Breaking News
Home / ಅಂತರಾಷ್ಟ್ರೀಯ / ಕೊರೋನಾ ಹೆಮ್ಮಾರಿಗೆ ವಿಶ್ವದಾದ್ಯಂತ 16,200 ಜನ ಬಲಿ, 3.67 ಲಕ್ಷ ಸೋಂಕಿತರು..! March 24, 2020 558 death, 739 Cases and 16, Co

ಕೊರೋನಾ ಹೆಮ್ಮಾರಿಗೆ ವಿಶ್ವದಾದ್ಯಂತ 16,200 ಜನ ಬಲಿ, 3.67 ಲಕ್ಷ ಸೋಂಕಿತರು..! March 24, 2020 558 death, 739 Cases and 16, Co

Spread the love

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.24- ಜಗತ್ತಿನಾದ್ಯಂತ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ವಿಶ್ವದಲ್ಲಿ ಈವರೆಗೆ ಸುಮಾರು 16,200 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕು ಪೀಡಿತರ ಸಂಖ್ಯೆ 3.18 ಲಕ್ಷಕ್ಕೇರಿದೆ.

ಕೊರೊನಾ ಬಾಧೆಯಿಂದ ತತ್ತರಿಸಿರುವ ಇಟಲಿಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಮತ್ತೆ ಸಾವಿನ ಪ್ರಕರಣಗಳು ವರದಿಯಾಗಿವೆ. ಇಟಲಿಯಲ್ಲಿ ಈಗಾಗಲೇ ಸತ್ತವರ ಸಂಖ್ಯೆ 6,000 ಸಮೀಪಿಸುತ್ತಿದೆ. . ಅಲ್ಲದೇ ಸುಮಾರು 41,000 ಮಂದಿಗೆ ಸೋಂಕು ತಗುಲಿದ್ದು, ಕಳವಳಕಾರಿಯಾಗಿದೆ. ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಅಮೆರಿಕ ಮತ್ತು ಸ್ಪೇನ್‍ನಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರಿದಿದೆ. ಅಮೆರಿಕದಲ್ಲಿ ನಿನ್ನೆ ಒಂದೇ ದಿನ 139 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 550ಕ್ಕೇರಿದ್ದು, ದೇಶದ ಎಲ್ಲ 50 ರಾಜ್ಯಗಳಿಗೂ ವ್ಯಾಪಿಸಿದ್ದು, ಈ ಪ್ರಾಂತ್ಯಗಳಲ್ಲಿ ಸುಮಾರು ಮತ್ತೆ ಸುಮಾರು ಒಟ್ಟು 43,700 ಪ್ರಕರಣಗಳು ಪತ್ತೆಯಾಗುತ್ತಿವೆ.

ಇರಾನ್ ಮತ್ತು ಸ್ಪೇನ್‍ನಲ್ಲೂ ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಮತ್ತೆ ಸಾವು-ನೋವು ಮರುಕಳಿಸಿವೆ. ಕೋವಿಡ್-19 ಜಗತ್ತಿನ 185 ದೇಶಗಳಲ್ಲಿ ತನ್ನ ಕಬಂಧ ಬಾಹುಗಳನ್ನು ವ್ಯಾಪಿಸಿದ್ದು, ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಒಟ್ಟಾರೆ ಈ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಹೋರಾಡುವಂತಾಗಿದೆ. ಪಾಕಿಸ್ತಾನದಲ್ಲಿ ಕೋವಿಡ್-19 ಸೋಂಕಿಗೆ ಐವರು ಮೃತಪಟ್ಟು, 850ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾರಣಿಸಿಕೊಂಡಿದೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ