Breaking News

ಗ್ರಾಮೀಣ ಪ್ರದೇಶದಲ್ಲಿ ಕೃಷಿ

Spread the love

ಕಾಗವಾಡ ವರದಿ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೇಳ ನಡೆಸುವುದರಿಂದ ರೈತರ ಅಭಿವೃದ್ಧಿಗೆ ಪೂರಕ

.

ನಮ್ಮ ದೇಶ ಕೃಷಿ ಅವಲಂಬಿತ ಆಗಿದ್ದು ಹೊಸ ಬೆಳೆಗಳ ಮಾಹಿತಿ ನೀಡಲು ಕೃಷಿ ಮೇಳಗಳು ಅವಶ್ಯ ಎಂದು ಕವಲಗುಡ್ಡ ಅಮರೇಶ್ವರ ಮಹಾರಾಜರು ಹೇಳಿದರು.
ಅವರು ಐನಾಪುರ ಶ್ರೀ ಸಿದ್ದೇಶ್ವರ 50ನೇ ಜಾತ್ರಾ ಮಹೋತ್ಸವ ಹಾಗೂ 27ನೆಯ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶ್ರೀ ಮೇಳಗಳಿಗೆ ವಿಶೇಷ ಅನುದಾನ ನೀಡಬೇಕು ಎಂದರು.

Advertisement
ಇಂದಿನ ಯುವಕರು ಕೃಷಿ ತಿರಸ್ಕರಿಸುತ್ತಾರೆ ವೈದ್ಯ ವಿಜ್ಞಾನಿ ಅಧಿಕಾರಿ ಯಾರೇ ಆದರೂ ಅವರಿಗೆ ಅನ್ನ ಬೇಕೇ ಬೇಕು ಅದನ್ನು ಬೆಳೆಯುವನು ರೈತ ರೈತರು ತಮ್ಮ ಜಮೀನಿನಲ್ಲಿ ಸಾವಯುವ ಕೃಷಿ ಕೈಗೊಂಡು ಆರೋಗ್ಯಕರ ಪೂರ್ವಕವಾದ ಆಹಾರ ಉತ್ಪಾದಿಸಬೇಕು ಎಂದು ಹೇಳಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಮಹಾದೇವ ಚಟ್ಟಿ ಮಾತನಾಡಿ ಅಥಣಿ ರಾಯಬಾಗ ಚಿಕ್ಕೋಡಿ ತಾಲೂಕಿನ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಕಬ್ಬು ಬೆಳೆಯುತ್ತಾರೆ ರೈತರು ಪ್ರತಿ ಎಕರೆಯಲ್ಲಿ 100 ಟನ್ಗಿಂತ ಹೆಚ್ಚು ಬೆಳೆಯಲು ಪ್ರಯತ್ನಿಸುತ್ತಿದ್ದು ಈ ಸಾಧನೆಗೆ ಅಗತ್ಯ ನೆರವು ನೀಡಲಾಗುವುದೆಂದರು ಕಾರ್ಯಕ್ರಮದಲ್ಲಿ ಬಸವೇಶ್ವರ ಮಹಾರಾಜರು ಅಥಣಿ ಕಾರ್ಖಾನೆಯ ಎಂ ಡಿ ಶ್ರೀನಿವಾಸ್ ಪಾಟೀಲ್ ರಾಯಭಾಗ ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಗಾಣಿಗ ದಾದಾ ಪಾಟೀಲ್ ಶಿವ ಗೌಡ ಪಾರಶೆಟ್ಟಿ ರಾಜೇಂದ್ರ ಪೋತದಾರ ಇತರರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ,

Spread the loveಚಾಮರಾಜನಗರ: “ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುತ್ತೇವೆ” ಎಂದು ಅರಣ್ಯ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ