Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ, ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ಸತೀಶ್ ಜಾರಕಿಹೊಳಿ ಅಭಿಮಾನಿಗಳುದ

ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ, ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ಸತೀಶ್ ಜಾರಕಿಹೊಳಿ ಅಭಿಮಾನಿಗಳುದ

Spread the love

ಗೋಕಾಕ: ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ರವರ ಪ್ರೋತ್ಸಾಹದಿಂದ  ಪ್ರತಿವರ್ಷದಂತೆ ಈ ವರ್ಷವು ಕೂಡ ಕರ್ನಾಟಕ ವಿಶ್ವನಿರ್ಮಾಣ ಸೇನೆ ಪದಾಧಿಕಾರಿಗಳು ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ, ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಪಕ್ಷಿ ಪ್ರೇಮಿಗಳ ಮೆಚ್ಚುಗೆ ಪಾತ್ರರಾಗಿದ್ದಾರೆ.

ಮಾರಕ ಕೊರೊನಾ ಆರ್ಭಟಕ್ಕೆ ದೇಶದ ಜನರು ಕಂಗಾಲಾಗಿದ್ದಾರೆ. ಜತೆಗೆ ಲಾಕ್ ಡೌನ್ ದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಪದಾಧಿಕಾರಿಗಳು ಸಹಾಯ ಹಸ್ತ ನೀಡುತ್ತಿದ್ದಾರೆ. ಸಂಘಟನೆಯ ತತ್ವ ಸಿದ್ದಾಂತಗಳನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ.

ಇದರ ಜೊತೆ ಜೊತೆಗೆ ಬೇಸಿಗೆ ಆರಂಭವಾಗಿರುವುದರಿಂದ ಪ್ರತಿ ವರ್ಷದಂತೆ ಪಕ್ಷಿಗಳಿಗೆ ಆಹಾ ನೀರು ನೀಡುವ ಕೆಲಸದಲ್ಲಿಯೂ ತೊಡಗಿದ್ದಾರೆ.

ಎಲ್ಲ ಕಾರ್ಯಕರ್ತರಿಗೂ ಹಾಗೂ ಜನರಿಗೆ ತಮ್ಮ ಮನೆಯ ಮುಂದೆ  ಛಾವಣಿ ಮೇಲೆ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ತಮ್ಮ ಕೈಲಾದ ಮಟ್ಟಿಗೆ ಮಾಡಬೇಕೆಂದು ಸಂಸ್ಥಾಪಕ ಅಧ್ಯಕ್ಷ ಅಯೂಬ ಪೀರಜಾದೆ ವಿನಂತಿಸಿದ್ದರು.

ಸಂಘಟನೆಯ ಪದಾಧಿಕಾರಿಗಳಾದ ದಸ್ತಗಿರ ಹವಾಲ್ದಾರ್ ವಿಕಾಸ ಹಿರೇಕರ,ಅಫ್ಸರ್ ಕಡಲಗಿ, ಸಿದ್ದಪ್ಪ್ ನಾಯಿಕ, ಸೋಹೇಲ ನಾಯಿಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ವಿಮಾನವೇರಿ ಹಿರಿ ಹಿರಿ ಹಿಗ್ಗಿದ ಹಿರಿಜೀವಗಳು.

Spread the love ಬೆಳಗಾವಿ: ಆಕಾಶದೆತ್ತರಕ್ಕೆ ತಲೆ ಎತ್ತಿ ವಿಮಾನವನ್ನು ನೋಡುತ್ತಿದ್ದ ವೃದ್ಧಾಶ್ರಮದ ಈ ಅಜ್ಜ, ಅಜ್ಜಿಯರು ಜೀವನದಲ್ಲಿಯೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ