Breaking News
Home / ಜಿಲ್ಲೆ / ರಾಜ್ಯದ ರೈತರೇ ಗಮನಿಸಿ : ಸ್ವಯಂಪ್ರೇರಿತರಾಗಿ‌ ಬೆಳೆ‌ನಾಶಪಡಿಸಿಕೊಂಡರೆ ಸಿಗಲ್ಲ ಪರಿಹಾರ..!

ರಾಜ್ಯದ ರೈತರೇ ಗಮನಿಸಿ : ಸ್ವಯಂಪ್ರೇರಿತರಾಗಿ‌ ಬೆಳೆ‌ನಾಶಪಡಿಸಿಕೊಂಡರೆ ಸಿಗಲ್ಲ ಪರಿಹಾರ..!

Spread the love

ದಾವಣಗೆರೆ,: ಯಾವುದೇ ರೈತರು ಆತುರದ ಬುದ್ಧಿಗೆ ಬೆಲೆಕೊಟ್ಟು ತಮ್ಮ ಬೆಳೆಗಳನ್ನು ನಾಶ ಪಡಿಸಿಕೊಳ್ಳಬಾರದು. ಕೊರೊನಾ‌ ಲಾಕ್ಡೌನ್ ಅನಿರೀಕ್ಷಿತವಾಗಿದ್ದು, ಯಾರೂ ಸಹ ಇದನ್ನು ನಿರೀಕ್ಷಿಸಿರಲಿಲ್ಲ.ಲಾಕ್ಡೌನ್ ಮುಗಿದ ಮೇಲೆ ರೈತರ ಫಸಲುಗಳಿಗೆ ಒಳ್ಳೆಯ ಬೆಲೆ ಬಂದೇ ಬರುತ್ತದೆ.

ಆತುರಕ್ಕೆ ಸ್ವಯಂಪ್ರೇರಿತರಾಗಿ ಬೆಳೆ ನಾಶ ಪಡಿಸಿಕೊಂಡರೆ ಪರಿಹಾರ ಸಾಧ್ಯವಿಲ್ಲ.ಪ್ರಾಕೃತಿಕ ನಷ್ಟಕ್ಕೆ ಮಾತ್ರ ಪರಿಹಾರ ಒದಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಲಾಕ್ಡೌನ್ ಹಿನ್ನಲೆಯಲ್ಲಿ ರೈತರ ಪರಿಸ್ಥಿತಿ,ಕೃಷಿ ಚಟುವಟಿಕೆ ಕುರಿತು ಜಿಲ್ಲೆಯ ಕೃಷಿ,ತೋಟಗಾರಿಕೆ ಅಧಿಕಾರಿಗಳು,ಜನಪ್ರತಿನಿಧಿಗಳ ಜೊತೆ ಸಚಿವರು ಗುರುವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿ ‌ಸಭೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಪ್ರಕೃತಿ ವಿಕೋಪಕ್ಕೆ ಬೆಳೆ ನಾಶವಾದರೆ ಮಾತ್ರ ಪರಿಹಾರ ‌ನೀಡುತ್ತೇವೆ. ರೈತರು ಬೆಳೆಗಳನ್ನು ನಾಶ ಪಡಿಸಿಕೊಂಡರೆ ಅದಕ್ಕೆ ಪರಿಹಾರ ‌ನೀಡುವುದಿಲ್ಲ.

ಹೂವಿನ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 2.58 ಕೋಟಿಯಷ್ಟು ನಷ್ಟವಾಗಿದೆ ಎಂದು ತಿಳಿದುಬಂದಿದೆ.ಪ್ರಾಕೃತಿಕ ನಷ್ಟದ ಬಗ್ಗೆ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳಿಂದ ವರದಿ ತರೆಸಿಕೊಂಡಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಲಾಕ್ಡೌನ್ ನಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಸರ್ಕಾರ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ಈ ಬಗ್ಗೆ ತಾವು ಖುದ್ದಾಗಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಕೃಷಿ ಚಟುವಟಿಕೆಗಳಿಗೆ ಎಲ್ಲಾ ರೀತಿಯ ಬೆಂಬಲ ‌ನೀಡುತ್ತೇವೆ.ದಾವಣಗೆರೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಕಳಪೆ ಬೀಜಗಳನ್ನು ಮಾರಾಟ ಮಾಡುತ್ತಾರೆ ಎನ್ನುವುದು ತಮ್ಮ ಗಮನಕ್ಕೆ ಬಂದಿದೆ.ಕಳಪೆ ಬೀಜ ಮಾರಾಟ ಮಾಡುವವರು ಎಷ್ಟೇ ದೊಡ್ಡವರಾಗಿರಲಿ ಅವರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದರು.

ಈ‌ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಇನ್ನಿತರೆ ಜನಪ್ರತಿನಿಧಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ