Breaking News
Home / ಜಿಲ್ಲೆ / ಬೆಳಗಾವಿ / ಮೆರವಣಿಗೆ ಪಟಾಕಿ ಏನೂ ಇಲ್ಲಈ ಬಾರಿಯ ಗಣೇಶ ಉತ್ಸವ…..!ಜಿಲ್ಲಾಧಿಕಾರಿಗಳು

ಮೆರವಣಿಗೆ ಪಟಾಕಿ ಏನೂ ಇಲ್ಲಈ ಬಾರಿಯ ಗಣೇಶ ಉತ್ಸವ…..!ಜಿಲ್ಲಾಧಿಕಾರಿಗಳು

Spread the love

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೋವೀಡ್ ಹಾವಳಿ ಹೆಚ್ಚಾಗಿರುವದರಿಂದ ಈ ಬಾರಿಯ ಗಣೇಶ ಉತ್ಸವವನ್ನು ಕಟ್ಟುನಿಟ್ಟಾಗಿ ಆಚರಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಬಾರಿಯ ಸಾರ್ವಜನಿಕ ಗಣೇಶ ಮಂಡಳಿಗಳು ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡದೇ ಸಮೀಪದ ಮಂದಿರಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು,ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶನ ಮೂರ್ತಿ 4 ಫೂಟ್ ಗಿಂತ ಎತ್ತರ ಇರಬಾರದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶನ ಮೂರ್ತಿ ಎರಡು ಪೂಟ್ ಗಿಂತ ಎತ್ತರ ಇರಬಾರದು,ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜನೆ ಮಾಡುವಾಗ ಮೆರವಣಿಗೆ ಹೊರಡಿಸಬಾರದು ಎಂದು ಬೆಳಗಾವಿ ಡಿಸಿ ಆದೇಶ ಹೊರಡಿಸಬಾರದು

ಗಣೇಶ ಉತ್ಸವದ ಸಂಧರ್ಭದಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಆರತಿ ಮಾಡುವಾಗ ಸೇರಬಾರದು,ಪಟಾಕಿ ಸಿಡಿಸಬಾರದು,ಹೆಚ್ಚು ಜನ ಸೇರುವ ಭಜನೆ ಕೀರ್ತನೆ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎನ್ನುವ ಅನೇಕ ಷರತ್ತುಗಳನ್ನು ಹೇರುವ ಮೂಲಕ ಬೆಳಗಾವಿ ಜಿಲ್ಲಾಡಳಿತ ಈ ಬಾರಿಯ ಗಣೇಶ ಉತ್ಸವಕ್ಕೆ ಷರತ್ತು ಬದ್ಧ ಅವಕಾಶ ಕಲ್ಪಿಸಿದೆ


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ