ಬೆಂಗಳೂರು, ಜ.30- ಡಿಜಿ ಮತ್ತು ಐಜಿಪಿ ನೀಲಮಣಿ ಎನ್.ರಾಜು ಹಾಗೂ ಡಿಜಿಪಿ ಗಳಾದ ಎಂ.ಎನ್.ರೆಡ್ಡಿ ಮತ್ತು ರಾಘವೇಂದ್ರ ಔರಾದ್ಕರ್ ಅವರುಗಳು ನಾಳೆ ನಿವೃತ್ತಿ ಯಾಗಲಿದ್ದಾರೆ.
ಒಂದೇ ದಿನ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ ಕವಾಯತನ್ನು ಏರ್ಪಡಿಸಲಾಗಿದೆ.
ಕೋರಮಂಗಲದ ಕೆಎಸ್‍ಆರ್‍ಪಿ ಪರೇಡ್ ಮೈದಾನದಲ್ಲಿ ನಾಳೆ ಬೆಳಗ್ಗೆ 8 ಗಂಟೆಗೆ ಬೀಳ್ಕೊಡುಗೆ ಕವಾಯತು ನಡೆಯಲಿದೆ. ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳು ಈ ಬೀಳ್ಕೊಡುಗೆ ಕವಾಯತು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.