ಹಾವೇರಿ: ಕೊರೊನ್ ಸಂಬಂಧ ಕಫ್ರ್ಯೂ ಹೆರಿದ್ದರು, ಕೆಲವು ಪುಂಡರು,ಪೊಕರಿಗಳು ಬೈಕ್ ನಲ್ಲಿ ಸುತ್ತಾಡುವುದು ಕಂಡು ಬರುತ್ತಿದೆ. ಅಂತವರ ಮೇಲೆ ಲಾಠಿ ಪ್ರಯೋಗಿಸುವ ಬದಲು ದಂಡ ಹಾಕಿ, ಬೈಕ್ ಸಿಜ್ ಮಾಡಿ ಎಂದು ಶಾಸಕ ನೆಹರು ಓಲೇಕಾರ ಸೂಚನೆ ನೀಡಿದರು.
ಸೋಮವಾರ ನಗರಸಭೆ ಕಚೇರಿಯಲ್ಲಿ ನಡೆದ ಕೊರೊನ್ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿ, ಪೊಲೀಸರು ನಗರದಲ್ಲಿ ಸಂಚರಿಸುವ ಜನರ ಮೇಲೆ ಅನಗತ್ಯವಾಗಿ ಲಾಠಿ ಪ್ರಯೋಗಿಸಬೇಡಿ. ಜನರು ಸುಮ್ಮನೇ ಮನೆಯಿಂದ ಆಚೆ ಬರುವುದಿಲ್ಲ. ಏನಾದರೂ ಅಗತ್ಯ ವಸ್ತುಗಳು ಬೇಕಿದ್ದರೆ ಮನೆಯಿಂದ ಆಚೆ ಬರುತ್ತಾರೆ. ಹಾಗೇ ಮನೆಯಿಂದ ಹೊರ ಬಂದ ಜನರ ಮೇಲೆ ಸಿಟ್ಟಿನಿಂದ ಲಾಠಿ ಬೀಸಬೇಡಿ. ಅವರು ಏಕೆ ಆಚೆ ಬಂದಿದ್ದಾರೆ ಎಂದು ತಿಳಿದುಕೊಂಡು ಅವರಿಗ ತಿಳಿ ಹೇಳಿ ಕಳುಹಿಸಿ ಕೊಡಿ.
ಜನರು ಆಸ್ಪತ್ರೆ, ಕಿರಾಣಿ,ಕುಡಿಯುವ ನೀರಿಗಾಗಿ ಹೊರಗೆ ಬಂದಿರುತ್ತಾರೆ. ಅಂತವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿ. ಬೇಕಾ- ಬಿಟ್ಟಿಯಾಗಿ ಸುತ್ತವ ಪುಡಾರಿಗಳ ಮೇಲೆ ಮೂಲಾಜಿಲ್ಲದೆ ದಂಡ ಹಾಕಿ, ಬೈಕ್ ಸಿಜ್ ಮಾಡಿ ಎಂದು ಸೂಚನೆ ನೀಡಿದ. ಅವರು, ಇದೇ ವೇಳೆ, ಹೋಂ ಕ್ವಾರಂಟೈನ್‍ನಲ್ಲಿ ಜನರು ಮನೆಯಿಂದ ಆಚೆ ಬರದಂತೆ ನಿವಾ ವಹಿಸಿ. ಯಾವುದೇ ಸಂಯಮ ಕಳೆದುಕೊಂಡು ಜನರೊಂದಿಗೆ ವರ್ತಿಸಬೇಡಿ. ಬೇರೆ ಜಿಲ್ಲೆಯಲ್ಲಿ ಆದ ಘಟನೆಗಳು ನಮ್ಮಲ್ಲಿ ನಡೆಯದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಡಿವೈಎಸ್‍ಪಿ ಸಂತೋಷ, ಗ್ರಾಮೀಣ ಸಿಪಿಐ ಸಂತೋಷ ಪವಾರ, ಶಹರ ಠಾಣೆಯ ಸಿಪಿಐ ಪ್ರಭಾವತಿ ಶೇತಸನದಿ, ಪಿಎಸೈ ಕುಲಕರ್ಣಿ ಸೇರಿದಂತೆ ಮುಂತಾದವರಿದ್ದರು.