ಪುಣೆ: ಇಲ್ಲಿಯವರೆಗಿನ ಪ್ರಕರಣಗಳಲ್ಲಿ ಕೋವಿಡ್ 19ಗೆ ಹೆಚ್ಚಾಗಿ ವಯಸ್ಸಾದವರೇ ಬಲಿಯಾಗಿದ್ದು, ಇತ್ತ ಪ್ರಧಾನಿ ಮೋದಿ ಕೂಡ 65 ವರ್ಷ ಮೇಲ್ಪಟ್ಟವರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದರು. ಆದರೆ ಇದೀಗ 92 ವರ್ಷದ ಅಜ್ಜಿಯೊಬ್ಬರು ಸಾವು ಗೆದ್ದು ಬೀಗಿದ್ದಾರೆ.
ಹೌದು. ಪುಣೆ ಮೂಲದ ಅಜ್ಜಿ ನಾನ್ಜೆಜೆನೇರಿಯನ್ ಕೊರೊನಾ ವೈರಸ್ ಎಂಬ ಮಾರಕ ರೋಗವನ್ನು ಮೆಟ್ಟಿ ನಿಂತಿದ್ದಾರೆ. ನಾನ್ಜೆಜೆನೇರಿಯನ್ ಅವರು 7 ತಿಂಗಳ ಹಿಂದೆಯಿಂದ ಪಾರ್ಶ್ವವಾಯುಗೆ ತುತ್ತಾಗಿದ್ದರು. ಇದೀಗ ಈಕೆಯ ಜೊತೆ ಕುಟುಂಬದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಬಳಿಕ ಎಲ್ಲರನ್ನು ಏಪ್ರಿಲ್ ಮೊದಲ ವಾರದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
92 ವರ್ಷದ ವೃದ್ಧೆ ಪಾರ್ಶ್ವವಾಯುವಿನಿಂದ ದೇಹದ ಎಡಬದಿಯಲ್ಲಿ ಸಂಪೂರ್ಣವಾಗಿ ಸ್ವಾದೀನ ಕಳೆದುಕೊಂಡಿದ್ದು, ವ್ಹೀಲ್‌ಚೇರ್‌ನಲ್ಲೇ ಓಡಾಡುತ್ತಿದ್ದರು. ಈಕೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಈಕೆ 14 ದಿನದಲ್ಲಿ ಕೋವಿಡ್ 19 ಗೆದ್ದಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾಗಲು ವಯಸ್ಸಿನ ಹಂಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯ ಡಾ. ವಿಜಯ್ ನಟ್ರಾಜನ್ ತಿಳಿಸಿದ್ದಾರೆ.
ಒಬ್ಬರು ವಯಸ್ಸಾದ ಮಹಿಳೆ ಕೊರೊನಾ ವೈರಸ್ ಗೆದ್ದಿದ್ದಾರೆ ಅಂದರೆ ಹಿರಿಯ ನಾಗರಿಕರು ಕೂಡ ಸಾವು ಗೆಲ್ಲಬಹುದು ಎಂಬುದು ಇದರಿಂದ ತಿಳಿಯುತ್ತದೆ. ಹೀಗಾಗಿ ಕೊರೊನಾ ಬಂದರೆ ಯಾವ ವಯಸ್ಸಿನವರೂ ಭಯಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ವೃದ್ಧೆಗೆ ಕೋವಿಡ್ 19ನ ಯಾವುದೇ ಲಕ್ಷಗಳಿರಲಿಲ್ಲ. ಆದರೆ ಆಕೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಕಾರಣ ಆಕೆಯನ್ನು 14 ದಿನಗಳ ಕಾಲ ಗ್ರಹಬಂಧನದಲ್ಲಿಟ್ಟಿದ್ದೆವು. ಬಳಿಕ ಪರೀಕ್ಷೆ ನಡೆಸಿದಾಗ ಆಕೆಯ ಆರೋಗ್ಯ ಉತ್ತಮವಾಗಿತ್ತು ಎಂದು ನಟ್ರಾಜನ್ ತಿಳಿಸಿದ್ದಾರೆ.