*ಕೂಡ್ಲಿಗಿ:ಕೊಲೆಯತ್ನ ಹಾಗೂ ದರೋಡೆಗೆ ಯತ್ನ ಆರೋಪಿ-ತಾಪಂ ಅಧ್ಯಕ್ಷ ವೆಂಕಟೇಶನಾಯ್ಕ ಬಳ್ಳಾರಿ ಜೈಲಿಗೆ..ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಪಂ ಅಧ್ಯಕ್ಷ ವೆಂಕಟೇಶನಾಯ್ಕ ಕೊಲೆಯತ್ನ ಹಾಗೂ ದರೋಡೆಯತ್ನ ಆರೋಪದಡಿ ವಿಚಾರಣಾಧೀನ ಕೈದಿಯಾಗಿದ್ದು.ನ್ಯಾಯಾಧೀಶರ ಆದೇಶದಂತೆ ಪೊಲೀಸರು ಬಂಧಿಸಿ ಬಳ್ಳಾರಿ ಜೈಲಿನಲ್ಲಿರಿಸಿದ್ದಾರೆ. *ಹಾಲಿ-ಮಾಜಿಗಳ ಮಾರಾಮಾರಿ* -ಕೂಡ್ಲಿಗಿ ತಾಪಂ ಮಾಜಿ ಅಧ್ಯಕ್ಷ ಬೆಣ್ಣೆಕೊಟ್ರೇಶ ಜನವರಿ3ರಂದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ತಾಪಂ ಅಧ್ಯಕ್ಷ ವೆಂಕಟೇಶನಾಯ್ಕ ವಿರುದ್ಧ ಹಲ್ಲೆ ಹಾಗೂ ಕೊಲೆಯತ್ನ ಮತ್ತು ತನ್ನಲ್ಲಿರುವ ಹಣ ದರೋಡೆಮಾಡಿರುವುದಾಗಿ ಆರೋಪಿಸಿ ಬೆಣ್ಣೆಕೊಟ್ರೇಶ ದೂರು ನೀಡಿದ್ದು.ತನ್ನ ವಿರುದ್ಧ ದೂರು ದಾಖಲಾಗಿರುವುದನ್ನರಿತ ಆರೋಪಿ ವೆಂಕಟೇಶನಾಯ್ಕ ತಲೆಮರೆಸಿಕೊಂಡಿದ್ದನೆಂದು ಹೇಳಲಾಗಿದೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಸಾಕಷ್ಟು ಶೋಧನೆ ನಡೆಸಿದ್ದಾರೆ.ಬಳ್ಳಾರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾರವರ ನಿಧೇ೯ಶನದಂತೆ ಕೊಟ್ಟೂರು ಪೊಲೀಸರು ಶೋಧಕಾಯ೯ಚರಣೆ ತೀವ್ರಗೊಳಿಸಿ ಬೆಂಗಳೂರಿನ ತನ್ನ ಮನೆಯಲ್ಲಿ ಅವಿತುಕೊಂಡಿದ್ದ ವೆಂಕಟೇಶನಾಯ್ಕನನ್ನು ಇಂದು ಪೊಲೀಸರು ಬಂಧಿಸಿ ಕೂಡ್ಲಿಗಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ವೆಂಕಟೇಶನಾಯ್ಕ ಪರ ವಕೀಲರು ಜಾಮೀನಿಗಾಗಿ ಹಾಕಿದ್ದ ಅಜಿ೯ಗೆ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಮಾನ್ಯತೆದೊರಕದ ಕಾರಣ ಅನಿವಾಯ೯ವಾಗಿ ವೆಂಕಟೇಶನಾಯ್ಕನನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಯಿತೆಂದು ತಿಳಿದುಬಂದಿದೆ. *ಅನಾರೋಗ್ಯದ ಹೈಡ್ರಾಮಾ..!?*-ಜಾಮೀನು ಸಿಗದಿದ್ದನ್ನು ಮನವರಿಕೆ ಮಾಡಿಕೊಂಡ ವೆಂಕಟೇಶನಾಯ್ಕ ಪರವಕೀಲರು ಆತನಿಗೆ ಅನಾರೊಗ್ಯದ ನೆಪಗಳನ್ನು ಒಡ್ಡಿ ಜೈಲುವಾಸದಿಂದ ತಪ್ಪಿಸಿಕೊಳ್ಳುವ ಅನಾರೋಗ್ಯದ ನೆಪ ಒಡ್ಡಿ ಸಿಂಪತಿ ಗಳಿಸುವ ಕುರಿತು ನಟಿಸುವ ಹೈಡ್ರಾಮದ ತಾಲೀಮು ಪೊಲೀಸರ ಸಮಕ್ಷಮದಲ್ಲಿಯೇ ಕೂಡ್ಲಿಗಿ ನ್ಯಾಯಾಲಯದ ಆವರಣದಲ್ಲಿ ಕೆಲಹೊತ್ತು ನಡೆಯಿತು.ಕೂಡ್ಲಿಗಿ ನ್ಯಾಯಾಲದ ಆವರಣದಲ್ಲಿ ನೆರೆದಿದ್ದ ಹಿರಿಯ ಕಿರಿಯ ವಕೀಲರು ಮತ್ತು ಕೆಲ ಕಕ್ಷಿದಾರರು ಆರೋಪಿ ತಾಪಂ ವೆಂಕಟೇಶನಾಯ್ಕನ ಬಂಧನ ಮತ್ತು ಹೈಡ್ರಾಮದ ತಾಲೀಮಿಗೆ ಸಾಕ್ಷಿಯಾದರು.
