ಜಾತಿ ಗಣತಿ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಸಪ್ಟೆಂಬರ್ 14 ಪಂಚಮಸಾಲಿ ಸಮಾಜ ಬಾಂಧವರ ಸಭೆ-ಜಯಮೃತ್ಯಂಜಯ ಸ್ವಾಮೀಜಿ
ಚಿಕ್ಕೋಡಿ:ಲಿಂಗಾಯತ ಪಂಚಮಸಾಲಿಗಳು ಜಾತಿ ಗಣತಿಯಲ್ಲಿ ಏನನ್ನ ಬರೆಸಬೇಕು ಎನ್ನುವ ಕುರಿತು ಸೆಪ್ಟೆಂಬರ್ 14 ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕೋಡಿ ಪಟ್ಟಣದ ಕೇಶವ ಕಲಾ ಭವನದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಕೂಡಲ ಸಂಗಮದ ಬಸವ ಜಯಜಯಮೃತ್ಯಂಜಯ ಸ್ವಾಮೀಜಿ ಹೇಳಿದರು.
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯ ಸರಕಾರದಿಂದ ಜಾತಿ ಗಣತಿಗೆ ನಿರ್ಧಾರ ಮಾಡಿದ ಹಿನ್ನೆಲೆಯಲ್ಲಿ,ಸಭೆಯಲ್ಲಿ ಸಲಹೆ ನೀಡಲ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಆಗಮಿಸುವಂತೆ ಸ್ವಾಮೀಜಿ ಮನವಿ ಮಾಡಿದರು. ಇನ್ನೂ ಇದೇ ಸಮಯದಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದ್ದು ಸಭೆ ಬಳಿಕ ಏನೂ ನಮೂದಿಸಬೇಕು ಎಂದು ಸಮಾಜದ ಬಾಂಧವರಿಗೆ ತಿಳಿಸಲಾಗುವದು ಎಂದು ಬಸವ ಜಯ ಮೃತ್ಯಂಜಯ ಸ್ವಾಮೀಜಿ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸುಧಾಕರ ಪಾಟೀಲ, ಚಿದಾನಂದ ಕಪಲಿ,ಅಶೋಕ ಹರಗಾಪೂರೆ,ಮಹಾದೇವ ಈಟಿ,ಮಹಾದೇವ ಭೇಂಡವಾಡೆ,ದುಂಡಪ್ಪ ಕೊಟೆಪ್ಪಗೊಳ,ಜಯಾನಂದ ಕಪಲಿ,ರಾಜು ಹುದ್ದಾರ,ದೇವಪ್ಪ ಕಾಮಗೌಡ,ಸಿದ್ದಪ್ಪ ಕಾಮಗೌಡ,ಮಿನಾಕ್ಷಿ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7