Breaking News
Home / ರಾಜ್ಯ / ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜಾಗೃತಿ

ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜಾಗೃತಿ

Spread the love

ಹಾವೇರಿ: ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹೊಸಪೇಟೆ ಓಣಿಯ ನಾಲ್ವರಲ್ಲಿ ಓರ್ವ ಯಮನ ವೇಷ, ಇಬ್ಬರು ಕಿಂಕರರ ವೇಷ ಹಾಗೂ ಮತ್ತೊಬ್ಬ ಕೊರೊನಾ ವೈರಸ್ ನ ವೇಷ ಹಾಕಿಕೊಂಡು ಪಟ್ಟಣದಲ್ಲಿ ಜನರಿಗೆ ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಯಮ ಕೊರೊನಾ ವೈರಸ್ ವೇಷಧಾರಿಯ ಕೊರಳಿಗೆ ಹಗ್ಗ ಹಾಕಿಕೊಂಡು ಹಿಡ್ಕೊಂಡು ಓಡಾಡುತ್ತಿದ್ದರೆ, ಇಬ್ಬರು ಕಿಂಕರರು ರಸ್ತೆ ತುಂಬ ಓಡಾಡುತ್ತಾ ಮನೆಬಿಟ್ಟು ಹೊರಗಡೆ ಓಡಾಡೋರಿಗೆ ಎಚ್ಚರಿಕೆ ನೀಡಿತ್ತಿದ್ದಾರೆ. ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷಧಾರಿಗಳಿಗೆ ಬ್ಯಾಡಗಿ ಠಾಣೆ ಪೊಲೀಸರು ಸಹ ಸಾಥ್ ನೀಡುತ್ತಿದ್ದಾರೆ. ವೇಷಧಾರಿಗಳ ಮೂಲಕ ಮನೆಬಿಟ್ಟು ಹೊರಬರದೆ, ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡದಂತೆ ತಡೆಯಲು ಸಹಕರಿಸಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ