Breaking News

ರಾಷ್ಟ್ರೀಯ

ವಿರಸ ಮರೆತ ಜೋಡಿ, ಹಾರ ಬದಲಾಯಿಸಿಕೊಂಡು ಮತ್ತೆ ಒಂದಾದ ದಂಪತಿ

ಹಾಸನ/ಗಂಗಾವತಿ: ವಿಚ್ಛೇದನಕ್ಕೆ ಮುಂದಾಗಿದ್ದ ಮೂರು ಜೋಡಿಗಳು ಶನಿವಾರ ನಡೆದ ಲೋಕ್ ಅದಾಲತ್​ನಲ್ಲಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ. ಜಿಲ್ಲೆಯಲ್ಲಿ 5,83,545 ಇತರೆ ಪ್ರಕರಣಗಳಲ್ಲಿ ಉಭಯ ಕಕ್ಷಿದಾರರು ಫಲಾನುಭವಿಗಳಾಗಿದ್ದಾರೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಷ್ಟೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಒಟ್ಟು 42 ನ್ಯಾಯಾಲಯಗಳಲ್ಲಿ ಸಂಧಾನ ಪ್ರಕ್ರಿಯೆ ಜರುಗಿದ್ದು, ಉತ್ತಮ ಫಲಿತಾಂಶ ಹೊರಬಿದ್ದಿದೆ. ನ್ಯಾಯಾಲಯಗಳಲ್ಲಿ …

Read More »

ಜಾತಿ ಗಣತಿ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಸಪ್ಟೆಂಬರ್ 14 ಪಂಚಮಸಾಲಿ ಸಮಾಜ ಬಾಂಧವರ ಸಭೆ-ಜಯಮೃತ್ಯಂಜಯ ಸ್ವಾಮೀಜಿ

ಜಾತಿ ಗಣತಿ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಸಪ್ಟೆಂಬರ್ 14 ಪಂಚಮಸಾಲಿ ಸಮಾಜ ಬಾಂಧವರ ಸಭೆ-ಜಯಮೃತ್ಯಂಜಯ ಸ್ವಾಮೀಜಿ ಚಿಕ್ಕೋಡಿ:ಲಿಂಗಾಯತ ಪಂಚಮಸಾಲಿಗಳು ಜಾತಿ ಗಣತಿಯಲ್ಲಿ ಏನನ್ನ ಬರೆಸಬೇಕು ಎನ್ನುವ ಕುರಿತು ಸೆಪ್ಟೆಂಬರ್ 14 ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕೋಡಿ ಪಟ್ಟಣದ ಕೇಶವ ಕಲಾ ಭವನದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಕೂಡಲ ಸಂಗಮದ ಬಸವ ಜಯಜಯಮೃತ್ಯಂಜಯ ಸ್ವಾಮೀಜಿ ಹೇಳಿದರು. ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯ ಸರಕಾರದಿಂದ ಜಾತಿ …

Read More »

ಸಾನ್ನಿಹಳ್ಳಿ ಶ್ರೀಗಳು ಜನಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲ

ಸಾನ್ನಿಹಳ್ಳಿ ಶ್ರೀಗಳು ಜನಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲ ಉಂಟಾಗಿದ್ದು, ಎಲ್ಲ ಸ್ವಾಮೀಜಿಗಳು ಸಮೂದಾಯ ಒಂದು ಮಾಡಲು ಹೊರಾಡುತ್ತಿದ್ದಾರೆ. ಆದರೆ ಶುಕ್ರವಾರ ಧಾರವಾಡದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ನಾಡಿನ ಪ್ರತಿಷ್ಠಿತ ಸಾನ್ನಿಹಳ್ಳಿಯ ಶ್ರೀಗಳು ದಿಂಗಾಲೇಶ್ವರ ಶ್ರೀಗಳು ಬಟ್ಟೆ ಬದಲಾವಣೆ ಮಾಡಿದ್ದಾರೆ. ಕಾವಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಗೊಸೂಂಬೆ ಆಗಿದ್ದಾರೆ ಎಂದು ನಮ್ಮ ಬಗ್ಗೆ ಮಾತನಾಡಿದ್ದಾರೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ …

Read More »

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನ ವಿರೋಧಿಸಿ ಮತ್ತೆರಡು ಪಿಐಎಲ್ ಸಲ್ಲಿಕೆ

ನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮತ್ತೆರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಹಿಂದೂ ಅಲ್ಲದ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ವಾಪಸ್‌ ಪಡೆಯಲು ಸರಕಾರಕ್ಕೆ ನಿರ್ದೇಶನ ನೀಡಬೇಕು. ಅದೇ ರೀತಿ ದಸರಾ ಉದ್ಘಾಟನೆಯು ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವೆಂದು ಘೋಷಿಸಿ ಅದನ್ನು …

Read More »

ಅಂಬಾವಿಲಾಸ ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರ ಅದ್ಭುತ

ಮೈಸೂರು: ಮೈಸೂರಿನ ಪ್ರಮುಖ ಆಕರ್ಷಣೆ ಅಂಬಾವಿಲಾಸ ಅರಮನೆ. ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಈ ಅಂಬಾವಿಲಾಸ ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರದ ಇತಿಹಾಸ ಏನು? ಎಂಬ ಕುತೂಹಲಕಾರಿ ಅಂಶಗಳನ್ನು ಒಳಗೊಂಡ ವಿಶೇಷ ವರದಿ ಇಲ್ಲಿದೆ. ಮೈಸೂರು ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರ ನೋಡುವುದೇ ಒಂದು ಖುಷಿ. ಮೈಸೂರು ಅರಮನೆಯ ದೀಪಾಲಂಕಾರಕ್ಕೆ ಒಟ್ಟು 96,700 ವಿಶೇಷ ಬಲ್ಬ್​ಗಳನ್ನು ಅಳವಡಿಸಲಾಗುತ್ತದೆ. ವಿಶೇಷವೆಂದರೆ ಹಳೆಯ ಮಾದರಿಯ ಬುರುಡೆಯ ಆಕಾರದ ಎಂ ಆಕೃತಿಯ ತಂತಿಯನ್ನೊಳಗೊಂಡ 15 ವ್ಯಾಟ್ ಸಾಮರ್ಥ್ಯದ …

Read More »

ದಸರಾ ಹಬ್ಬದ ಪ್ರಯುಕ್ತ ನೈರುತ್ಯ ರೈಲ್ವೆಯು ವಿಶೇಷ ರೈಲು ಸೇವೆ

ಹುಬ್ಬಳ್ಳಿ: ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಈ ಕೆಳಗಿನಂತೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. 1. ರೈಲು ಸಂಖ್ಯೆ 07379 ಎಸ್‌ಎಸ್‌ಎಸ್ ಹುಬ್ಬಳ್ಳಿ – ಯಶವಂತಪುರ ಒನ್‌-ವೇ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಸೆಪ್ಟಂಬರ್ 30, 2025 ರಂದು ಮಧ್ಯಾಹ್ನ 12:00ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು ಅದೇ ದಿನ ರಾತ್ರಿ 08:15ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು …

Read More »

ಘಟಪ್ರಭಾ ನದಿಯ ಪ್ರವಾಹದಿಂದ ರೈತರು ಬೆಳೆದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ನೀರು ಪಾಲ

ಮೂಡಲಗಿ: ಘಟಪ್ರಭಾ ನದಿಯ ಪ್ರವಾಹದಿಂದ ರೈತರು ಬೆಳೆದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ನೀರು ಪಾಲಾಗಿದ್ದು, ವಿದ್ಯುತ್ ಪರಿಕರಗಳು, ರಸ್ತೆಗಳು ಹಾಳಾಗಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಮುಂಚೆ ಹಾನಿಯಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ಎಸ್.ಡಿ.ಆರ್.ಎಫ್ ನಿದಿಯ ಜೊತೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸಂತ್ರಸ್ತರ ರೈತರ ನೆರವಿಗೆ ಧಾವಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು. ಶುಕ್ರವಾರ ಸೆ-05 …

Read More »

ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ಅಸೆಂಬ್ಲಿ ವಿಸರ್ಜಿಸಿ ಚುನಾವಣೆ ಎದುರಿಸಿ: ಮಾಜಿ ಸಚಿವ ಎಸ್. ಸುರೇಶ್

ಬೆಂಗಳೂರು: 2023 ಮೇ ತಿಂಗಳಿನಲ್ಲಿ ಇವಿಎಂ ಮೂಲಕ ಚುನಾಯಿತವಾದ ಕಾಂಗ್ರೆಸ್​​ನ ಈ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ನೀವು ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸವಾಲು ಹಾಕಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಗೆದ್ದಾಗಲೆಲ್ಲ ಚೆನ್ನಾಗಿದೆ. ಗೆಲ್ಲದೇ ಇದ್ದಾಗ ಇವಿಎಂ ಎಂಬ ಧೋರಣೆಯು ಅತ್ಯಂತ ಹಳೆಯ …

Read More »

ಹುಕ್ಕೇರಿ : ಹುಕ್ಕೇರಿ ಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ ಪಥ ಸಂಚಲನ.

ಹುಕ್ಕೇರಿ : ಹುಕ್ಕೇರಿ ಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ ಪಥ ಸಂಚಲನ. ಹುಕ್ಕೇರಿ ನಗರದಲ್ಲಿ ಭದ್ರಾವತಿಯ ರಾಷ್ಟ್ರೀಯ RAF ಸೇನಾ ಪಡೆಯಿಂದ ಪಥಸಂಚಲನ ಜರುಗಿತು. ನಗರದಲ್ಲಿ ಕಳೆದ 9 ದಿನಗಳಿಂದ ಗಣೇಶ ಹಬ್ಬ ಆಚರಣೆ ಮತ್ತು ಶುಕ್ರವಾರ ದಿನ ಇದ್ ಮಿಲಾದ್ ಆಚರಣೆ ಹಾಗೂ ಸರಣಿ ಉರುಸು ಕಾರ್ಯಕ್ರಮಗಳು ಜರಗುತ್ತಿರುವದರಿಂದ ಯಾವದೇ ತರಹದ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಗೋಕಾಕ ಡಿ ಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಹುಕ್ಕೇರಿ …

Read More »

ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್​ ಅವಕಾಶ ನೀಡಿದೆ.

ಬೆಂಗಳೂರು: ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧದ ಎಫ್ಐಆರ್​​ಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ತನಿಖೆ ಮುಂದುವರೆಸಬಹುದು. ಆದರೆ, ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ತಿಳಿಸಿದೆ. ತಮ್ಮ ಹೇಳಿಕೆಯ ವಿರುದ್ಧ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ಐ. ಅರುಣ್ ಅವರಿದ್ದ …

Read More »