Breaking News
Home / ಜಿಲ್ಲೆ / ಧಾರವಾಡದಲ್ಲಿ ಕೊರೋನಾ ಪ್ರಕರಣ ಜೀರೋ ಹಂತಕ್ಕೆ ಬಂದಿದೆ; ಸಚಿವ ಜಗದೀಶ್‌ ಶೆಟ್ಟರ್ ಸಂತಸ

ಧಾರವಾಡದಲ್ಲಿ ಕೊರೋನಾ ಪ್ರಕರಣ ಜೀರೋ ಹಂತಕ್ಕೆ ಬಂದಿದೆ; ಸಚಿವ ಜಗದೀಶ್‌ ಶೆಟ್ಟರ್ ಸಂತಸ

Spread the love

ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಮಾತ್ರ ಕೊರೋನಾ ವೈರಸ್‌ ಪತ್ತೆಯಾಗಿತ್ತು. ಇದೀಗ ಅವರಿಗೂ ಚಿಕಿತ್ಸೆ ನೀಡಿ ಗುಣಪಡಿಸಲಾಗಿದ್ದು ಧಾರವಾಡದಲ್ಲಿ ಯಾರೂ ಕೊರೋನಾ ಸೋಂಕಿತರ ಇಲ್ಲದಿರುವುದು ಸಂತಸದ ವಿಚಾರವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್‌ ತಿಳಿಸಿದ್ದಾರೆ.

ಇಂದು ಧಾರವಾಡದಲ್ಲಿ ಕರೊನಾ ಮಾನಸಿಕ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶೆಟ್ಟರ್, “ಧಾರವಾಡದಲ್ಲಿ ಆರಂಭದಲ್ಲೇ ಒಂದು ಕೇಸ್ ಪಾಸಿಟಿವ್ ಆಗಿತ್ತು. ಆದರೆ, ಈಗ ಅವರು ಗುಣಮುಖರಾಗಿರುವುದು ಸಂತಸ ತಂದಿದೆ. ಕಿಮ್ಸ್‌ನಲ್ಲಿ ನಿರಂತರ ಚಿಕಿತ್ಸೆ ಕೊಡಿಸಿ ಗುಣಪಡಿಸಲಾಗಿದೆ. ನಿನ್ನೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ. ಇದರಿಂದ ಧಾರವಾಡದಲ್ಲಿ ಕೊರೋನಾ ಪ್ರಕರಣ ಜಿರೋ‌ಗೆ ಬಂದಿದೆ” ಎಂದಿದ್ಧಾರೆ.

“ಕೆಲ ಶಂಕಿತರನ್ನು ಹೋಮ್ ಕ್ವಾರೈಂಟನ್‌ನಲ್ಲಿ ಇರಿಸಲಾಗಿದೆ. ದೆಹಲಿಯಿಂದ ಬಂದವರದೂ ನೆಗಟಿವ್ ಬಂದಿವೆ. ಈ ರೋಗದ ಬಗ್ಗೆ ಕೆಲವರಿಗೆ ಹೆದರಿಕೆ ಇದೆ. ಹೀಗಾಗಿ ಡಿಮ್ಹಾನ್ಸ್‌ನಲ್ಲಿ ಸಮಾಲೋಚನಾ ಕೇಂದ್ರ ಮಾಡಿದ್ದೇವೆ. ಸಂಶಯ ಇದ್ದವರೂ ದಿನದ 24 ಗಂಟೆ ಮಾಹಿತಿ ಪಡೆಯಬಹುದು. ಲಾಕ್‌ಡೌನ್ ಕಾರಣ ನಮ್ಮಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದೆ. ಆದರೆ, ನಾವು ಸಂಪೂರ್ಣ ಮೈ ಮರೆಯಬಾರದು. ಲಾಕ್‌ಡೌನ್ 14ರವರೆಗೆ ಅನುಷ್ಠಾನ ಮಾಡಬೇಕು. ಅಲ್ಲಿಯವರೆಗೆ ಎಲ್ಲರೂ ತಾಳ್ಮೆ ಮತ್ತು ಸಂಯಮ ವಹಿಸಬೇಕು” ಎಂದು ಜಗದೀಶ್ ಶೆಟ್ಟರ್‍ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಹಳೆಯ ದ್ವೇಷಕ್ಕೆ 200 ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು!

Spread the love ದಾವಣಗೆರೆ: ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಹಳೆಯ ದ್ವೇಷಕ್ಕೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನಾಶವಾಗಿವೆ. ದಾವಣಗೆರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ