Breaking News
Home / ರಾಜಕೀಯ (page 802)

ರಾಜಕೀಯ

೧ ನವೆಂಬರ್ ಕರಾಳದಿನಕ್ಕೆ  ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.: ಏಕನಾಥ್ ಶಿಂಧೆ

ಈ ಬಾರಿ ನಡೆಯಲಿರುವ ೧ ನವೆಂಬರ್ ಕರಾಳದಿನಕ್ಕೆ  ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಈ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರಿಗೆ ಮಾತು ಕೊಟ್ಟಿದ್ದಾರೆ.   ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಮುಖರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರಿಗೆ ಫೋನಾಯಿಸಿ ೧ ನವೆಂಬರ್ ಕರಾಳದಿನಕ್ಕೆ ಮಹಾರಾಷ್ಟ್ರದ ಪ್ರತಿನಿಧಿಗಳನ್ನು ಕಳುಹಿಸಿಕೊಡುವಂತೆ ಆಗ್ರಹಿಸಿದ್ದಾರೆ. ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಖಜಾಂಚಿ ಪ್ರಕಾಶ ಮರಗಾಳೆ ಅವರ ಬೇಡಿಕೆಗೆ ಮಹಾ ಸಿಎಂ …

Read More »

ಮುಂದಿನ ಒಂದು ವರ್ಷದಲ್ಲಿ 10 ಲಕ್ಷ ಉದ್ಯೋಗ ಕೊಡುತ್ತೇವೆ: ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಚುನಾವಣೆಯಲ್ಲಿ ಯುವಕರಿಗೆ 10 ಲಕ್ಷ ಉದ್ಯೋಗ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಈಗ ನಡೆದುಕೊ‌ಂಡಿದ್ದಾರೆ’ ಎಂದು ಕೇಂದ್ರ ಕೃಷಿ ಮತ್ತು‌ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅದರಂತೆ ಈಗ ನಡೆದುಕೊ‌ಂಡಿದ್ದಾರೆ’ ಎಂದು ಕೇಂದ್ರ ಕೃಷಿ ಮತ್ತು‌ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು 10 ಲಕ್ಷ ಉದ್ಯೋಗಿಗಳ …

Read More »

ಪೊಲೀಸರೊಂದಿಗೆ ಸಾರ್ವಜನಿಕರೂ ಕೈ ಜೋಡಿಸಲಿ: ಮಲ್ಲಿಕಾರ್ಜುನ ಗೌಡ

ಶಿವಮೊಗ್ಗ: ‘ಎಲ್ಲಿಯವರೆಗೆ ಸಾರ್ವಜನಿಕರು ಪೊಲೀಸರಿಗೆ ಸಹಕರಿಸುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಅಶಾಂತಿ ಇದ್ದೇ ಇರುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಭಿಪ್ರಾಯಪಟ್ಟರು.   ಇಲ್ಲಿನ ಡಿಎಆರ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಕ್ಷಣೆಗೆ ಸಂಬಂಧಿಸಿದ ಹೊಣೆಗಾರಿಕೆ ಕೇವಲ ಯೋಧರು ಮತ್ತು ಪೊಲೀಸರದ್ದು ಅಲ್ಲ. ನಮ್ಮದೂ (ಸಾರ್ವಜನಿಕರದ್ದು) ಇದೆ ಎಂದರು. ಪರರ ರಕ್ಷಣೆಗಾಗಿ ದೇಹ ತ್ಯಾಗ ಮಾಡುವವರು ಸೈನಿಕರು ಮತ್ತು …

Read More »

ಜನ ಹುಚ್ಚರಾಗಬಹುದು, ದಾರಿಯಲ್ಲೇ ಬಿದ್ದು ಸಾಯಬಹುದು. ಎಂದು ಭವಿಷ್ಯ ನುಡಿಯುತ್ತಲೇ ಪರಿಹಾರ ತಿಳಿಸಿದ ಕೋಡಿಶ್ರೀ

ಹಾಸನ: ಕಾರ್ತಿಕದಿಂದ ಜನವರಿವರೆಗೂ ಮೂರು ತಿಂಗಳ ಕಾಲ ಕಂಟಕ ಎದುರಾಗಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಶನಿವಾರ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು, ಕಾರ್ತಿಕ ಮಾರ್ಗಶಿರ ಮಧ್ಯ ಭಾಗದಿಂದ ಜನವರಿ 23ರ ವರೆಗೂ ಕಂಠಕ ಎದುರಾಗಲಿದೆ. ರಾಜಭೀತಿ, ಭೂ ಕಂಟಕ‌, ಪ್ರದೇಶ, ಪ್ರಾಕೃತಿಕ ಕಂಟಕ, ಬಾಂಬ್, ಯುದ್ಧಭೀತಿ, ಭೂ ಕಂಪನ ಆಗಬಹುದು ಎಂದರು. ಜನರು ನಿಯಂತ್ರಣ ಕಳೆದುಕೊಂಡು ಹುಚ್ಚರಾಗಬಹುದು, ದಾರಿ ಒಳಗೆ …

Read More »

ನಾಳೆ ರಾಜ್ಯದಲ್ಲಿ ‘ಭಾರತ್ ಜೋಡೋ ಯಾತ್ರೆ’ಗೆ ತೆರೆ

ರಾಯಚೂರು: ಭಾರತ ಐಕ್ಯತಾ ಯಾತ್ರೆ ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯದಲ್ಲಿ ಮುಕ್ತಾಯವಾಗಲಿದೆ. ಸೆ.30 ರಿಂದ ಆರಂಭವಾದ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯಾತ್ರೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದಾರೆ. ಇವರು ಪಕ್ಷವನ್ನು ನೋಡಿಲ್ಲ. ಈ ಎಲ್ಲರೂ ಬದುಕು, ಭವಿಷ್ಯ, ದೇಶದಲ್ಲಿ ಶಾಂತಿ ಮರುಸ್ಥಾಪನೆ, ನಿತ್ಯ …

Read More »

ದೀಪಾವಳಿ ಬಳಿಕ ಸಂಪುಟ ಪುನಾರಚನೆ ಬಗ್ಗೆ ಚರ್ಚೆಗೆ ಸಿಎಂ ದಿಲ್ಲಿಗೆ: ಪ್ರಹ್ಲಾದ ಜೋಶಿ

ಬೆಂಗಳೂರು: ದೀಪಾವಳಿಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಬರುವುದಾಗಿ ಹೇಳಿದ್ದಾರೆ. ಅವರು ಅಲ್ಲಿಗೆ ಬಂದ ನಂತರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಸಂಪುಟ ರಚನೆ ಸೇರಿದಂತೆ ಹಲವು ವಿಚಾರಗಳನ್ನು ವರಿಷ್ಠರ ಜತೆ ಚರ್ಚಿಸುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.   ಸುದ್ದಿಗಾರರ ಜತೆ ಮಾತನಾಡಿದ ಅವರು, ದೀಪಾವಳಿ ನಂತರ ಮುಖ್ಯಮಂತ್ರಿಗಳು ದೆಹಲಿಗೆ ಬರುವುದಾಗಿ ತಮ್ಮ ಬಳಿ ಹೇಳಿದ್ದಾರೆ. ಅವರು ದೆಹಲಿಗೆ ಬಂದಾಗ ಹಲವು ವಿಚಾರಗಳ ಬಗ್ಗೆ …

Read More »

ಸರಕಾರಿ ಶಾಲಾ ಮಕ್ಕಳ ರಕ್ತ ಹೀರುವ ದರಿದ್ರ ಸರ್ಕಾರ: ರಾಮಲಿಂಗಾರೆಡ್ಡಿ ಆಕ್ರೋಶ

ಬೆಂಗಳೂರು: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನ ಸಾಮಾನ್ಯರ ರಕ್ತ ಹೀರುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಈಗ ಸರಕಾರಿ ಶಾಲೆ ವಿದ್ಯಾರ್ಥಿಗಳ ಪೋಷಕರಿಂದ ತಿಂಗಳಿಗೆ 100 ರೂ. ದೇಣಿಗೆ ವಸೂಲಿಗೆ ಮುಂದಾಗಿದೆ. ಈ ಸರಕಾರ ಅದೆಷ್ಟು ದರಿದ್ರಗೇಡಿ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಸರ್ಕಾರದ ಜನವಿರೋಧಿ ನಿರ್ಧಾರದ ವಿರುದ್ಧ ರಾಮಲಿಂಗಾರೆಡ್ಡಿ ಅವರು ಮಾಧ್ಯಮ ಪ್ರಕಟಣೆ …

Read More »

ಮಳೆಯ ನಡುವೆ ಹಾವುಗಳ ಕಾಟ,ಉರಗ ಭಯಕ್ಕೆ ತೋಟದ ವಸತಿಗಳ ರೈತರು ಕಂಗಾಲ

ಮಳೆಯ ನಡುವೆ ಹಾವುಗಳ ಕಾಟಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ. ಜಮೀನು, ತೋಟಗಳನ್ನ ಬಿಟ್ಟು ಮನೆಗಳ ನುಗ್ತಿರೋ ಹಾವಿನ ಭಯದಿಂದ ಮನೆಗೆ ಬೆಂಕಿ ಇಟ್ಟು, ಜೆಸಿಬಿ ಬಳಸಿ ಮನೆಗಳನ್ನೆ ಧ್ವಂಸ ಮಾಡ್ತಿರುವ ವಿಜಯಪುರ ಜಿಲ್ಲೆಯ ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ನಡೆದಿದೆ. ಜನರಿಗೆ ಹಾವುಗಳದ್ದೆ ಭಯ, ಉರಗ ಭಯಕ್ಕೆ ತೋಟದ ವಸತಿಗಳ ರೈತರು ಕಂಗಾಲಾಗಿದ್ದಾರೆ. ನಿರಂತರ ಮಳೆಯಿಂದ ಮನೆಗಳಿಗೆ ನುಗ್ತಿವೆ. ಮನೆ ಹೊಕ್ಕ ಹಾವಿಗೆ ಹೆದರಿ ಮನೆಗಳಿಗೆ ಬೆಂಕಿ ಇಡ್ತಿದ್ದಾರೆ. ಸಾವಳಸಂಗ ಹಾಗೂ …

Read More »

ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮಾಜಿ ಹೆಸರು ಘೋಷಿಸಿ: ಶ್ರೀನಿವಾಸ್ ತಾಳೂಕರ್

ತಕ್ಷಣವೇ ಸಚಿವ ಸಂಪುಟ ಸಭೆ ಕರೆದು ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮಾಜಿ ಹೆಸರನ್ನು ಇಡುವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹಿರಿಯ ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಆಗ್ರಹಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮಾಜಿ ಹೆಸರು ಇಡಬೇಕು ಎಂದು 2007ರಿಂದ ಸುಮಾರು 17 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ ರಾಜ್ಯ ಸರ್ಕಾರ ಯಾಕೋ …

Read More »

ರಾಜ್ಯ ಮಟ್ಟದ ಕಿತ್ತೂರು ಉತ್ಸವಕ್ಕೆ ಸಕಲ ಸಿದ್ಧತೆ: ಮಹಾಂತೇಶ ದೊಡ್ಡಗೌಡರ

ಇದೇ ಅಕ್ಟೋಬರ್ 23, 24 ಹಾಗೂ 25ರಂದು ಮೂರು ದಿನಗಳ ಕಾಲ ಕಿತ್ತೂರು ರಾಣಿ ಚನ್ನಮ್ಮಾಜಿ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ವಿಶೇಷವಾಗಿ ಸಿಎಂ ಬೊಮ್ಮಾಯಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಉತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾಹಿತಿ ನೀಡಿದ್ದಾರೆ. ಹೌದು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ್ದು ನಮ್ಮ …

Read More »