Breaking News
Home / ಜಿಲ್ಲೆ / ಬೆಂಗಳೂರು / ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ವ್ಯಕ್ತಿಯಕೊಲೆ

ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ವ್ಯಕ್ತಿಯಕೊಲೆ

Spread the love

ಬೆಳಗಾವಿ: ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ವ್ಯಕ್ತಿಯನ್ನು ಕೊಲೆಗೈದಿರುವ ಘಟನೆ  ಕಾಕತಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸಲ್ಲಾವುದ್ದಿನ್ ನಜೀರಸಾಬ ಪಕಾಲಿ (32)  ಕೊಲೆಯಾದ ವ್ಯಕ್ತಿ. 

ಅಮರ ಶ್ಯಾಮ ಮೇತ್ರಿ, ಅಖೀಲ ಶಿವಪ್ಪಾ ಮೇತ್ರಿ ಎಂಬ ಇಬ್ಬರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಂಬೇಡ್ಕರ್ ಗಲ್ಲಿಯ ಯುವಕರು ಬೇರೊಂದು ಯುವಕರ ಗುಂಪಿನೊಂದಿಗೆ ಗಲಾಟೆ ನಡೆದಿತ್ತು. ಆ ಸಂದರ್ಭದಲ್ಲಿ ಸಲ್ಲಾವುದ್ದಿನ್ ಜಗಳ ಬಿಡಿಸಲು ಹೋಗಿದ್ದನು. ಆ ಸಂದರ್ಭದಲ್ಲಿ  ಅಮರ ಮತ್ತು ಅಖೀಲ ಮೇತ್ರಿ ಸೇರಿ ಸಲ್ಲಾವುದ್ದಿನನ್ನು ಥಳಿಸಿದ್ದಾರೆ.

ಸಲ್ಲಾವುದ್ದಿನ್ ಕೂಡಾ ಅಖೀಲ್ ನನ್ನು ಹೊಡೆದಿದ್ದಾನೆ. ಆಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಲಕ್ಷ್ಮಣ ಸವದಿ ಟಿಕೇಟ್‌ ವಿಷಯದಲ್ಲಿ ಮುನಿಸಿಕೊಂಡಿದ್ದು ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

Spread the love ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ