಪ ರೆಡ್ಡಿ ಅವರು `ಪಾದರಸ, ಸೀಸದಂತಹ ಭಾರಲೋಹಗಳು ಸಸ್ಯಗಳು, ಪ್ರಾಣಿಗಳು, ಜಲಮೂಲಗಳು, ಮಣ್ಣಿನ ಮೇಲೂ ಪರಿಣಾಮ ಬೀರುತ್ತವೆ. ಇಂತಹ ಕೈಗಾರಿಕೆಗಳಿಗೆ ಬೆಂಗಳೂರಿನಂತಹ ವಾಸಸ್ಥಳಗಳಲ್ಲಿ ಅವಕಾಶ ಕಲ್ಪಿಸಬಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ