ಬೀಜಿಂಗ್,ಏ.13-ಚೀನಾದಲ್ಲಿ ಮತ್ತೆ ಕೊರೊನಾದ 2ನೇ ತರಂಗ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ ರಾಷ್ಟ್ರದಲ್ಲಿ 108 ಹೊಸ ಪ್ರಕರಣ ಪತ್ತೆ ಮಾಡಲಾಗಿದೆ. ಕಳೆದ ಮಾರ್ಚ್‍ನಿಂದೀಚೆಗೆ ದಿನ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಸೋಮಕು ದಾಖಲಾಗಿರುವುದು ಜನರಲ್ಲಿ ಮತ್ತೆ ಆತಂಕಕ್ಕೆ ದೂಡುವಂತಾಗಿದೆ.
ದೇಶದ ಹಲವು ನಗರಗಳಲ್ಲಿ ಲಾಕ್‍ಡೌನ್ ಹಿಂಪಡೆದು ವಿಮಾನಯಾನ ಸೇವೆ ಆರಂಭವಾಗಿದೆ. ಹಲವು ವಿದೇಶಿಯರು ಚೀನಾಗೆ ಬರುತ್ತಿದ್ದಾರೆ. ಇದರ ನಡುವೆ ಹೊಸ ಕೊರೊನಾ ಪ್ರಕರಣಗಳು ಬೀಜಿಂಗ್‍ಗೆ ಎಚ್ಚರಿಕೆ ಗಂಟೆಯಾಗಿದೆ.
# ಸಿಂಗಪುರ್‍ನಲ್ಲಿ 59 ಭಾರತೀಯರಿಗೆ ಸೋಂಕು :
ಸಿಂಗಪುರ್,ಏ.13- ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರಲ್ಲಿ ಡೆಡ್ಲಿ ಕೊರೊನಾ ವೈರಾಣು ಸೋಂಕು ಹಬ್ಬುತ್ತಿರುವ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಸಿಂಗಪುರ್‍ನಲ್ಲಿ 59 ಭಾರತೀಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಕಳೆದ 12 ತಾಸುಗಳಲ್ಲಿ ಸಿಂಗಪುರ್‍ನಲ್ಲಿ ಪತ್ತೆಯಾದ 233 ಹೊಸ ಪ್ರಕರಣಗಳಲ್ಲಿ 59 ಭಾರತೀಯರೂ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಸಿಂಗ್‍ಪುರ್‍ನಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 2,532ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಂಗಪುರ್‍ನಲ್ಲಿ ಸೋಂಕು ಮತ್ತು ರೋಗಜನಕ ಹಾಟ್‍ಸ್ಪಾಟ್‍ಗಳು ಮತ್ತು ರೆಡ್ ಝೋನ್‍ಗಳನ್ನು ಗುರುತಿಸಲಾಗಿದ್ದು, ಆ ಪ್ರದೇಶಗಳನ್ನು ಸೀಲ್ ಮಾಡಿ ತೀವ್ರ ನಿಗಾ ವಹಿಸಲಾಗಿದೆ.