Breaking News
Home / ಜಿಲ್ಲೆ / ಸಂಚು ರೂಪಿಸಿದ್ದ ಆರು ಮಂದಿ ತೀವ್ರ ಮತೀಯ ವಾದಿಗಳನ್ನು ನಗರ ಪೊಲೀಸರು ಹಿಂದೂ ಸಂಘಟನೆಯ ಕಾರ್ಯಕರ್ತ ವರುಣ್ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಸಂಚು ರೂಪಿಸಿದ್ದ ಆರು ಮಂದಿ ತೀವ್ರ ಮತೀಯ ವಾದಿಗಳನ್ನು ನಗರ ಪೊಲೀಸರು ಹಿಂದೂ ಸಂಘಟನೆಯ ಕಾರ್ಯಕರ್ತ ವರುಣ್ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಿದ್ದಾರೆ.

Spread the love

ಬೆಂಗಳೂರು, ಜ.17- ಹಿಂದೂ ಮುಖಂಡರನ್ನು ಹತ್ಯೆ ಮಾಡಿ ನಗರದಲ್ಲಿ ಶಾಂತಿ ಕದಡಿ ಮತೀಯ ಗಲಭೆ ಹುಟ್ಟುಹಾಕಲು ಭಾರೀ ಸಂಚು ರೂಪಿಸಿದ್ದ ಆರು ಮಂದಿ ತೀವ್ರ ಮತೀಯ ವಾದಿಗಳನ್ನು ನಗರ ಪೊಲೀಸರು ಹಿಂದೂ ಸಂಘಟನೆಯ ಕಾರ್ಯಕರ್ತ ವರುಣ್ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಆರೋಪಿಗಳ ಬಂಧನ ಮತ್ತು ಅದರ ಕಾರ್ಯಾಚರಣೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್, ಆರೋಪಿಗಳು ಅತ್ಯಂತ ಚಾಣಾಕ್ಷತನದಿಂದ ಸಾಕ್ಷಿಗಳು ಸಿಗದಂತೆ ವಿಧ್ವಂಸಕ ಕೃತ್ಯ ನಡೆಸಲು ಪ್ರಯತ್ನಿಸಿದ್ದರು. ಆದರೆ, ಬೆಂಗಳೂರು ಪೊಲೀಸರ ಚಾಣಾಕ್ಷತನದ ಮುಂದೆ ದುಷ್ಕರ್ಮಿಗಳ ಆಟ ನಡೆಯುವುದಿಲ್ಲ ಎಂದು ವಿವರಿಸಿದರು.

ಡಿಸೆಂಬರ್ 22ರಂದು ಕಲಾಸಿಪಾಳ್ಯ ಹೊಸ ಬಡಾವಣೆಯ ಕುಂಬಾರಗುಂಡಿ ರಸ್ತೆಯಲ್ಲಿ ರಸ್ತೆಯಲ್ಲಿ ನಡೆದಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ವರುಣ್‍ಕುಮಾರ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್.ಟಿ.ನಗರ, ಶಾಮ್‍ಪುರ ಮುಖ್ಯರಸ್ತೆಯ ಇರ್ಫಾನ್ ಅಲಿಯಾಸ್ ಮೊಹಮ್ಮದ್ ಇರ್ಫಾನ್ (33) ಟೈಲರ್ ಕೆಲಸ, ಆರ್.ಟಿ.ನಗರ ಭುವನೇಶ್ವರಿನಗರದ ಸೈಯ್ಯದ್ ಅಕ್ಬರ್ ಅಲಿಯಾಸ್ ಮ್ಯಾಕಾನಿಕ್ ಅಕ್ಬರ್ (46), ಕೆ.ಜಿ.ಹಳ್ಳಿಯ ಗೋವಿಂದಪುರ, ಗಾಂಧೀನಗರದ ನಿವಾಸಿ ಅಕ್ಬರ್ ಬಾಷಾ ಅಲಿಯಾಸ್ ಅಕ್ಬರ್ (27) ಅಮೆಜಾನ್ ಕಂಪೆನಿಯಲ್ಲಿ ಡಿಲೆವರಿ ಬಾಯ್ ವೃತ್ತಿ.

ಲಿಂಗರಾಜಪುರದ ಸಿವಿಲ್ ಕಂಟ್ರ್ಯಾಕ್ಟರ್ ಸಯ್ಯದ್ ಸಿದ್ದಿಕಿ ಅಕ್ಬರ್ (27), ಆರ್.ಟಿ.ನಗರದ ಶಾಂಪುರ ಮುಖ್ಯರಸ್ತೆಯ ಎಲೆಕ್ಟ್ರಿಕಲ್ ಇಂಟೇರಿಯರ್ ಕೆಲಸ ಮಾಡುವ ಸನ ಅಲಿಯಾಸ್ ಸನಾವುಲ್ಲಾ ಶರೀಫ್ (28), ಶಿವಾಜಿನಗರ ಚಾಂದಿನಿ ಚೌಕ್‍ನ ಸ್ಟೌಂಡ ಸಿಸ್ಟಮ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಸಾಧಿಕ್ ಉಲ್ ಅಮೀನ್ ಅಲಿಯಾಸ್ ಸೌಂಡ್ ಸಾಧಿಕ್ (39) ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳೆಲ್ಲರೂ ಮುಸ್ಲಿಂ ಧರ್ಮದ ಕಟ್ಟಾ ಅನುಯಾಯಿಗಳಾಗಿದ್ದು, ಎಸ್‍ಡಿಪಿಐ ಕಾರ್ಯಕರ್ತರಾಗಿದ್ದಾರೆ. ವರುಣ್ ಕೊಲೆ ಯತ್ನ ಪ್ರಕರಣದಲ್ಲಿ ಬೆಂಗಳೂರಿನ ಶಾಂತಿ ಕದಡಲು ಸಂಚು ರೂಪಿಸಿದ್ದರು. ಡಿ.22ರಂದು ಸಂಸದ ತೇಜಸ್ವಿ ಸೂರ್ಯ, ವಾಗ್ಮಿ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಸಿಎಎ ಮತ್ತು ಎನ್‍ಆರ್‍ಸಿ ಕಾನೂನನ್ನು ಬೆಂಬಲಿಸಿ ಟೌನ್‍ಹಾಲ್‍ನಲ್ಲಿ ಸಮಾವೇಶ ಆಯೋಜಿಸಿದ್ದರು. ಇದರಲ್ಲಿ ಭಾಗವಹಿಸಿದ್ದ ವರುಣ್ ಬೌನ್ಸ್ ಗಾಡಿಯನ್ನು ಬಾಡಿಗೆಗೆ ಪಡೆದು ವಾಪಸ್ ಹೋಗುತ್ತಿದ್ದರು.

ಆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿ ಏಳು ಬಾರಿ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕಲ್ಲುಗಳನ್ನು ಎಸೆದು ಕಾವಿಧಾರಿಯಾಗಿದ್ದ ವರುಣ್ ಅವರನ್ನು ಹಿಂಬಾಲಿಸಿಕೊಂಡು ಬಂದು ಕುಂಬಾರಗುಡ್ಡಿ ರಸ್ತೆಯಲ್ಲಿ ಅಡ್ಡಗಟ್ಟಿ ಬೀಳಿಸಿ ಮಚ್ಚು-ಲಾಂಗುಗಳಿಂದ ತಲೆ, ಕುತ್ತಿಗೆ, ಬೆನ್ನಿನ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಾಳು ಸತ್ತಿರಬಹುದೆಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಿದರು.

ಈ ಆರೋಪಿಗಳು ತಮ್ಮ ದುಷ್ಕøತ್ಯಗಳಿಗೆ ಸಾಕ್ಷ್ಯ ಮತ್ತು ಸುಳಿವು ಸಿಗಬಾರದು ಎಂಬ ಮುನ್ನೆಚ್ಚರಿಕೆಯಿಂದ ನಾನಾ ತಂತ್ರಗಳನ್ನು ಬಳಸುತ್ತಿದ್ದರು. ತಮ್ಮ ಮೊಬೈಲ್‍ಗಳನ್ನು ಆನ್ ಮಾಡಿ ಮನೆಯಲ್ಲೇ ಇಟ್ಟು ಬರುತ್ತಿದ್ದರು. ಮುಖ ಚಹರೆಯನ್ನು ಮರೆಮಾಚಲು ಹೆಲ್ಮೆಟ್ ಧರಿಸುತ್ತಿದ್ದರು.

ಕೃತ್ಯಕ್ಕೆ ಕದ್ದ ವಾಹನಗಳನ್ನೇ ಬಳಸುತ್ತಿದ್ದರು. ಅವುಗಳ ನಂಬರ್ ಪ್ಲೇಟ್‍ಗಳಿಗೆ ಕಪ್ಪು ಮಸಿ ಬಳಿಯುತ್ತಿದ್ದರು. ದುಷ್ಕøತ್ಯ ಮಾಡಲು ಹೋಗುವಾಗ 2-3 ಜೀನ್ಸ್ ಪ್ಯಾಂಟ್‍ಗಳು, ಶರ್ಟ್, ಟೀ ಶರ್ಟ್‍ಗಳನ್ನು ಒಂದರ ಮೇಲೆ ಒಂದರಂತೆ ಹಾಕುತ್ತಿದ್ದರು. ಘಟನೆ ಮಾಡುವಾಗ ಒಂದು ಬಟ್ಟೆ ಹಾಕಿದರೆ, ಘಟನೆ ನಂತರ ಮೇಲಿನ ಟೀ ಶರ್ಟ್ ತೆಗೆದು ಹಾಕುತ್ತಿದ್ದರು.

ಅಲ್ಲಿಂದ ಸ್ವಲ್ಪ ದೂರ ಹೋಗಿ ಮತ್ತೊಂದು ಟೀ ಶರ್ಟ್‍ನ್ನು ತೆಗೆದು ಎಸೆದು, ವಾಹನಗಳನ್ನು ಬದಲಾವಣೆ ಮಾಡಿ, ಮನೆಗೆ ಹೋದಾಗ ಮತ್ತೊಂದು ರೀತಿಯ ಬಟ್ಟೆಯಲ್ಲಿ ಹೋಗುತ್ತಿದ್ದರು.
ವರುಣ್ ಅವರನ್ನು ಕೊಲ್ಲಲು ಯತ್ನಿಸುವ ಸಂದರ್ಭದಲ್ಲಿ ಹಾಕಿದ್ದ ಬಟ್ಟೆಗಳನ್ನು ಆರೋಪಿಗಳು ಬಿಡದಿ ಬಳಿಯ ಕೆಳ ಸೇತುವೆ ಬಳಿ ಬಿಚ್ಚಿ ಹಾಕಿ ಅಲ್ಲಿಂದ ಯೂರ್ಟ್ ಮಾಡಿಕೊಂಡು ಕೆ.ಆರ್.ಪುರಂಗೆ ಬಂದು ಅಲ್ಲಿನ ಕೆರೆ ಬಳಿ ಹೆಲ್ಮೆಟ್ ಹಾಗೂ ಮತ್ತೊಂದು ಜತೆ ಬಟ್ಟೆಗಳನ್ನು ತೆಗೆದು ಹಾಕಿ ಮತ್ತೆ ವಾಪಸ್ ಕೆ.ಜಿ.ಹಳ್ಳಿಗೆ ಬಂದು ಅಲ್ಲಿಂದ ಹೆಗ್ಗಡೆ ನಗರಕ್ಕೆ ಹೋಗಿದ್ದಾರೆ ಎಂದು ಆಯುಕ್ತರು ವಿವರಿಸಿದರು.


Spread the love

About Laxminews 24x7

Check Also

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿ

Spread the love ಬೆಂಗಳೂರು: ನಿರೀಕ್ಷೆಯಂತೆ ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ