ಮುಂಬೈ: 90 ದಶಕದ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ಮಾಧುರಿ ದೀಕ್ಷಿತ್ ಅವರು ಹೆಸರು ಈ ಹಿಂದೆಯೇ ಭಾರತ ಕ್ರಿಕೆಟ್ ತಂಡದ ಆಟಗಾರನೊಂದಿಗೆ ಕೇಳಿಬಂದಿತ್ತು.
ಹೌದು ಮಾಧುರಿ ದೀಕ್ಷಿತ್ ಅವರ ಹೆಸರು ಟೀಂ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾರೊಂದಿಗೆ ಕೇಳಿ ಬಂದಿತ್ತು. ಜೊತೆಗೆ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಗಾಳಿ ಸುದ್ದಿಯಾಗಿ ಬಂದ ಈ ಮಾತುಗಳು ಗಾಳಿಯಲ್ಲೆ ತೆಲಿಹೋಗಿದ್ದವು.
ಅಜಯ್ ಜಡೇಜಾ ಮತ್ತು ಮಾಧುರಿ ಮೊದಲಿಗೆ ಜಾಹೀರಾತುವೊಂದರ ಫೋಟೋ ಶೂಟ್ ವೇಳೆ ಭೇಟಿಯಾಗಿದ್ದರು. ಈ ವೇಳೆ ಭೇಟಿಯಲ್ಲಿ ಪರಿಚಯವಾಗಿ ನಂತರ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಆಗ ಭಾರತ ಕ್ರಿಕೆಟ್ ತಂಡದ ಖಾಯಂ ಆಟಗಾರನಾಗಿದ್ದ ಅಜಯ್ ಜಡೇಜಾ ನಟಿ ಮಾಧುರಿ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆಗ ತಾನೇ ಸಿನಿಮಾದಲ್ಲಿ ಹಿಟ್ ಮೇಲೆ ಹಿಟ್ ಕೊಡುತ್ತಿದ್ದ ಮಾಧುರಿ ಕೂಡ ಅಜಯ್ ಅವರಿಗೆ ಕ್ಲೀನ್ ಬೌಲ್ಡ್ ಆಗಿದ್ದರು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಜಯ್ ಹಾಗೂ ಮಾಧುರಿ ಮದುವೆಯಾಗಲು ಕೂಡ ತಯಾರಿ ನಡೆಸಿದ್ದರು. ಆದರೆ ರಾಜಮನೆತನದ ಹುಡಗನಗಿದ್ದ ಅಜಯ್ ಮಾಧುರಿಯನ್ನು ಮದುವೆಯಾಗುವುದು ಅವರ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಇವರ ಪ್ರೀತಿ ಮುರಿದು ಬಿತ್ತು. ಆ ನಂತರ ಅಜಯ್ ಕ್ರಿಕೆಟ್‍ನಲ್ಲಿ ಬ್ಯುಸಿಯಾದರು, ಬಾಲಿವುಡ್‍ನಲ್ಲಿ ಹೆಚ್ಚು ಅವಕಾಶಗಳು ಬರುತ್ತಿದ್ದ ಕಾರಣ ಮಾಧುರಿ ಸಹ ಸಿನಿಮಾ ಮಾಡುತ್ತಾ ಅಜಯ್ ಜೊತೆಗಿನ ಪ್ರೀತಿಗೆ ಬ್ರೇಕ್ ಹಾಕಿದರು.
ಇದಾದ ನಂತರ ಅಜಯ್ ಜಡೇಜಾ ಫಿಕ್ಸಿಂಗ್‍ನಲ್ಲಿ ಸಿಕ್ಕಿಬಿದ್ದು ಐದು ವರ್ಷ ನಿಷೇಧಕ್ಕೆ ಒಳಗಾದರು. ಈ ಮೂಲಕ 1992 ರಿಂದ 2000ದ ವರೆಗೆ ಭಾರತ ತಂಡಕ್ಕಾಗಿ ಆಡಿದ್ದ ಅಜಯ್ ಜಡೇಜಾ ಅವರ ಕ್ರಿಕೆಟ್ ಜೀವನ ಮುಗಿದು ಹೋಗಿತ್ತು. ಆದರೆ ಈ ನಡುವೆ ಬಾಲಿವುಡ್‍ನಲ್ಲಿ ರಾಣಿಯಾಗಿ ಮೆರೆದ ಮಾಧುರಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಾಲಿವುಡ್ ಸಿನಿರಂಗದಲ್ಲಿ ಮೇರು ನಟಿಯಾಗಿ ಬೆಳೆದು ನಿಂತರು.
ಅಜಯ್ ನಂತರ ಸಂಜಯ್ ದತ್ ಅವರ ಪ್ರೀತಿ ಬಲೆಯಲ್ಲಿ ಸಿಲುಕಿದ ಮಾಧುರಿ ಕೆಲ ಕಾಲ ದತ್ ಜೊತೆ ಡೇಟಿಂಗ್ ಕೂಡ ಮಾಡುತ್ತಿದ್ದರು. 1991 ರಲ್ಲಿ ಸಾಜನ್ ಸಿನಿಮಾದ ಸಮಯದಲ್ಲಿ ಸಂಜಯ್ ಮತ್ತು ಮಾಧುರಿಗೆ ಪ್ರೇಮಂಕುರವಾಗಿತ್ತು. ಈ ನಡುವೆ ಸಂಜಯ್ ದತ್ ಅವರು, ಕಳ್ ನಾಯಕ್ ಸಿನಿಮಾದಲ್ಲಿ ನಟಿಸುವಾಗ ಜೈಲಿಗೆ ಹೋದರು. ಆಗ ಇವರಿಬ್ಬರ ಪ್ರೀತಿಯೂ ಮುರಿದು ಬಿತ್ತು. ನಂತರ ಮಾಧುರಿ 1999ರಲ್ಲಿ ಶ್ರೀರಾಮ್ ಮಾಧವ್ ನೆನೆಯನ್ನು ಮದುವೆಯಾದರು.