Home / ಜಿಲ್ಲೆ / ರೈತರಿಂದ ಡಿ.ಕೆ.ಸುರೇಶ್ ಹಣ್ಣು, ತರಕಾರಿ ಖರೀದಿ – ಜನರಿಗೆ ಉಚಿತವಾಗಿ ವಿತರಣೆ

ರೈತರಿಂದ ಡಿ.ಕೆ.ಸುರೇಶ್ ಹಣ್ಣು, ತರಕಾರಿ ಖರೀದಿ – ಜನರಿಗೆ ಉಚಿತವಾಗಿ ವಿತರಣೆ

Spread the love

ರಾಮನಗರ: ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಆಗುತ್ತಿಲ್ಲ. ಇದರಿಂದ ರೈತರು ಜಮೀನುಗಳಲ್ಲೇ ನಾಶ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದೀಗ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಿದ್ದು, ತರಕಾರಿ, ಹಣ್ಣು ಹಂಪಲನ್ನು ಖರೀದಿಸಿ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ.

ಡಿ.ಕೆ.ಸುರೇಶ್ ರೈತರು ಬೆಳೆಗಳನ್ನು ಖರೀದಿ ಮಾಡುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಬೇರೆ ಬೇರೆ ಜಿಲ್ಲೆಯ ರೈತರು ಸಹ ಫೋನ್ ಮಾಡುತ್ತಿದ್ದಾರೆ. ನಾವು ಬೆಳೆ ಬೆಳೆದಿದ್ದೇವೆ. ಆದರೆ ಬೆಳೆ ಮಾರಾಟ ಮಾಡಲಾಗುತ್ತಿಲ್ಲ. ಹೀಗಾಗಿ ನಮ್ಮ ಬೆಳೆಯನ್ನು ಖರೀದಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ರೈತರ ಮನವಿಗೆ ಸ್ಪಂದಿಸುತ್ತಿರುವ ಸುರೇಶ್ ನೇರವಾಗಿ ರೈತರ ಜಮೀನಿಗೆ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಆಲಿಸಿ ತರಕಾರಿ, ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ.

ಅಂದಹಾಗೇ ಇಲ್ಲಿಯ ತನಕ ಸಾವಿರಕ್ಕೂ ಅಧಿಕ ಕ್ವಿಂಟಾಲ್ ತರಕಾರಿ, ಹಣ್ಣುಗಳನ್ನು ಖರೀದಿಸಿದ್ದಾರೆ. ಚನ್ನಪಟ್ಟಣದ ಇಗ್ಗಲೂರಿನ ರೈತ ದೇವರಾಜು ಎಂಬವರಿಂದ ಕೆ.ಜಿ ಎಲೆಕೋಸಿಗೆ 4 ರೂಪಾಯಿಯಂತೆ 10 ಟನ್ ಎಲೆಕೋಸು ಖರೀಧಿಸಿದ್ದಾರೆ. ಆನೇಕಲ್ ಹಾರಗದ್ದೆ ಗ್ರಾಮದ ರೈತರಿಂದ 20 ಟನ್ ಎಲೆಕೋಸು, ಆನೇಕಲ್‍ನ ಲಿಂಗಾಪುರ, ಸುಮೇವರನಹಳ್ಳಿ, ಕೊಪ್ಪ ಗ್ರಾಮದ ರೈತರಿಂದ 30 ಟನ್ ಕ್ಯಾರೆಟ್, 40 ಟನ್ ಎಲೆಕೋಸು, ಹಣ್ಣುಗಳನ್ನು ಖರೀದಿಸಿದ್ದಾರೆ.

ಹಾಸನದ ಅರಸೀಕರೆಯ ರೈತರೊಬ್ಬರಿಂದ 100 ಟನ್ ಕಲ್ಲಂಗಡಿ, 50 ಟನ್ ಟೊಮೊಟೋ ಖರೀದಿಸಿದ್ದಾರೆ. ಮದ್ದೂರಿನ ದೇವಲಪುರ ಸುತ್ತಮುತ್ತಲಿನ ಗ್ರಾಮಸ್ಥರಿಂದ 300 ಟನ್ ಕಲ್ಲಂಗಡಿ, ಮಂಡ್ಯದ ಕೆ.ಆರ್ ಪೇಟೆಯ ರೈತರೊಬ್ಬರಿಂದ 30 ಟನ್ ಎಲೆಕೋಸು, 60 ಟನ್ ಕುಂಬಳಕಾಯಿ, 500 ಕ್ರೇಟ್ ಟೊಮೊಟೋ ಖರೀದಿಸಿದ್ದಾರೆ. ಅಲ್ಲದೇ ಕನಕಪುರ ತಾಲೂಕಿನ ರೈತರಿಂದ 30 ಟನ್ ಟಮೋಟೋ, 40 ಟನ್ ಎಲೆಕೋಸು, 50 ಟನ್ ಕಲ್ಲಂಗಡಿಯನ್ನು ಖರೀದಿ ಮಾಡಿದ್ದಾರೆ.

ಡಿ.ಕೆ.ಸುರೇಶ್ ಅವರ ಕಾರ್ಯಕ್ಕೆ ಕೈ ಜೋಡಿಸಿದ ರೈತರಾದ ರವಿ ಹಾಗೂ ರೂಪ ಎಂಬವರು ಎರಡು ಎಕರೆಯ ಬೆಳೆದಿದ್ದ  ದಪ್ಪ ಮೆಣಸಿಕಾಯಿಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲು ದಾನವಾಗಿ ನೀಡಿದ್ದಾರೆ. ಇದಲ್ಲದೇ 25 ಲಕ್ಷ ಮೌಲ್ಯದ ಸೀಬೆಹಣ್ಣನ್ನು ಖರೀದಿಸಿದ್ದಾರೆ. ಅದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೆಕಲ್‍ನ ಸಾರ್ವಜನಿಕರಿಗೆ ಉಚಿತವಾಗಿ ತಮ್ಮ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ ಮೂಲಕ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ.

ಅಲ್ಲದೇ ತಮ್ಮ ಹಿಂಬಾಲಕರು ಹಾಗೂ ಪಕ್ಷದ ಮುಖಂಡರು, ಸ್ನೇಹಿತರಿಗೂ ಸಹ ರೈತರ ಬೆಳೆ ಖರೀದಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಂಸದ ಡಿಕೆ ಸುರೇಶ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮತ್ತು ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ