ಸಾನ್ನಿಹಳ್ಳಿ ಶ್ರೀಗಳು ಜನಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲ ಉಂಟಾಗಿದ್ದು, ಎಲ್ಲ ಸ್ವಾಮೀಜಿಗಳು ಸಮೂದಾಯ ಒಂದು ಮಾಡಲು ಹೊರಾಡುತ್ತಿದ್ದಾರೆ.
ಆದರೆ ಶುಕ್ರವಾರ ಧಾರವಾಡದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ನಾಡಿನ ಪ್ರತಿಷ್ಠಿತ ಸಾನ್ನಿಹಳ್ಳಿಯ ಶ್ರೀಗಳು ದಿಂಗಾಲೇಶ್ವರ ಶ್ರೀಗಳು ಬಟ್ಟೆ ಬದಲಾವಣೆ ಮಾಡಿದ್ದಾರೆ. ಕಾವಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಗೊಸೂಂಬೆ ಆಗಿದ್ದಾರೆ ಎಂದು ನಮ್ಮ ಬಗ್ಗೆ ಮಾತನಾಡಿದ್ದಾರೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಹಟ್ಟಿ ಫಕೀರ ಸಂಸ್ಥಾನ ಮಠದ ಸಂಪ್ರದಾಯದಂತೆ ನಾವು ಕೇಸರಿ ಪೇಟ್, ಬಿಳಿ ಬಟ್ಟೆ, ಹಸಿರು ಶಾಲು ಕೊಟ್ಟಿದ್ದೇವೆ, ಇವು ರಾಷ್ಟ್ರಧ್ವಜದ ಸಂಕೇತ, ನಮ್ಮ ಬಗ್ಗೆ ಸಾನ್ನಿಹಳ್ಳಿ ಶ್ರೀಗಳು ಯಾರ ಒತ್ತಡಕ್ಕೆ ಒಳಗಾಗಿ ನನ್ನ ಬಗ್ಗೆ ಈ ರೀತಿಯಾಗಿ ಮಾತನಾಡಿದ್ದಾರೆ ಗೊತ್ತಿಲ್ಲ? ಶಿರಹಟ್ಟಿ ಮಠದಲ್ಲಿ ಐದು ತರಹದ ಬಟ್ಟೆ ಧರಿಸುವ ಸಂಪ್ರದಾಯವಿದೆ.
ನಾನು ಈ ಮಠಕ್ಕೆ 14 ನೇ ಪೀಠಾಧಿಪತಿ, ನಾನು ನನ್ನ ಸ್ವಂತ ಇಚ್ಛೆಯಿಂದ ಈ ಬಟ್ಟೆ ಧರಿಸಿಲ್ಲ, ಮಠದ ಸಂಪ್ರದಾಯದಂತೆ ಬಟ್ಟೆ ಧರಿಸಿದ್ದೇನೆ. ತಾವು ಇಡೀ ಸಮಾಜದ ಬಟ್ಟೆಯನ್ನು (ದಾರಿಯನ್ನು) ಬದಲಿಸುತ್ತಿದ್ದೀರಿ, ತಮ್ಮ ಬಗ್ಗೆ ಹಾಗೂ ಸಿರಿಗೇರಿಪೀಠದ ಬಗ್ಗೆ ಅಪಾರವಾದ ಗೌರವವಿದೆ. ನಿಮ್ಮನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯುವ ಸ್ವಾಮೀಜಿ ನಾನು, ವೀರಶೈವ ಲಿಂಗತತ್ವದ ಬಗ್ಗೆ ಸಿರಿಗೇರಿಯ ಶ್ರೀಗಳು ಸಾಕಷ್ಟು ಉತ್ತಮ ವಿಚಾರಗಳನ್ನು ಜನರಿಗೆ ತಿಳಿಸಿದ್ದಾರೆ. ಅದರಂತೆ ತಮ್ಮ ಮಠದ ಮೂಲ ಸಿದ್ದಾಂತವನ್ನು ತಾವು ಅಪ್ಪಿ ಕೊಳ್ಳಬೇಕು ಹೊರತು ತಪ್ಪಿ ನಡೆಯಬಾರದು ಎಂದರು.
ಇತ್ತಿಚೆಗೆ ತಾವು ಕಲಬುರಗಿಯಲ್ಲಿ ಜಂಗಮರು ಅವಿವೇಕಿಗಳು ಎಂದು ಹೇಳಿಕೆ ನೀಡಿದ್ದೀರಿ, ಬಸವಣ್ಣವರು ಯಾವ ವಚನದಲ್ಲಿ ಜಾತಿ ನಿಂದನೆ ಮಾಡುವಂತೆ ಯಾವ ವಚನದಲ್ಲಿ ಹೇಳಿದ್ದಾರೆ ಎಂಬುದನ್ನು ಸಾನ್ನಿಹಳ್ಳಿ ಶ್ರೀಗಳು ತಿಳಿಯಬೇಕು. ತಾವು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಬೇಕಿತ್ತು. ಆದರೆ ನಿವೃತ್ತ ಐಎಎಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾವು ನಡೆಯುತ್ತಿದ್ದೀರಿ ಎಂದು ಟೀಕಿಸಿದರು.
ಇಷ್ಟೇಲ್ಲ ಮಾತನಾಡುವ ಸಾನ್ನಿಹಳ್ಳಿ ಶ್ರೀಗಳು ತಮ್ಮ ಪೀಠಕ್ಕೆ ಮುಂದೆ ಯಾವ ಜಾತಿಯ ವಟುವನ್ನು ಪೀಠಾಧಿಪತಿಗಳಾಗಿ ನೇಮಕ ಮಾಡುತ್ತೀರಿ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಬಸವ ಸಂಸ್ಕøತಿ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಸ್ವಾಮೀಜಿಗಳು ಮಹಾವೀರ, ಬುದ್ದರ ಹಾಗೇ ಬಸವ ಧರ್ಮ ಸ್ಥಾಪಿಸಿ ಆದರೆ ಅಖಂಡ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವುದು ಸರಿಯಲ್ಲ, ಅಭಿಯಾನದಲ್ಲಿ ಬಸವಣ್ಣನವರನ್ನು ನೀವೇ ಖರೀದಿ ಮಾಡಿದ ರೀತಿಯಲ್ಲಿ ಮಾತನಾಡುವುದು ಸಮಂಜಸವಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸಾಹುಕಾರ, ಪ್ರಕಾಶ ಬೆಂಡಿಗೇರಿ ಇತರರು ಇದ್ದರು.
Laxmi News 24×7