ಬೆಳಗಾವಿ: ಜಾಕೆಟ್ ಕೊಡಿಸುವಲ್ಲಿ ವಿಳಂಬ ಮಾಡಿದ್ದಕ್ಕೆ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಾಲೂಕಿನ ಬಸೂರ್ತೆ ಗ್ರಾಮದಲ್ಲಿ ನಡೆದಿದೆ.
ಶುಭಂ ಗಜಾನನ ಹನ್ನೂರಕರ(15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಬಸೂರ್ತೆ ಗ್ರಾಮದವನಾಗಿರುವ ಶುಭಂ ತನ್ನ ತಂದೆಗೆ ಹೊಸ ಜಾಕೆಟ್ ಕೊಡುವಂತೆ ಹೇಳಿದ್ದಾನೆ. ಇದಕ್ಕೆ ತಂದೆ ಗಜಾನನ ನಾನು ಬೆಳಗಾವಿಯಲ್ಲಿ ಖರೀದಿ ಮಾಡಿಕೊಂಡು ಬರುತ್ತೇನೆ. ಆನ್‍ಲೈನಲ್ಲಿ ಖರೀದಿಸಬೇಡ ಎಂದು ತಿಳಿಸಿದ್ದಾ
ಎಂದಿನಂತೆ ಬೆಳಗ್ಗೆ ತಂದೆ ಗಜಾನನ ಉದ್ಯಮಬಾಗದ ಕಾರ್ಖಾನೆಗೆ ಕೆಲಸಕ್ಕೆ ಎಂದು ಬಂದಿದ್ದಾರೆ. ಈ ವೇಳೆ ಶುಭಂ ಮನೆಯಲ್ಲಿ ನನಗೆ ಈಗಲೇಬೇಕು ಎಂದು ಹಠ ಹಿಡಿದಿದ್ದನು. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.