ನವದೆಹಲಿ(16-01-2019): 45,000 ಕೋಟಿ ರೂ.ಗಳ ರಕ್ಷಣಾ ಜಲಾಂತರ್ಗಾಮಿ ಯೋಜನೆಯಲ್ಲಿ ನರೇಂದ್ರ ಮೋದಿ ಸರ್ಕಾರವು ಕೈಗಾರಿಕೋದ್ಯಮಿ ಗೌತಮ್ ಅದಾನಿಯ ಕಂಪೆನಿ ಪರ ಒಲವು ತೋರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅದಾನಿ ಗ್ರೂಫ್ ಡಿಫೆನ್ಸ್ ಹಡಗುಗಳು ಅಥವಾ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸುವ ‘ಅನುಭವ’ ಹೊಂದಿಲ್ಲ. ಒಂದು ಷರತ್ತಿನ ಆಧಾರದ ಮೇಲೆ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಕೆ ಗುತ್ತಿಗೆ ನೀಡಲು ಕೇಂದ್ರ ಮುಂದಾಗಿದೆ. ಸಾಮಾನ್ಯವಾಗಿ ಇದರಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಮತ್ತು ನಡೆಸುವ ಅನುಭವವನ್ನು ಪರಿಗಣಿಸಲಾಗುತ್ತದೆ ಆದರೆ ಇದು ಅದಾನಿ ಕಂಪೆನಿಗೆ ಇಲ್ಲ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್, 2016 ಅನ್ನು ಉಲ್ಲಂಘಿಸಿ ಸರ್ಕಾರ ಏಕೆ ಖಾಸಗಿ ಘಟಕದತ್ತ ಒಲವು ತೋರುತ್ತಿದೆ ಎಂದು ಅವರು ಕೇಳಿದರು. ಈ ಯೋಜನೆಗಾಗಿ ಸ್ಥಾಪಿಸಲಾದ ಭಾರತೀಯ ನೌಕಾಪಡೆಯ “ಸಬಲೀಕೃತ ಸಮಿತಿ” ಯ ಶಿಫಾರಸುಗಳನ್ನು ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರು ಮುಂದೆ ಬಂದು ಈ ಬಗ್ಗೆ ಉತ್ತರಿಸಬೇಕಿದೆ. ‘ನ್ಯಾಯಯುತತೆ’ ‘ಫೌಲ್ ಪ್ಲೇ’ ಅಲ್ಲ, ‘ರಾಷ್ಟ್ರೀಯತೆ’ ‘ಬಂಡವಾಳ ಶಾಹಿತ್ವ ಅಲ್ಲ’ ಎಂದು ಸುರ್ಜೆವಾಲಾ ಹೇಳಿದ್ದಾರೆ.