Breaking News

ರಾಜ್ಯ

ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಕೂಡಿ ಬರದ ಮುಹೂರ್ತ: ಬೇಸತ್ತು ಹಸೆಮಣೆ ಏರಿದ 7 ಜೋಡಿ

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಇನ್ನೂ ಮುಹೂರ್ತ ಕೂಡಿ ಬಾರದ ಕಾರಣ ಬೇಸತ್ತ 7 ಜೋಡಿಗಳು ಸ್ವಂತ ಹಣದಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಸಾಲೂರು ಮಠದಲ್ಲಿ ಹಸೆಮಣೆ ಏರಿದ ಜೋಡಿಗಳು ಹೌದು. ಮಲೆಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹ ಎರಡು ಬಾರಿ ಮುಂದೂಡಿಕೆಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿರುವ ಸಾಲೂರು ಮಠದಲ್ಲಿ 7 ಜೋಡಿಗಳು ಹಸೆಮಣೆ ಏರಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ. 23 ರಂದು …

Read More »

ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳಲಿದೆ ಬಹುನಿರೀಕ್ಷಿತ ‘ಜವಾನ್’​ ಟ್ರೇಲರ್

ಬಹುನಿರೀಕ್ಷಿತ ‘ಜವಾನ್’ ಚಿತ್ರದ ಟ್ರೇಲರ್​ಗೆ ಮುಹೂರ್ತ ನಿಗದಿಯಾಗಿದ್ದು, ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಲಿದೆ. ಎಲ್ಲಿ? ಯಾವಾಗ? ತಿಳಿಯಲು ಮುಂದೆ ಓದಿ.. ‘ಜವಾನ್​’.. ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಬಹುನಿರೀಕ್ಷಿತ ಚಿತ್ರ. ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ನಟನೆಯನ್ನು ಕಣ್ತುಂಬಿಕೊಳ್ಳಲು ಸಿನಿ ಪ್ರೇಮಿಗಳು ಕಾತರರಾಗಿದ್ದಾರೆ. ‘ಪಠಾಣ್​’ ಬಳಿಕ ಈ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ‘ಜವಾನ್​’ನಲ್ಲಿ ನಟ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಿವ್ಯೂ ಕುತೂಹಲ ಹೆಚ್ಚಿಸಿದ್ದು, ಟ್ರೇಲರ್​ಗಾಗಿ ಪ್ರೇಕ್ಷಕರು …

Read More »

ಗಂಡ ಆಟೋ ಡ್ರೈವರ್,​ ಹೆಂಡತಿ ಪಿಎಚ್​ಡಿ ಪದವೀಧರೆ; ಓದಿನ ಉತ್ಸಾಹಕ್ಕೆ ಕುಟುಂಬದ ಬೆಂಬಲ

ಹೈದರಾಬಾದ್​: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣು ಒಬ್ಬಳು ಇರುತ್ತಾಳೆ ಎಂಬ ಮಾತಿಗೆ ತತ್ವಿರುದ್ಧದ ಘಟನೆಗಳು ನಮ್ಮ ಮುಂದೆ ನಡೆಯುತ್ತಿರುತ್ತದೆ. ಅದೇ ರೀತಿಯ ಘಟನೆ ಇದೀಗ ಆಂಧ್ರದಲ್ಲಿ ನಡೆದಿದೆ. ಓದಿನ ಹಂಬಲದ ಹಸಿವನ್ನು ಹೊಂದಿದ್ದ ಹೆಂಡತಿ ಕನಸಿಗೆ ಆಟೋ ಡ್ರೈವರ್​​ ನಿರೇರದು ಪೋಷಿಸಿದ್ದಾರೆ. ಇದರ ಫಲವಾಗಿ ಇಂದು ಆಕೆ ಎಎನ್​ಯುನಲ್ಲಿ ಪಿಎಚ್​ಡಿ ಪೂರ್ಣಗೊಳಿಸುವಂತಾಗಿದೆ. ಇವರ ಹೆಸರು ಈಪುರಿ ಶೀಲ​. ತಮ್ಮ ಈ ಸಾಧನೆ ಮತ್ತು ಕುಟುಂಬದ ಪ್ರೋತ್ಸಾಹ ಕುರಿತು ಅವರು ಈಟಿವಿ …

Read More »

ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದ ಸಿಎಂ, ಡಿಸಿಎಂ

ಮೈಸೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಮತದಾನದ ಹಿಂದಿನ ದಿನ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಹರಕೆ ಹೊತ್ತಿದ್ದರು. ಆ ಹರಕೆಯನ್ನು ಇಂದು ಇಬ್ಬರು ಚಾಮುಂಡೇಶ್ವರಿ ತಾಯಿಯ ದೇವಾಲಯದ ಮುಂಭಾಗದಲ್ಲಿ ಈಡುಗಾಯಿ ಒಡೆಯುವ ಮೂಲಕ ತೀರಿಸಿದರು. ಇಂದು ಚಾಮುಂಡಿ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ …

Read More »

ಗಿನ್ನೆಸ್ ಬುಕ್​ ಸೇರಲು ಸಜ್ಜಾದ ಮಧ್ಯಪ್ರದೇಶದ ಬೃಹತ್​ ರಾಖಿ

ಬಿಂಡಿ(ಮಧ್ಯಪ್ರದೇಶ): ಪ್ರೀತಿ ಮತ್ತು ರಕ್ಷಣೆಯ ಬಂಧವಾಗಿರುವ ರಾಖಿ ಸಹೋದರ ಮತ್ತು ಸಹೋದರಿಯರ ನಡುವಿನ ಮುರಿಯಾಲಾಗದ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವುದು ಸುಳ್ಳಲ್ಲ. ಇಂತಹ ಹಬ್ಬವನ್ನು ಮತ್ತಷ್ಟು ಸ್ಮರಣಿಯವಾಗಿಸಲು ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಅಶೋಕ್​ ಭಾರಧ್ವಾಜ್​ ಮುಂದಾಗಿದ್ದಾರೆ. ಇದಕ್ಕಾಗಿ ಅವರು ವಿಶ್ವದ ಬೃಹತ್​ ಗಾತ್ರದ ರಾಖಿ ತಯಾರಿಸಲು ಮುಂದಾಗಿದ್ದಾರೆ. ಈಗಾಗಲೇ ಭಾರಧ್ವಾಜ್​ ಹೆಸರು ಗಿನ್ನೆಸ್​ ಸೇರಿದಂತೆ ಅನೇಕ ದಾಖಲೆಗಳನ್ನು ಅಚ್ಚೊತ್ತಿದ್ದು, ಇದೀಗ ಒಎಂಜಿ ಬುಕ್​ ಆಫ್​ …

Read More »

ತಾವು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟ ರಜನಿಕಾಂತ್

ಬೆಂಗಳೂರು: ನಗರ ಸಾರಿಗೆ ಬಸ್​ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿರುವ ರಜನಿಕಾಂತ್​ ಸದ್ಯ ಭಾರತೀಯ ಚಿತ್ರರಂಗದ ಸುಪ್ರಸಿದ್ಧ ನಟ. ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು, ಸಾಕಷ್ಟು ಹೆಸರು ಸಂಪಾದಿಸಿರುವ ಬಹುಭಾಷಾ ನಟ ರಜನಿಕಾಂತ್ ಬದುಕು ಕಟ್ಟಿಕೊಳ್ಳಲು ವೃತ್ತಿಜೀವನ ಆರಂಭಿಸಿದ್ದ ಸ್ಥಳಕ್ಕೆ ಅಚ್ಚರಿಯ ಭೇಟಿ ಕೊಟ್ಟಿದ್ದಾರೆ. ಜೈಲರ್​ ಯಶಸ್ಸಿನಲ್ಲಿರುವ ನಟನನ್ನು ಕಂಡ ಬೆಂಗಳೂರು ಸಾರಿಗೆ ಸಿಬ್ಬಂದಿ ಆಶ್ಚರ್ಯಚಕಿತರಾದರು. ಒಂದು ಕ್ಷಣ ತಮ್ಮನ್ನೇ ತಾವು ನಂಬದಂತಾದರು. ಬಿಎಂಟಿಸಿ ಸಿಬ್ಬಂದಿ ಜೊತೆ ತಲೈವಾಕೆಲಸ …

Read More »

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉತ್ಪಾದನೆಯನ್ನು ಪುನಾರಂಭಿಸಿದೆ.

ಶಿವಮೊಗ್ಗ: ಭದ್ರಾವತಿ ಪಟ್ಟಣದ ಆಶಾಕಿರಣವಾಗಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉತ್ಪಾದನಾ ಕಾರ್ಯವನ್ನು ಪುನಾರಂಭಿಸಿದೆ. ಇದರಿಂದ ಕಾರ್ಖಾನೆಯ ಕಾರ್ಮಿಕರಲ್ಲಿ ಸಂತಸ ಮನೆ ಮಾಡಿದೆ. ನಿನ್ನೆಯಿಂದ ಕಾರ್ಖಾನೆಯ ಎನ್​ಆರ್​ಎಂ ಘಟಕ ಆರಂಭಗೊಂಡಿದೆ. 6 ದಿನಗಳ ಹಿಂದೆ ಉಕ್ಕು ಪ್ರಾಧಿಕಾರದ ಬಿಲಾಯ್ ಘಟಕದಿಂದ 19 ರೈಲು ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಕಾರ್ಖಾನೆಗೆ ಬಂದಿದ್ದವು. ಇದರಿಂದ ಎನ್‌ಆರ್‌ಎಂ ಘಟಕ ಕಾರ್ಯವನ್ನು ಶುರು ಮಾಡಿದೆ. ವಿಐಎಸ್‌ಎಲ್ ಕಾರ್ಖಾನೆಯು ಆಗಸ್ಟ್ 10 ರಿಂದಲೇ ಪ್ರಾರಂಭವಾಗಬೇಕಿತ್ತು. ಆದರೆ NRM ಘಟಕದ …

Read More »

ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರ ವಾಂತಿ ಭೇದಿಯಿಂದ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ನಡೆದಿದೆ. ವಾಂತಿ ಭೇದಿಯಿಂದ ಬಳಲುತ್ತಿದ್ದ ಅವರನ್ನು ವಿವಿಧ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಗ್ರಾಮದಲ್ಲಿ ಸೋಮವಾರ ಪಟೇಲ್ ಬಂಧುಗಳ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಊಟ ಮಾಡಿ ಮನೆಗೆ ವಾಪಸ್​​ ಆಗುತ್ತಿದ್ದಂತೆ ಹಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಇಡೀ ರಾತ್ರಿ ಪರದಾಟ ನಡೆಸಿದ ಬಳಿಕ ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 10ಕ್ಕೂ ಹೆಚ್ಚು ವಿವಿಧ ಖಾಸಗಿ ಆಸ್ಪತ್ರೆಗೆ …

Read More »

ಮೊದಲು ಎತ್ತುಗಳು ರೈತನ ಜೀವನಾಡಿ ಆಗಿದ್ದವು. ಆದರೆ, ಕಾಲ ಬದಲಾದಂತೆ ಈಗ ಬೈಕ್ ರೈತನ ಜೀವನಾಡಿಯಾಗಿದೆ

ಬೆಳಗಾವಿ: ಮೊದಲು ಎತ್ತುಗಳು ರೈತನ ಜೀವನಾಡಿ ಆಗಿದ್ದವು. ಆದರೆ, ಕಾಲ ಬದಲಾದಂತೆ ಈಗ ಬೈಕ್ ರೈತನ ಜೀವನಾಡಿಯಾಗಿದೆ. ಹೌದು ಎತ್ತುಗಳ ಕೊರತೆಯಿಂದಾಗಿ ಬೈಕ್ ಮೂಲಕ ತಮ್ಮ ಹೊಲದಲ್ಲಿ ಎಡೆಕುಂಟೆ ಹೊಡೆಯುವ ಮೂಲಕ ಇಲ್ಲೊಬ್ಬ ರೈತ ಮಾದರಿಯಾಗಿದ್ದಾರೆ. ಹೌದು ಸವದತ್ತಿ ತಾಲೂಕಿನ ಚಚಡಿ ಗ್ರಾಮದ ರೈತ ಮಹಾಂತೇಶ ಮಹಾದೇವಪ್ಪ ಮತ್ತಿಕೊಪ್ಪ ಎಂಬುವವರೇ ಈ ರೀತಿಯ ವಿನೂತನ ಪ್ರಯತ್ನಕ್ಕೆ ಮುಂದಾದವರು. ತಮ್ಮ ಮೂರು ಎಕರೆ ಹೊಲದಲ್ಲಿ ಗೋವಿನಜೋಳ ಬೆಳೆದಿರುವ ರೈತ ಮಹಾಂತೇಶ, ಬೈಕಿನ ಹಿಂದೆ …

Read More »

ಕಾಂಗ್ರೆಸ್​ನದ್ದು ಮೋಸದ ಗ್ಯಾರಂಟಿ, ಮತ್ತೊಮ್ಮೆ ಮೋದಿ ಪ್ರಧಾನಿ ಆಗೋದು ಪಕ್ಕಾ: ಮಾಜಿ ಸಚಿವ ಈಶ್ವರಪ್ಪ ಭವಿಷ್ಯ

ಹಾವೇರಿ: ಬಿಜೆಪಿಯು ಸಂಘಟನೆ ದೃಷ್ಟಿಯಿಂದ ಅತ್ಯಂತ ಬಲಿಷ್ಟವಾಗಿದೆ ಎಂದು ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷ ನಾಯಕ ಯಾರಾಗ್ತಾರೆ? ರಾಜ್ಯಾಧ್ಯಕ್ಷ ಯಾರಾಗ್ತಾರೆ? ಅನ್ನೋದನ್ನು ಯೋಚನೆ ಮಾಡದೇ ಲಕ್ಷಾಂತರ ಕಾರ್ಯಕರ್ತರು ಈ ದೇಶಕ್ಕೆ ಒಳ್ಳೆಯದಾಗಬೇಕು. ನಮೋ ಪ್ರಧಾನಿ ಆಗಬೇಕು ಅನ್ನೋ ದೃಷ್ಟಿಯಿಂದ ಕಾಯ್ತಾ ಇದ್ದಾರೆ. ಇಡೀ ರಾಜ್ಯದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. 28ಕ್ಕೆ 28 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಗ್ಯಾರಂಟಿ ಯೋಜನೆಗಳ …

Read More »