ಗೋಕಾಕ: ಸತೀಶ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

Spread the love

ಗೋಕಾಕ: ಸತೀಶ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಸಚಿವರಾದ ಹಿನ್ನಲೆ ಅವರ ಅಭಿಮಾನಿಗಳು ನಗರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾನತಾಡಿದ ಅವರು,ಇದು ರಾಜಕೀಯ ಭಾಷಣವಲ್ಲ. ಹೃದಯಪೂರ್ವಕ ಭಾಷಣವಾಗಿದೆ. ಸತೀಶ ಜಾರಕಿಹೊಳಿ ಅವರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈರಿಸಿದರು.

ದೊಡ್ಡ ಗುರಿಯಿಟ್ಟುಕೊಂಡು ಸತೀಶ ರಾಜಕೀಯಕ್ಕೆ ಬಂದವರು ನಾನು ಯಾವುದೇ ಗುರಿ ಇಲ್ಲದೇ ಪೂರ್ವಯೋಜನೆ ಇಲ್ಲದೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಸತೀಶ ಜಾರಕಿಹೊಳಿ ರಾಜ್ಯದ ಉನ್ನತ ಹುದ್ದೆಗೇರಿವ ಕನಸು ಹೊತ್ತಿದ್ದಾರೆ. ಯಶಸ್ಸಿಗೆ ತಾಳ್ಮೆ, ಗಟ್ಟಿತನ ಮುಖ್ಯ. ಸೂಕ್ತ ಸಮಯ ಸಂದರ್ಭ ನೋಡಿ ಹೆಜ್ಜೆ ಇರಿಸಿಬೇಕು ಎಂದು ಸಲಹೆ ನೀಡಿದ ಅವರು, ಅವರು 20 ವರ್ಷದಲ್ಲಿ ಮಾಡಿದ ರಾಜಕೀಯವನ್ನು ನಾನು 2 ವರ್ಷದಲ್ಲಿ ಮಾಡಿದ್ದೇನೆ ಎಂದರು.

ಜಾರಕಿಹೊಳಿ ಸಹೋದರರು ಒಂದೇ..!
ಜಾರಕಿಹೊಳಿ ಸಹೋದರರು ಎಲ್ಲರು ಒಂದೇ . ಆದ್ರೆ ರಾಜಕೀಯವಾಗಿ ನಾವು ಬೇರೆ, ಬೇರೆಯಾಗಿದ್ದೇವೆ. ರಾಜಕಾರಣ ಬರತ್ತೆ ಹೋಗತ್ತೆ. ಜಾರಕಿಹೊಳಿ ಮನೆತನಕ್ಕೆ ನಾನು ಹಿರಿಯ. ಎಲ್ಲವನ್ನು ತ್ಯಾಗ ಮಾಡಬೇಕಾಗುತ್ತದೆ. ಸಣ್ಣವರು ತಪ್ಪು ಮಾಡಿದರು ಸಹಿಸಿಕೊಳ್ಳಬೇಕಾಗುತ್ತದೆ. ಚುನಾವಣೆಯಲ್ಲಿ ನಾನು ಅವರಿಗೆ ಬೈದಿರಬಹುದು. ಅವರು ನನಗೆ ಬೈದಿರಬಹುದು. ಆದ್ರೆ ಮನೆತನ ವಿಷಯಕ್ಕೆ ಬಂದ್ರೆ ಸಹೋದರರು ಒಂದೇ. ಆದ್ರೆ ರಾಜಕೀಯ ನಾವೆಲ್ಲರೂ ದೂರ ಇರುತ್ತೇವೆ. ದುಡ್ಡಿನಿಂದ ಯಾವುದೇ ಸರ್ಟಿಫಿಕೆಟ್ ಸಿಗಲ್ಲ, ಜನರು ನನಗೆ, ಬಾಲಚಂದ್ರ ಜಾರಕಿಹೊಳಿಗೆ ಒಳ್ಳೆಯ ಸರ್ಟಿಪಿಟೇಕ್ ನೀಡಿದ್ದಾರೆ.ಅದನ್ನು ಉಳಿಸಿಕೊಂಡು ಹೋಗುತ್ತೇವೆ. ಹಲವು ಅಭಿವೃದ್ದಿಪರ ಕೆಲಸ ಮಾಡುತ್ತೇವೆ ಎಂದರು.


Spread the love

About Laxminews 24x7

Check Also

ಜಾಂಬೋಟಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ

Spread the love ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಜಾಂಬೋಟಿಯಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ