Breaking News

5 ಲಕ್ಷ ದೇಣಿಗೆ ನೀಡಿದ ಬಿಗ್‍ಬಾಸ್ ಸ್ಪರ್ಧಿ ದೀಪಿಕಾ ದಾಸ್

Spread the love

ಬೆಂಗಳೂರು: ಕೊರೊನಾ ಸೋಂಕಿತರ ನೆರವಿಗಾಗಿ ಈಗಾಗಲೇ ಕೆಲ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ದೀಪಿಕಾ ದಾಸ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ದೇಣಿಗೆ ನೀಡಿದ್ದಾರೆ.

ದೀಪಿಕಾ ದಾಸ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ದೇಣಿಗೆ ನೀಡಿರುವ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ಮಾನವೀಯತೆಗಾಗಿ, ನಮ್ಮ ದೇಶ ಮತ್ತು ನಮ್ಮ ಸಹ ನಾಗರಿಕರಿಗಾಗಿ ಸಹಾಯ ಮಾಡುವ ಸಮಯ ಈಗ ಬಂದಿದೆ. ಹೀಗಾಗಿ ಅವರಿಗೆ ಸಹಾಯ ಮಾಡೋಣ. ನಾನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋವಿಡ್-19 ತಡೆಗೆ 5 ಲಕ್ಷ ಕೊಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಸಾಗರದ ಪ್ರತಿ ಹನಿಗೂ ಮೌಲ್ಯವಿದೆ. ಆದ್ದರಿಂದ ಕೊವೀಡ್-19 ಪರಿಸ್ಥಿತಿಯ ವಿರುದ್ಧ ಹೋರಾಡಲು ಸಹಾಯ ಮಾಡಬೇಕೆಂದು ನಾನು ನಿಮ್ಮೆಲ್ಲರನ್ನೂ ಕೇಳಿಕೊಳ್ಳುತ್ತೇನೆ. ಇದು ಯಾವ ದೊಡ್ಡಸ್ತಿಕೆ ತೋರುವುದಕ್ಕಲ್ಲ. ನೀವು ಕೂಡ ಈ ಕೆಲಸದಲ್ಲಿ ಭಾಗಿ ಆಗಲಿ ಎಂದು ಹೇಳಿದೆ. ಎಲ್ಲರೂ ಸಹಾಯ ಮಾಡೋಣ” ಎಂದು ಮನವಿ ಮಾಡಿಕೊಂಡಿದ್ದಾರೆ.

ಜೊತೆಗೆ ತಾವು ನೀಡುತ್ತಿರುವ 5 ಲಕ್ಷ ರೂಪಾಯಿಗಳ ಚೆಕ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಇತರಿಗೂ ಸಹಾಯ ಮಾಡುವಂತೆ ತಿಳಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಬ್ಯಾಂಕ್ ವಿವರಗಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ