Breaking News
Home / ಜಿಲ್ಲೆ / ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ.

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ.

Spread the love

ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದ್ದ ರಾಜ್ಯ ಸರಕಾರ ಇದೀಗ ಸಂಪೂರ್ಣ ಕರ್ನಾಟಕವನ್ನು ಲಾಕ್ ಡೌನ್ ಮಾಡಿ ಆದಶ ಹೊರಡಿಸಿದೆ.

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ.

ಇದರಿಂದಾಗಿ ಇಡೀ ರಾಜ್ಯದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆ ಸ್ಥಗಿತವಾಗಲಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚಾರ ಬಂದ್ ಆಗಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೇನೂ ಸಿಗುವುದಿಲ್ಲ.

ಮಾರ್ಚ್ 31ರ ವರೆಗೆ ಇಡೀ ರಾಜ್ಯ ಕರ್ಪ್ಯೂ ರೀತಿಯಲ್ಲಿ ಕಾಣಿಸಲಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ನಿಷೇಧಿಸಲಾಗುತ್ತದೆ.

ರಾಜ್ಯದಲ್ಲಿ ಇಂದು ಸಂಜೆಗೆ ಕೊರೋನಾ ವೈರಸ್ ಪತ್ತೆಯಾಗಿರುವವರ ಸಂಖ್ಯೆ 33ಕ್ಕೇರಿದೆ. ಇಂದು ಒಂದೇ ದಿನ 7 ಜನರಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ ರಾಜ್ಯ ಸರಕಾರ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.


Spread the love

About Laxminews 24x7

Check Also

ಕೇಂದ್ರ ಸರ್ಕಾರದ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ : ವಿನಯ ಜವಳಿ

Spread the loveಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡನೆ ಮಾಡಿರುವ ಕೇಂದ್ರ ಬಜೆಟ್ ನಿಜಕ್ಕೂ ದೂರದೃಷ್ಟಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ