Home / ಜಿಲ್ಲೆ / ಯುವ ವಕೀಲರ ಬ್ಯಾಂಕ್ ಖಾಯತೆಗೆ ತಲಾ 5 ಸಾವಿರ ಹಣ ಜಮೆ

ಯುವ ವಕೀಲರ ಬ್ಯಾಂಕ್ ಖಾಯತೆಗೆ ತಲಾ 5 ಸಾವಿರ ಹಣ ಜಮೆ

Spread the love

ಬೆಂಗಳೂರು : ಬೆಂಗಳೂರು ವಕೀಲರ ಸಂಘವು ಹಿರಿಯ ಹಾಗೂ ಇತರ ವಕೀಲರಿಂದ ದೇಣಿಗೆ ಸಂಗ್ರಹಿಸಿ, ಸಂಕಷ್ಟದಲ್ಲಿದ್ದ 368 ಅರ್ಹ ಯುವ ವಕೀಲರಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 18,40,000 ರೂ. ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಿದೆ.

ಕೊರೋನಾದ ಸಂಕಷ್ಟದ ಕಾಲದಲ್ಲಿ ಹಿರಿಯ ಹಾಗೂ ಇತರೆ ವಕೀಲರಿಂದ 19,14,501 ರೂ.ಗಳನ್ನು ದೇಣಿಗೆ ಸಂಗ್ರಹಿಸಲಾಗಿತ್ತು ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ. ಏಪ್ರಿಲ್ 6 ರಂದು ಸಂಘದ ವತಿಯಿಂದ ಕೋವಿಡ್ -19 ಲಾಕ್ಡೌನ್ ಹಿನ್ನೆಲೆಯಲ್ಲಿ ಅರ್ಹ ಯುವ ವಕೀಲರಿಗೆ ಹಣಕಾಸಿನ ನೆರವು ನೀಡಲು ಹಿರಿಯ ವಕೀಲರಾದ ಡಿ. ಎಲ್. ಎನ್. ರಾವ್ ಅವರ ನೇತೃತ್ವದಲ್ಲಿ ಎನ್ .ಎಸ್ ಸತ್ಯನಾರಾಯಣ ಗುಪ್ತ, ಎ. ಎಸ್. ಪೊ ನ್ನಪ್ಪ, ಹಾಗೂ ಕೆ.ದಿವಾರ್ಕ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ ಅರ್ಹ ಯುವ ವಕೀಲರಿಂದ ಅರ್ಜಿಗಳನ್ನು ಆಹ್ವಾನಿಸಲಾಯಿತು.

ಏಪ್ರಿಲ್ 16ರಂದು ಈ ಸಮಿತಿಯು ಸಭೆ ಸೇರಿ ಕೋವಿಡï- 19 ಹಣಕಾಸಿನ ನೆರವಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ 156 ಅರ್ಹ ಯುವ ವಕೀಲರ ಅರ್ಜಿಗಳನ್ನು ಪುರಸ್ಕರಿಸಿದ್ದು, ಮೊದಲ ಹಂತದಲ್ಲಿ ಈ 156 ಯುವ ವಕೀಲರಿಗೆ 5000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ನಂತರ ಕೋವಿಡ್ 19 ಹಣಕಾಸಿನ ನೆರವಿಗಾಗಿ ಏಪ್ರಿಲ್ 6ರ ಪ್ರಕಟಣೆಯಂತೆ ಹಣಕಾಸಿನ ನೆರವಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 19ರವರೆಗೆ ವಿಸ್ತರಿಸಲಾಯಿತು. ಈ ಅವಧಿವರೆಗೆ ಸ್ವೀಕರಿಸಿದ ಅರ್ಜಿಗಳನ್ನು ಸಮಿತಿಯು ಪರಿಶೀಲಿಸಿ 212 ಅರ್ಹ ಯುವ ವಕೀಲರಿಗೆ 5000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಏಪ್ರಿಲ್ 22ರಂದು ಹಣ ವರ್ಗಾಯಿಸಲಾಗಿದೆ.

ಸಂಘದ ಅರ್ಹ ಯುವ ವಕೀಲರಿಗೆ ಕೋವಿಡ್ -19 ಹಣಕಾಸು ನೆರವಿಗೆ ಉದಾರವಾಗಿ ಹಣಕಾಸಿನ ದೇಣಿಗೆ ನೀಡಿದ ಎಲ್ಲಾ ವಕೀಲರಿಗೆ ಸಂಘವು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಹೇಳಿದ್ದಾರೆ. ಹಿರಿಯ ವಕೀಲರಾದ ಡಿ ಎಲ್ ಎನ್ ರಾವ್ ಅವರ ನೇತೃತ್ವದ ಸಮಿತಿಯು ತಮ್ಮ ಅಮೂಲ್ಯವಾದ ಸಮಯ ಹಾಗೂ ಸಲಹೆಗಳೊಂದಿಗೆ ಈ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಬೆಂಗಳೂರು ವಕೀಲರ ಸಂಘವು ವಂದನೆಗಳನ್ನು ಅರ್ಪಿಸುತ್ತದೆ ಎಂದಿದ್ದಾರೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ