Breaking News
Home / ಜಿಲ್ಲೆ / “ಕೊರೋನಾ‌ ಹರಡುವದಂತೆ ತಡೆಯಲು ಸಾಮಾಜಿಕ‌ ಅಂತರ ಒಂದೇ ಪರಿಹಾರ”

“ಕೊರೋನಾ‌ ಹರಡುವದಂತೆ ತಡೆಯಲು ಸಾಮಾಜಿಕ‌ ಅಂತರ ಒಂದೇ ಪರಿಹಾರ”

Spread the love

ಬೆಳಗಾವಿ:ಕೊರೋನಾ‌ ಹರಡುವದಂತೆ ತಡೆಯಲು ಸಾಮಾಜಿಕ‌ ಅಂತರ ಒಂದೇ ಪರಿಹಾರ ಆಗಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಒಳ್ಳೆಯ ಕೆಲಸ‌ ಮಾಡುತ್ತಿದೆ‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಂದು‌ ನಗರದ ಗೃಹ ಕಚೇರಿಯಲ್ಲಿ ಮಾತನಾಡಿ ಪಡಿತರ ‌ವಿತರಣೆಯಲ್ಲಿ‌ ಜನರಿಗೆ ತೊಂದರೆಯಾಗುತ್ತಿರುವುದು ನಿಜವಾಗಿದೆ.ಬೇರೆ ಜಿಲ್ಲೆಗಳಿಂದ ವಲಸೆ ಬಂದವರಿಗೆ ರೇಷನ ನೀಡಲು ನಿರಾಕರಿಸಲಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ‌ತರುತ್ತೇನೆ ಎಂದರು.

ದುಡಿಯುವ ಕೂಲಿ‌ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಮತ್ತೆ ಹದಿನೈದು ದಿನ‌ ಲಾಕ್ ಡೌನ್ ಮುಂದುವರೆಯಲಿದ್ದು ಈ ಕುರಿತು ಸರ್ಕಾರ ಬೇಗ ಗಮನ ಹರಿಸಬೇಕು ಎಂದರು.
ಅಕ್ಕಿ ಗೋಧಿ ನೀಡಿದರೆ ಪರಿಹಾರ ಸಾಧ್ಯವಾಗದು ಇಂತಿಷ್ಟು ಹಣವನ್ನು ಕೂಡ ಅವರಿಗೆ ನೀಡಬೇಕು.ಸರ್ಕಾರ ಬಳಿ ಹಣ ಇಲ್ಲದಿದ್ದರೆ ಬೇರೆ ಸ್ಕಿಮ್ ಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿ ಇಂತಹ ಕಷ್ಟದ ಸ್ಥಿತಿಯಲ್ಲಿ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಬಡವರಿಗೆ ನೆರವಾಗಬೇಕು ಎಂದರು.

ಅತಿವೃಷ್ಟಿ ಬಂದಾಗಲೂ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇತ್ತಿಚೆಗೆ ನೀಡಿದ ಅನುದಾನದಲ್ಲೂ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಕೇಂದ್ರ ರಾಜ್ಯ ಸರ್ಕಾರಗಳ ಸಲಹೆ ಪಡೆಯಬೇಕು. ಕೇಂದ್ರದಿಂದಲೇ ಎಲ್ಲವನ್ನು ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಮನೆಯಲ್ಲಿ ಇದ್ದರೆ ರೋಗ ನಿವಾರಣೆಯಾಗದು ಮತ್ತು ಕುಟುಂಬ ಸದಸ್ಯರಿಗೂ ಹರಡುವ ಸಾಧ್ಯತೆ ವಿದೆ. ಹೀಗಾಗಿ ಮರ್ಕಜ್ ದಿಂದ ಬಂದವರು ಸಾಮಾಜಿಕ‌ ಹೊಣೆ ಹೊತ್ತು ಖುದ್ದಾಗಿ ಬಂದು ತಪಾಸಣೆಗೆ ಒಳಪಡಬೇಕು ಎಂದು ಹೇಳಿದ ಅವರು ಈಗ ಅವರು ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಮೊದಲು‌ ಸ್ವಲ್ಪ ಗೊಂದಲದಲ್ಲಿದ್ದ ಅವರು ಈಗ ಸರಿಯಾಗಿ ಮಾಹಿತಿ ನೀಡುತ್ತಿದ್ದಾರೆ. ಕ್ವಾರಂಟೈನ್ ಗೆ ಒಳಪಡುತ್ತಿದ್ದಾರೆ ಎಂದರು.

ಯಾವುದೇ ಸಮುದಾಯದಿಂದ ಈ ರೋಗ ಬಂದಿಲ್ಲ. ವಿದೇಶದಿಂದ ಬಂದವರೆ ಈ ದೇಶಕ್ಕೆ ತಂದಿದ್ದಾರೆ. ಅವರನ್ನು ದೇಶದಲ್ಲಿ ಬಿಟ್ಟಿದ್ದು ಯಾರು? ಮೊದಲೆ ಅವರನ್ನು ತನಿಖೆಗೆ ಒಳಪಡಿಸಿದ್ದರೆ ದೊಡ್ಡ ಅನಾಹುತ ತಪ್ಪುತ್ತಿದ್ದು, ಕಟ್ಟೆಚ್ಚರ ವಹಿಸಬೇಕಿತ್ತು. ಹೀಗಾಗಿ ಒಂದೇ ಸಮುದಾಯವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಈಗ ಪತ್ತೆಯಾಗಿರುವ ಪ್ರಕರಣಗಳಲ್ಲಿ ಕೇವಲ ಅವರು ಅಷ್ಟೇ ಇಲ್ಲ ಎಲ್ಲ ಸಮುದಾಯದವರು ಇದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದರು.

ರೋಗ ಧರ್ಮ ಜಾತಿ ನೋಡಿ ಬರುವುದಿಲ್ಲ. ಒಂದೇ ಸಮುದಾಯ ಟಾರ್ಗೆಟ್ ಮಾಡುವುದು ತಪ್ಪು. ರೋಗ ಹರಡುವುದನ್ನು ಮೊದಲು‌ ನಿಯಂತ್ರಣ ಮಾಡಬೇಕಾಗಿದೆ ಎಂದರು.

ವಿವಾದಾತ್ಮಕ ಹೇಳಿಕೆ‌ ನೀಡಿದವರ ಮೇಲೆ ಸಿಎಂ‌ ಕ್ರಮ ಜರುಗಿಸುತ್ತಾರೆ ಎಂದು ಹೇಳಿದ್ದಾರೆ ಅದಕ್ಕೆ ಮುಂದೆ ಸಮಯಾವಕಾಶ ಇದೆ ಮೊದಲು ಇದನ್ನು‌ ನಿಯಂತ್ರಣಕ್ಕೆ ತರಬೇಕಾಗಿ್ದೆದೆ ಎಂದರು.

ಜನರನ್ನು ನಿಷೇಧಿಸಿ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಬೇಕು. ಬೇರೆ ಬೇರೆ ರಾಜ್ಯಗಳಿಗೆ ರೈತರು ಬೆಳೆದ ಬೆಳೆ‌ ಮತ್ತು ತರಕಾರಿಗಳನ್ನು ಕಳುಹಿಸಲು ಅವಕಾಶ ಮಾಡಬೇಕು. ಮತ್ತು ಅಲ್ಲಿಂದ ಆಮದು ಮಾಡಲು ಕೂಡ ಅವಕಾಶ ಕಲ್ಪಿಸಬೇಕು. ಕಟ್ಟೆಚ್ಚರ ವಹಿಸಿ ಅವಶ್ಯಕತೆವಿರುವ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಜನರನ್ನು ಲಾಕ್ ಡೌನ್ ನಲ್ಲಿ‌ ತುಂಬಾ ಸಮಯದಲ್ಲಿ ಇಡಲು ಸಾಧ್ಯವಾಗುವುದಿಲ್ಲ. ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದ ಅವರು ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು‌ ಮೆಚ್ಚುಗೆ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ