Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ನಗರದಲ್ಲಿ ಸಾಂಸ್ಕೃತಿಕ ಹಬ್ಬದ ಕಳೆ ಕಟ್ಟಿದೆ

ನಗರದಲ್ಲಿ ಸಾಂಸ್ಕೃತಿಕ ಹಬ್ಬದ ಕಳೆ ಕಟ್ಟಿದೆ

Spread the love

ಗೋಕಾಕ: ನಗರದಲ್ಲಿ ಸಾಂಸ್ಕೃತಿಕ ಹಬ್ಬದ ಕಳೆ ಕಟ್ಟಿದೆ. ಬೆಂಗಳೂರು ಅರಮನೆ ತಲೆ ಎತ್ತಿ ನಿಂತಿದ್ದು, ಸಾಂಸ್ಕೃತಿಕ ಅಭಿಮಾನಿಗಳಿಗೆ ಕೈ ಬೀಸಿ ಕರೆಯುತ್ತಿದೆ.

ಇಲ್ಲಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಫೆ. 8 ಮತ್ತು 9 ರಂದು ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ 19 ನೇ ಸತೀಶ ಶುಗರ್ಸ್ ಅವಾರ್ಡ್ಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸ್ಪರ್ಧಾರ್ಥಿಗಳಿಗಾಗಿ ಬೆಂಗಳೂರು ಅರಮನೆ ಮಾದರಿ ವೇದಿಕೆ ಕಂಗೊಳಿಸುತ್ತಿದ್ದೆ.

ಪ್ರತಿ ವರ್ಷ ಹೊಸತನದಿಂದ ವೇದಿಕೆ ಸಿದ್ದಗೊಳಿಸುವ ಸತೀಶ ಶುಗರ್ಸ್ ಆಡಳಿತ ಮಂಡಳಿ ಈ ಬಾರೀ ರಾಜ್ಯ ರಾಜಧಾನಿಯಲ್ಲಿರುವ ಅರಮನೆ ವೇದಿಕೆ ನಿರ್ಮಿಸಿದ್ದಾರೆ.

ಫೆ. 8 ಮತ್ತು 9 ರಂದು ಸಂಜೆ 5 ಗಂಟೆಗೆ ಎರಡು ದಿನ ಸತೀಶ ಶುರ್ಗಸ್ ಅವಾರ್ಡ್ ಅಂತಿಮ ಹಂತದ ಸಾಂಸ್ಕೃತಿ ಸ್ಪರ್ಧೆ ಈ ವೇದಿಕೆ ಮೇಲೆ ನಡೆಯಲಿದ್ದು, ಸಾವಿರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ.

ಈ ಹಿಂದೆ 18 ನೇ ಸತೀಶ ಶುಗರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಹುಬಲಿ ಸಾಮ್ರಾಜ್ಯದ ವೇದಿಕೆ ಗಮನ ಸೆಳೆದಿತ್ತು.

ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಅವರು ಗ್ರಾಮೀಣ ಪ್ರತಿಭೆಗಳಿಗಾಗಿ ಕಳೆದ 19 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ವೇದಿಕೆಯಿಂದ ಹೊರ ಬಂದ ಸಾವಿರಾರು ಪ್ರತಿಭೆಗಳು ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕಳೆದ ಅವಾರ್ಡ್ಸ್ ನಲ್ಲಿ ಗೆಲುವು ಸಾಧಿಸಿದ ಪ್ರತಿಭೆಗೆ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶ ನೀಡುವುದು ಕಾರ್ಯಕ್ರಮದ ಮತ್ತೊಂದು ವಿಶೇಷತೆ ಇದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ