Breaking News
Home / ಅಂತರಾಷ್ಟ್ರೀಯ / ಕೊರೊನಾ ವಿರುದ್ಧ ಹೋರಾಡಲು ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್ ವಿವಿ

ಕೊರೊನಾ ವಿರುದ್ಧ ಹೋರಾಡಲು ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್ ವಿವಿ

Spread the love

ಹೈದರಾಬಾದ್: ವಿಶ್ವವ್ಯಾಪಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಹೈದರಾಬಾದ್‍ನ ವಿಶ್ವವಿದ್ಯಾಲಯ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ.

ಸ್ಕೂಲ್ ಆಫ್ ಲೈಫ್ ಸೈನ್ಸ್ ಜೀವ ರಾಸಾಯನಿಕ ವಿಭಾಗದ ಅಧ್ಯಾಪಕಿ ಡಾ. ಸೀಮಾ ಮಿಶ್ರಾ ಅವರು ‘ಟಿ ಸೆಲ್ ಎಪಿಟೋಪ್ಸ್’ ಎಂಬ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಬಗ್ಗೆ ಹೈದರಾಬಾದ್ ವಿಶ್ವವಿದ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ಲಸಿಕೆಯನ್ನು ಕೊರೊನಾ ವೈರಸ್ ವಿರುದ್ಧ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುವುದು ಎಂದಿದೆ.

ಪ್ರಾಧ್ಯಾಪಕಿ ಡಾ. ಸೀಮಾ ಮಿಶ್ರಾ ಅವರು ಸಂಭಾವ್ಯ ಲಸಿಕೆ ಬಗ್ಗೆ ಮಾಹಿತಿ ನೀಡಿದ್ದು, ಈ ಲಸಿಕೆಯನ್ನು ಎಲ್ಲಾ ಸೋಂಕಿತರಿಗೂ ನೀಡಬಹುದಾಗಿದೆ. ಇದು ಮಾನುಷ್ಯನ ದೇಹದಲ್ಲಿ ಕೊರೊನಾ ವೈರಸ್ ಪೆಪ್ಟೈಡ್ಸ್ ಗಳು ಇರುವ ಕೋಶಗಳನ್ನು ನಾಶಪಡಿಸಿ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಟ ಕ್ಷಮತೆ ಹೆಚ್ಚಾಗುತ್ತದೆ ಎಂದಿದ್ದಾರೆ.

ಈ ಲಸಿಕೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುವ ತನಕ ಕೊರೊನಾ ವೈರಸ್ ಸೋಂಕು ತಗುಲದಂತೆ ನೋಡಿಕೊಳ್ಳುವುದು ಸಾಮಾಜಿಕ ಅಂತರದಿಂದ ಮಾತ್ರ ಸಾಧ್ಯ. ಈ ಲಸಿಕೆ ಬಳಕೆಗೆ ಲಭ್ಯವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಸಂಶೋಧನೆ ನಿರ್ಣಾಯಕ ಅಂಗೀಕಾರ ಪಡೆಯಲು ವೈಜ್ಞಾನಿಕ ಸಮುದಾಯ ವಿಟ್ರೋ ಅಧ್ಯಯನ ಬಾಕಿ ಇದೆ. ಈ ಅಧ್ಯಯನ ಯಶಸ್ವಿಯಾದರೆ ಲಸಿಕೆ ಬಳಕೆಗೆ ಮುಕ್ತವಾಗಲಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.


Spread the love

About Laxminews 24x7

Check Also

ಕಾಶಿ ವಿಶ್ವನಾಥನ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ. ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ. ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಅಲಂಕೃತವಾಗಿದ್ದ ಪಲ್ಲಕ್ಕಿ.

Spread the loveವಾರಾಣಸಿ (ಉತ್ತರ ಪ್ರದೇಶ): ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರೀತಿಯಲ್ಲಿ ಭಗವಾನ್ ವಿಶ್ವನಾಥನ ಪಲ್ಲಕ್ಕಿಯ ಮೆರವಣಿಗೆಯು ಧಾರ್ಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ