ಹಲವು ಪತ್ರಕರ್ತರಿಗೆ ಕೊರೊನಾ ವೈರಸ್: ಆರೋಗ್ಯ ಇಲಾಖೆ ಸಲಹೆ ಹೀಗಿದೆ..
ಹಲವು ಮಾಧ್ಯಮ ಸಿಬ್ಬಂದಿಗೆ ಕೊರೊನಾ ವೈರಸ್ ಬಂದಿದ್ದು, ಈ ಹಿನ್ನೆಲೆ ಆರೋಗ್ಯ ಸಚಿವಾಲಯವು ಪತ್ರಕರ್ತರಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಕೋವಿಡ್ 19 ಹರಡುವುದನ್ನು ತಡೆಯಲು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ. ಹಲವು ಪತ್ರಕರ್ತರು ಕೋವಿಡ್ – 19 ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದು ಬಹಳ ದುರದೃಷ್ಟಕರ ಸುದ್ದಿ. ಪತ್ರಕರ್ತರು ಕರ್ತವ್ಯ ಮಾಡುತ್ತಿರುವಾಗ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಸಾಮಾಜಿಕ ಅಂತರವನ್ನು ಅನುಸರಿಸಿ ಮತ್ತು ಮಾಸ್ಕ್‌ಗಳನ್ನು ಧರಿಸಿ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರ್ವಾಲ್ ಮಾಹಿತಿ ನೀಡಿದರು. ಇತ್ತೀಚಿನ ವರದಿಗಳ ಪ್ರಕಾರ ಮುಂಬಯಿಯ 53 ಪತ್ರಕರ್ತರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಎಲ್ಲರೂ ಐಸೊಲೇಷನ್‌ನಲ್ಲಿದ್ದಾರೆ.