Breaking News
Home / ಜಿಲ್ಲೆ (page 11)

ಜಿಲ್ಲೆ

ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ: ಅಭಿಮಾನಿಗಳ ಮನೆಗಳಿಗೆ ಯಶ್​ ಭೇಟಿ

ಗದಗ: ರಾಕಿಂಗ್ ಸ್ಟಾರ್ ಯಶ್ (Rocking star Yash) ಜನ್ಮದಿನದ ಹಿನ್ನೆಲೆಯಲ್ಲಿ ತಮ್ಮ ಊರಿನ ಬೀದಿಯಲ್ಲಿ ಬರ್ತಡೇ ಬ್ಯಾನರ್‍‌ ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ …

Read More »

ಲೋಕಸಭೆ ಚುನಾವಣೆ ಕಲಬುರಗಿಗೆ ಖರ್ಗೆ ಅಳಿಯ, ಮೈಸೂರು-ಕೊಡಗು ಕ್ಷೇತ್ರಕ್ಕೆ ಯತೀಂದ್ರ?

ಮುಂಬರುವ ಲೋಕಸಭೆ ಚುನಾವಣೆ ಹಾಗೂ ಭಾರತ್ ನ್ಯಾಯ ಯಾತ್ರೆಗಾಗಿ ಪಕ್ಷದ ಸಿದ್ಧತೆ ಕುರಿತು ಚರ್ಚಿಸಲು ಕಾಂಗ್ರೆಸ್ ಮಹತ್ವದ ಸಭೆ ನಡೆಸುತ್ತಿದೆ. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯುವ ಈ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಹಿಸಲಿದ್ದಾರೆ. ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ಆಡಳಿತರೂಢ ಕಾಂಗ್ರೆಸ್ ಗೆ 2024 ರ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಈ ಹಿನ್ನಲೆ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನಾದರೂ …

Read More »

ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ, ವರ ಹಿಂಡಲಗಾ ಜೈಲಿಗೆ!

ಬೆಳಗಾವಿ, ಜನವರಿ 2: ಕೊನೇ ಕ್ಷಣದಲ್ಲಿ ಮದುವೆಯೊಂದು (Marriage) ಮುರಿದುಬಿದ್ದು ವರ ಹಿಂಡಲಗಾ ಜೈಲುಪಾಲಾದ ವಿಚಿತ್ರ ವಿದ್ಯಮಾನವೊಂದು ಬೆಳಗಾವಿಯ (Belagavi) ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಅಷ್ಟಕ್ಕೂ ಮದುವೆ ಮುರಿದು ಬೀಳಲು, ವರ ಜೈಲುಪಾಲಾಗಲು ಕಾರಣವಾಗಿದ್ದು ಮತ್ತೇನೂ ಅಲ್ಲ; ವರದಕ್ಷಿಣೆ ಬೇಡಿಕೆ. ಪಟ್ಟು ಹಿಡಿದು ವರದಕ್ಷಿಣೆ ಬೇಡಿಕೆ ಇಟ್ಟಿದ್ದಕ್ಕೆ ಮದುವೆ ಮುರಿದುಬಿದ್ದ ವಿದ್ಯಮಾನ ಮೂರು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ನಡೆದಿದ್ದೇನು? ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಆಯೋಜನೆಯಾಗಿತ್ತು. ಈ ಮದುವೆಯ …

Read More »

ಚಿಕ್ಕೋಡಿ-ಮತ್ತೆ ಕೇಳುತ್ತಿದೆ ಅಖಂಡ ಭಾರತದ ಕೂಗು: ಈಶ್ವರಪ್ಪ

ಚಿಕ್ಕೋಡಿ: ದೇಶವನ್ನು ಲೂಟಿ ಮಾಡಿದವರಿಗೆ ಭಾರತೀಯ ಸಂಸ್ಕೃತಿ ನಾಶ ಮಾಡಲು ಬಿಜೆಪಿ ಬಿಡಲ್ಲ. ಕಾಂಗ್ರೆಸ್‌ ಅಧಿಕಾರದ ಆಸೆಯಿಂದ ದೇಶ ತುಂಡು ತುಂಡಾಯಿತು. ಜನೇವರಿ 22 ರಾಮ ಮಂದಿರ ಉದ್ಘಾಟನೆ ದಿನದಂದು ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು.   ನಗರದಲ್ಲಿ ಶ್ರೀ ರಾಮಸೇನೆಯಿಂದ ಆಯೋಜಿಸಿದ್ದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಅಖಂಡ ಭಾರತ ನಿರ್ಮಾಣಕ್ಕೆ …

Read More »

ಬೆಳಗಾವಿ: ವರದಕ್ಷಿಣೆ ನೀಡಿಲ್ಲವೆಂದು ವಧುವಿಗೆ ತಾಳಿ ಕಟ್ಟದ ವರ ಅರೆಸ್ಟ್

ಬೆಳಗಾವಿ, ಜ.1: ತಾಳಿ ಕಟ್ಟುವ ಸಮಯದಲ್ಲಿ ಮದುವೆ ‌ಮುರಿದು ಬಿದ್ದ ಘಟನೆಬೆಳಗಾವಿ (Belagavi)ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ಎಂಬವನೊಂದಿಗೆ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು. ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪ ಕೂಡ ಬುಕ್ ಮಾಡಲಾಗಿತ್ತು. 2023ರ ಡಿಸೆಂಬರ್ 30 ರಂದು ನಡೆದ ಮದುವೆ ನಿಶ್ಚಿತಾರ್ಥ …

Read More »

ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ, ಘಟನೆ ತಡೆದ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಸನ್ಮಾನ

ಬೆಳಗಾವಿ, : ಬೆಳಗಾವಿ ( Belagavi ) ತಾಲೂಕಿನ ವಂಟಮೂರಿ ಗ್ರಾಮದಲ್ಲಿಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡುವುದನ್ನು ತಡೆಯಲು ಯತ್ನಿಸಿದ್ದ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದ ಸಾರ್ವಜನಿಕರಿಗೆ ಬೆಳಗಾವಿ ನಗರ ಪೊಲೀಸರು ( Belagavi City Police ) ಸನ್ಮಾನಿಸಿ, ಪ್ರಶಂಸನೀಯ ಪತ್ರ ನೀಡಿ ಅಭಿನಂದಿಸಿದ್ದಾರೆ. ನಗರದ ಪೊಲೀಸ್ ಮೈದಾನದಲ್ಲಿ ಜನರಲ್ ಪೊಲೀಸ್ ಪರೇಡ್ ನಡೆಯಿತು. ಬಳಿಕ ವಂಟಮೂರಿ ಗ್ರಾಮದ ನಿವಾಸಿ ಜಹಾಂಗೀರ್ ತಹಶಿಲ್ದಾರ, ವಾಸೀಂಮ್ ಮಕಾನದಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳಿಕಾರ್ ಅವರಿಗೆ ಸನ್ಮಾನಿಸಲಾಯಿತು. …

Read More »

ದಲಿತ ಕಾಲೋನಿಗೆ ರಸ್ತೆ ಇಲ್ಲದೇ ರಾತ್ರಿಯಿಂದ ಧರಣಿ ಕುಳಿತ ಜನ

ಗದಗ, ಡಿಸೆಂಬರ್​ 28: ಜಿಲ್ಲೆ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ದಲಿತ ಕಾಲೋನಿಗೆ ರಸ್ತೆ(road)ಇಲ್ಲದೇ ಜನರು ಪರದಾಡಿರುವಂತಹ ಘಟನೆ ನಡೆದಿದೆ. ರಸ್ತೆಗೆ ಜಮೀನು ಮಾಲೀಕ ಮುಳ್ಳಿನ ಬೇಲಿ ಹಾಕಿದ್ದು, ರಸ್ತೆಗಾಗಿ ದಲಿತ ಕಾಲೋನಿ ನಿವಾಸಿಗಳು ಹೋರಾಟ ಮಾಡುತ್ತಿದ್ದಾರೆ. ಕಾಲೋನಿ ಜನ ನಿನ್ನೆ ರಾತ್ರಿಯಿಂದ ಧರಣಿಗೆ ಕುಳಿತಿದ್ದಾರೆ. ಮಾಲೀಕರ ಮನವೊಲಿಸಲು ಅಧಿಕಾರಿಗಳ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Read More »

ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡುವ ಮೂಲಕ ಗೋಕಾಕದಲ್ಲಿ 139 ನೇ ವರ್ಷದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಗೋಕಾಕ : 139 ನೇ ವರ್ಷದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿದರು. ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಅವರು ಮಾತನಾಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಲಾಗುತ್ತಿದೆ, ಭಾರತೀಯ ಕಾಂಗ್ರೇಸ್ ಪಕ್ಷವು ತನ್ನದೆ ಆದಂತಹ ಇತಿಹಾಸವನ್ನು ಹೊಂದಿದೆ ಭಾರತದ ಆಡಳಿತದಲ್ಲಿ ಈ ರಾಷ್ಟ್ರೀಯ ಕಾಂಗ್ರೇಸ್ …

Read More »

ಜಾತಿಗಣತಿ ವೇಳೆ ಉಪಜಾತಿ ಬರೆಸಬೇಡಿ ಎಂಬ ನಿರ್ಣಯಕ್ಕೆ ಪಂಚಮಸಾಲಿ ಶ್ರೀ ವಿರೋಧ

ಬಾಗಲಕೋಟೆ, ): ಉಪಜಾತಿ ಬರೆಸಬೇಡಿ ಎಂದು ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ (jaya mruthyunjaya swamiji) ವಿರೋಧ ವ್ಯಕ್ತಪಡಿಸಿದ್ದಾರೆ. ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲನಲ್ಲಿ ತಮ್ಮ ಉಪಜಾತಿ ನಮೂದಿಸಬಾರದು ಎಂದು ನಿರ್ಣಯ ಮಾಡಿರುವುದನ್ನು ನಾವು ಪಂಚಮಸಾಲಿಗಳು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲನಲ್ಲಿ ತಮ್ಮ ಉಪಜಾತಿ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ತೆಳಗಿನ ಹಟ್ಟಿ ಗ್ರಾಮದಲ್ಲಿ ಶ್ರೀ ಬೀರಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ …

Read More »