Breaking News

ಜಿಲ್ಲೆ

ಕೊಲೆ ಪ್ರಕರಣ: ಎರಡು ವಿಶೇಷ ತಂಡ ರಚನೆ

ಬೆಳಗಾವಿ: ತಾಲ್ಲೂಕಿನ ಕರ್ಲೆ ಬಳಿ ವ್ಯಕ್ತಿಯೊಬ್ಬರ ಕೊಲೆ ಮಾಡಿದ ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ. ಕರ್ಲೆ-ಬಾದರವಾಡಿ ರಸ್ತೆಯಲ್ಲಿ ಸೋಮವಾರ ಹೊರಟಿದ್ದ ಮೋಹನ ತಳವಾರ(55) ಅವರನ್ನು ದುಷ್ಕರ್ಮಿಗಳು ತಡೆದು, ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ‘ಮೋಹನ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಎರಡು ವಿಶೇಷ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ’ …

Read More »

ಕುಮಾರಸ್ವಾಮಿ ಅರೆಸ್ಟ್‌ ಮಾಡೋಕೆ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಸಾಕು, 100 ಸಿದ್ದರಾಮಯ್ಯ ಯಾಕೆ ಬೇಕು?: ಸಿಎಂ

ಆಲಮಟ್ಟಿ: ಹೆಚ್.ಡಿ.ಕುಮಾರಸ್ವಾಮಿಯನ್ನು ಬಂಧಿಸೋಕೆ ನೂರು ಸಿದ್ದರಾಮಯ್ಯ ಬೇಕಾಗಿಲ್ಲ. ಒಬ್ಬ ಪೊಲೀಸ್ ಪೇದೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಅವರು ಬುಧವಾರ ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.   ನೂರು ಸಿದ್ದರಾಮಯ್ಯ ಬಂದರೂ ನನ್ನ‌ ಅರೆಸ್ಟ್ ಮಾಡೋಕೆ ಆಗಲ್ಲ ಎಂದ ಕುಮಾರಸ್ವಾಮಿಯವರ ಮಾತಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರನ್ನು ಬಂಧಿಸೋಕೆ ನಾನು ಬೇಡ. ಒಬ್ಬ …

Read More »

200 ನೇ ಕಿತ್ತೂರು ವಿಜಯೋತ್ಸವಕ್ಕೆ 40 ಕೋಟಿ ರೂ.ಅನುದಾನ

ಚನ್ನಮ್ಮನ ಕಿತ್ತೂರು: 2024 ನೇ ಸಾಲಿನ ಚನ್ನಮ್ಮನ ಕಿತ್ತೂರು ವಿಜಯೋತ್ಸವವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸೋಮವಾರ(ಆ19) ಬೆಂಗಳೂರಿನ ವಿಕಾಸ ಸೌಧದಲ್ಲಿ ಕಂದಾಯ ಸಚಿವ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.   200ನೇ ಕಿತ್ತೂರು ವಿಜಯೋತ್ಸವದ ಉತ್ಸವಕ್ಕೆ ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು 35 ಕೋಟಿ ರೂ. ಹಾಗೂ ಉತ್ಸವಕ್ಕೆ ರೂ 5 ಕೋಟಿ …

Read More »

ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಇಂದಿಗೂ, ಎಂದೆಂದಿಗೂ ಅಮರ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ನಮ್ಮ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯೋತ್ಸವದ ದಿನದಂದು ಹುಟ್ಟಿ, ಗಣ ರಾಜ್ಯೋತ್ಸವದಂದು ಮರಣ ಹೊಂದಿದ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಇಂದಿಗೂ, ಎಂದೆಂದಿಗೂ ಅಮರ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಗುರುವಾರದಂದು ತಾಲ್ಲೂಕಿನ ಕಲ್ಲೊಳ್ಳಿ ಪ.ಪಂ ಕಚೇರಿಯ ಹತ್ತಿರ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ರಾಯಣ್ಣನಂತಹ ಕೆಚ್ಚದೆಯ ಶೂರರ ಜೀವನವು ಪ್ರತಿಯೊಬ್ಬ ವ್ಯಕ್ತಿಗೂ ಮಾದರಿಯಾಗಿದೆ ಎಂದು ತಿಳಿಸಿದರು. ಕಿತ್ತೂರು …

Read More »

ಚಿಕ್ಕೋಡಿ: ಈ ಊರಿನ ಹೆಸರೇ ‘ಸೈನಿಕ ಮಲಿಕವಾಡ’; ಪ್ರತಿ ಮನೆಯಲ್ಲೂ ಇದ್ದಾರೆ ಸೈನಿಕ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲಿಕವಾಡ ಗ್ರಾಮವು ‘ಸೈನಿಕ ಮಲಿಕವಾಡ’ ಎಂದೇ ಹೆಸರಾಗಿದೆ. ಈ ಊರಿನ ಪ್ರತಿಯೊಂದು ಕುಟುಂಬದಲ್ಲೂ ಕನಿಷ್ಠ ಒಬ್ಬರು ಭಾರತೀಯ ಸೇನೆಯಲ್ಲಿದ್ದಾರೆ. ಸಿಆರ್‌ಪಿಎಫ್, ಬಿಎಸ್‍ಎಫ್, ಸಿಐಎಸ್‍ಎಫ್, ಎಸ್‍ಎಸ್‍ಬಿ ಸೇರಿ ವಾಯುಪಡೆ, ಭೂಸೇನೆ, ನೌಕಾಪಡೆಯಲ್ಲಿ ಇದ್ದಾರೆ.   ಏಳು ದಶಕಗಳಿಂದ ಹೀಗೆ ಸೇನೆ ಸೇರಿದವರ ಸಂಖ್ಯೆ ಬಹಳ ದೊಡ್ಡದು. ಈಗಲೂ 150ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿದ್ದಾರೆ. 1965ರಲ್ಲಿ ಭಾರತ-ಚೀನಾ ಯುದ್ಧ, 1971ರಲ್ಲಿ ಭಾರತ- ಬಾಂಗ್ಲಾದೇಶ ಯುದ್ಧ ಮತ್ತು 1999ರಲ್ಲಿ ಕಾರ್ಗಿಲ್ …

Read More »

ಓಲೈಕೆ ಮಾಡಿದರೆ ಬಾಂಗ್ಲಾದಂತೆ ನಮ್ಮಲ್ಲೂ ದೇವಸ್ಥಾನಕ್ಕೆ ಬೆಂಕಿ: ಯತ್ನಾಳ್

ವಿಜಯಪುರ :‘ಮುಸ್ಲಿಂ ಓಲೈಕೆಯಿಂದ, ನಿಮ್ಮ ದೇವರ ಗುಡೀನೆ ಉಳಿಯೋದಿಲ್ಲ. ಯಾವ ದೇವರಿಗೆ ಹೋಗಿ ಕೈ ಮುಗಿಯುವವರು ಇದ್ದೀರಾ. ಬಾಂಗ್ಲಾದಲ್ಲಿ ಏನಾಯ್ತು? ಸ್ವಾಮಿ ನಾರಾಯಣ ಟೆಂಪಲ್ 2 ಸಾವಿರ ಕೋಟಿ ರೂಪಾಯಿ ದೇವಸ್ಥಾನ, ಮುಸ್ಲಿಮರಿಗೆಗೆ ಅಲ್ಲಿ ಅನ್ನ ಹಾಕಿದರೂ ಅವರು ದೇವಸ್ಥಾನಕ್ಕೆ ಬೆಂಕಿ ಹಚ್ಚಿದರು, ನಾನೇನು ಸುಳ್ಳು ಹೇಳುತ್ತಿಲ್ಲ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿ ಕಾರಿದ್ದಾರೆ.   ಗುರುವಾರ ನಗರದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ಚಂದ್ರ ಬೋಸ್ …

Read More »

ಬೈಲಹೊಂಗಲದ ಬಳಿ ಕ್ಯಾಂಟರ್ ಪಲ್ಟಿ: ಮೂರು ಕರು ಸಾವು

ಬೈಲಹೊಂಗಲ: ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೆದ್ದಾರಿಯಲ್ಲಿ ಗುರುವಾರ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ, ಮೂರು ಕರುಗಳು ಮೃತಪಟ್ಟಿವೆ. ಮಹಾರಾಷ್ಟ್ರ ನೋಂದಣಿ ಹೊಂದಿದ ಕ್ಯಾಂಟರ್‌ನಲ್ಲಿ 12 ಗೋವುಗಳನ್ನು ತುಂಬಿಕೊಂಡು ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ 3 ಕರುಗಳು ಮೃತಪಟ್ಟಿದ್ದು, ಎರಡು ಹಸುಗಳ ಸ್ಥಿತಿ ಗಂಭೀರವಾಗಿವೆ.‌ ಏಳು ಹಸುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕ್ಯಾಂಟರ್‌ನಲ್ಲಿ ಸಿಲುಕಿದ್ದ ಹಸುಗಳನ್ನು …

Read More »

ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯಿಂದ ಧ್ವಜಾರೋಹಣ

78ನೇ ಸ್ವಾತಂತ್ರ್ಯ ದಿನಾಚರಣೆ; ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯಿಂದ ಧ್ವಜಾರೋಹಣ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿದ ಸಚಿವರು, ಮಹಾತ್ಮಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣದ ಬಳಿಕ ಆಕರ್ಷಕ ಪರೇಡ್ ಪರಿವೀಕ್ಷಣೆ ಮಾಡಿದರು. ಧ್ವಜಾರೋಹಣದಲ್ಲಿ ಸಂಸದ ಜಗದೀಶ್ ಶೆಟ್ಟರ್, ಶಾಸಕ ಆಶೀಫ್ ಸೇಠ್, ಮೇಯರ್ ಸವಿತಾ ಕಾಂಬಳೆ, ಡಿಸಿ ಮೊಹಮ್ಮದ್ ರೋಷನ್, ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್, ಎಸ್ಪಿ ಡಾ.ಭೀಮಾಶಂಕರ ಗುಳೇದ್, ಜಿಪಂ ಸಿಇಒ ರಾಹುಲ್ …

Read More »

ಕುರಿ ಸಾಕಾಣಿಕೆ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್. 78 ಕುರಿಗಳು ಸಜೀವ ದಹನ

ಮುಂಡಗೋಡ: ಪಟ್ಟಣದ ಹೊರವಲಯದ ತೋಟವೊಂದರಲ್ಲಿ ಕುರಿ ಸಾಕಾಣಿಕೆ ಘಟಕಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ 78 ಕುರಿಗಳು ಸಜೀವ ದಹನಗೊಂಡ ಘಟನೆ ಬುಧವಾರ(ಆಗಸ್ಟ್ 14) ನಡೆದಿದೆ. ಕಲಘಟಗಿ ರಸ್ತೆಯಲ್ಲಿರುವ ನಜೀರ ಅಹ್ಮದ ದರ್ಗಾವಾಲೆ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು. ಇವರು ತಮ್ಮ ತೋಟದಲ್ಲಿ ಕುರಿ ಸಾಕಾಣಿಕೆ ಮಾಡಿದ್ದರು. ಬೆಳಿಗ್ಗೆಯಿಂದ ತೋಟದಲ್ಲಿ ಇದ್ದು ಮಧ್ಯಾಹ್ನದ ವೇಳೆ ಊಟಕ್ಕೆಂದು ಮನೆಯ ಕಡೆ ಹೋಗಿದ್ದಾರೆ. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ …

Read More »

ಇಂದಿನಿಂದ ಗೇಟ್ ಅಳವಡಿಕೆ ಕೆಲಸ ಆರಂಭ,

ಬೆಂಗಳೂರು, ಆಗಸ್ಟ್ 14: ಕೊಪ್ಪಳದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಿಂಕ್ ಕಟ್ಟಾಗಿ ಕೊಚ್ಚಿ ಹೋಗಿತ್ತು. ಹೀಗಾಗಿ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಯಿತು. ಈ ಸ್ಥಳಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಇಂದು ಬುಧವಾರದಿಂದ ಜಲಾಶಯಕ್ಕೆಂದೆ ಸಿದ್ದಪಡಿಸಲಾದ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಶುರುವಾಗಲಿದೆ ಎಂದು ಮಾಹಿತಿ ನೀಡಿದರು. ತುಂಗಭದ್ರಾ ಜಲಾಶಯದ ಗೇಟ್ ಕೊಚ್ಚಿ ಹೋದ ಬಳಿಕ ಇತರ ಗೇಟ್‌ಗಳ ಮೇಲೆ …

Read More »