Breaking News
Home / ರಾಜಕೀಯ (page 771)

ರಾಜಕೀಯ

ಗಡಿ ವಿವಾದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳ ಟಾರ್ಗೆಟ್

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳ ಟಾರ್ಗೆಟ್ ಮಾಡಲಾಗುತ್ತಿರುವದನ್ನು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಖಂಡಿಸಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಗಳಿಗೆ ಕಪ್ಪು ಬಣ್ಣ ಬಳಿದು ವಿರೋಧಿಸಿ ಮಹಾರಾಷ್ಟ್ರ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಲಾಗಿದೆ. ಮಹಾರಾಷ್ಟ್ರ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಮಹಾರಾಷ್ಟ್ರ ನವ ನಿರ್ಮಾಣ …

Read More »

ಗುಜರಾತ್ ಫಲಿತಾಂಶ ಕರ್ನಾಟಕಕ್ಕೆ ಅನ್ವಯಿಸಲ್ಲ, ಸಿಎಂ ಹಗಲುಗನಸು:H.D.K.

ದೇವನಹಳ್ಳಿ: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕಕ್ಕೆ ಅನ್ವಯವಾಗಲ್ಲ, ಸಿಎಂ ಬಸವರಾಜ ಬೊಮ್ಮಾಯಿ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದರು. ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮೊದಲೇ ಗೊತ್ತಿರುವುದೇ… ಗುಜರಾತ್​ ಫಲಿತಾಂಶದ ಬಗ್ಗೆ ವಿಶೇಷ ವಾಖ್ಯಾನ ಮಾಡುವಂತಹದ್ದಿಲ್ಲ. 5 ವರ್ಷದಿಂದ ಗುಜರಾತ್​ನಲ್ಲಿ ವಿರೋಧ ಪಕ್ಷವೇ ಇರಲಿಲ್ಲ. ಆದ್ದರಿಂದ ಗುಜರಾತ್ ಫಲಿತಾಂಶ ಏನು ಬರಲಿದೆ ಎಂದು ಮೊದಲೇ ಎಲ್ಲರಿಗೂ …

Read More »

ಮೋದಿ ಹವಾ ದೆಹಲಿಯಲ್ಲೇ ಇಲ್ಲ, ನಮ್ಮ ರಾಜ್ಯದಲ್ಲಿ ಇರುತ್ತಾ?: ಸಿದ್ದರಾಮಯ್ಯ

ಮೈಸೂರು: ಗುಜರಾತ್​ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಎಷ್ಟರ ಮಟ್ಟಿಗೆ ಕರ್ನಾಟಕದ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎನ್ನುವ ಚರ್ಚೆ ರಾಜಕೀಯ ಪಕ್ಷಗಳ ಒಳಗೆ ನಡೆಯುತ್ತಿದೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ರೀತಿಯಲ್ಲಿ ಚುನಾವಣೇಯ ವಿಶ್ಲೇಷಣೆ ಮಾಡಿದ್ದಾರೆ. ಇದೇ ಸಂದರ್ಭ ಮೋದಿ ಅಲೆಯ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ‘ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಇತ್ತು. ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ …

Read More »

ಇವಿಎಂ ತಿರುಚಿದ್ದಾರೆಂದು ಆರೋಪಿಸಿ ಕುತ್ತಿಗೆ ಬಿಗಿದುಕೊಂಡು ಕಾಂಗ್ರೆಸ್​ ಅಭ್ಯರ್ಥಿಯಿಂದ ಹೈಡ್ರಾಮ!

ಅಹಮಾದಾಬಾದ್​: ಇವಿಎಂ ತಿರುಚಿದ್ದಾರೆ ಎಂದು ಆರೋಪಿಸಿ ಗುಜರಾತಿನ ಕಾಂಗ್ರೆಸ್​ ಅಭ್ಯರ್ಥಿಯೊಬ್ಬ ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಪ್ರತಿಭಟಿಸಿದ್ದಾರೆ. ಮತಎಣಿಕೆಯ ಮಧ್ಯೆಯೇ ಈ ಹೈಡ್ರಾಮ ಸೃಷ್ಟಿಸುವ ಮೂಲಕ ಕೆಲ ಕಾಲ ಮತಎಣಿಕೆ ಕೇಂದ್ರದಲ್ಲಿ ಗೊಂದಲದ ವಾತವರಣವನ್ನು ನಿರ್ಮಿಸಿದರು.   ಗಾಂಧಿಧಾಮ್​ ಅಭ್ಯರ್ಥಿ ವೆಲ್ಜಿಭಾಯ್​ ಸೊಲಂಕಿ ಎಂಬುವರಿಂದ ಈ ಹೈಡ್ರಾಮ ನಡೆದಿದೆ. ಬಿಜೆಪಿ ಅಭ್ಯರ್ಥಿ ಮಾಲ್ತಿ ಕಿಶೋರ್​ ಮಹೇಶ್ವರಿ ಎದುರು 12 ಸಾವಿರ ಮತಗಳ ಅಂತರದಲ್ಲಿ ಸೋಲಂಕಿ ಅವರು ಹಿನ್ನಡೆ ಅನುಭವಿಸಿದ್ದಾರೆ. ಕೆಲವೊಂದು ಇವಿಎಂಗಳನ್ನು ಸರಿಯಾಗಿ …

Read More »

ಗುಜರಾತ್ ಚುನಾವಣಾ ಫಲಿತಾಂಶ , ಬಿಜೆಪಿ-ಆಪ್ ಒಳಒಪ್ಪಂದ  ಅನುಮಾನ: ರಾವತ್

ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ಫಲಿಕಾಂಶ ನಿರೀಕ್ಷೆಯಂತೆಯೇ ಬಂದಿದೆ. ಆದರೆ, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ಒಳಒಪ್ಪಂದವಾಗಿರುವ ಬಗ್ಗೆ ಅನುಮಾನಗಳೂ ವ್ಯಕ್ತವಾಗುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಗುರುವಾರ ಹೇಳಿದ್ದಾರೆ. ಮುಂಬೈ: ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ಫಲಿಕಾಂಶ ನಿರೀಕ್ಷೆಯಂತೆಯೇ ಬಂದಿದೆ. ಆದರೆ, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ಒಳಒಪ್ಪಂದವಾಗಿರುವ ಬಗ್ಗೆ ಅನುಮಾನಗಳೂ ವ್ಯಕ್ತವಾಗುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ …

Read More »

ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ

ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಸಂದೇಶ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿಯ ಶ್ರೀ ವೀರಭದ್ರೇಶ್ವರ ಜಾತ್ರೆ ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಜಾತ್ರೆ ನಾವು ಬಾಲ್ಯದಲ್ಲಿ ಜಾತ್ರೆಯನ್ನು ನೋಡಿ ಆನಂದಪಟ್ಟ ಕ್ಷಣಗಳು ಇವತ್ತಿಗೂ ಕೂಡ ನೆನಪಿನಲ್ಲಿವೆ. ರಾಮದುರ್ಗ ತಾಲೂಕಿನ ಎಂ ಚಂದರಗಿ ಗ್ರಾಮ ನಮ್ಮ ಹುಟ್ಟೂರು ಈ ಗ್ರಾಮದಿಂದ ಜಾತ್ರೆಗೆ ಬರುವಾಗ ಪಡುವ ಆನಂದ ಬಹುಶಃ ಅಷ್ಟಿಸ್ಟಲ್ಲ …

Read More »

ಬೆಳಗಾವಿಯಲ್ಲಿ ಗುಜರಾತಿನ ಗೆಲುವು ಸಂಭ್ರಮಿಸಿದ ಕಾರ್ಯಕರ್ತರು

ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಬಿಜೆಪಿ ಮಹಾನಗರ ಕಾರ್ಯಕರ್ತರು ಸಂಭ್ರಮಿಸಿದರು. ಇಂದು ನಗರದ ಚನ್ನಮ್ಮ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ , ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅದಕ್ಕಿಂತ ಮುಂಚೆ ಚನ್ನಮ್ಮ ಸರ್ಕಲ್ ನಲ್ಲಿ ಇರುವ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮ ಜೊತೆ ಮಾತನಾಡಿದ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ್ ಅವರು. ರಾಜೀವ ಗಾಂಧಿ ಸಮಯದಲ್ಲಿ …

Read More »

ಬಿಜೆಪಿ ವಿಜಯೋತ್ಸವ ಆಚರಣೆ ವೇಳೆ ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಅಚಾತುರ್ಯ

ಶಿಸ್ತಿನ ಪಕ್ಷ ಎಂದುಕೊಳ್ಳುತ್ತಿರುವ ಬಿಜೆಪಿಯಲ್ಲಿಯೇ ವಿಜಯೋತ್ಸವ ಆಚರಣೆ ವೇಳೆಯಲ್ಲಿ ಕಾರ್ಯಕರ್ತರ ಅಜಾಗರೂಕತೆಯಿಂದ ಯಡವಟ್ಟು ಸಂಭವಿಸಿದೆ. ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಅಚಾತುರ್ಯ ನಡೆದಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಸಾರ್ವಜನಿಕರು ರಸ್ತೆಯಲ್ಲಿಯೇ ಛೀಮಾರಿ ಹಾಕುವಂತಾಗಿದೆ. ಗುಜರಾತ್ ರಾಜ್ಯದ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಲು ಮುಂದಾಗಿದ್ದಾರೆ. ಇದೇ ವೇಳೆ ಪಟಾಕಿಯು ಆಟೋವೊಂದಕ್ಕೆ ಬಿದ್ದಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತ ತಪ್ಪಿದಂತಾಗಿದೆ. ಜನನಿಬಿಡ ಪ್ರದೇಶದಲ್ಲಿ ಒಂದಾಗಿರುವ ದೇಶಪಾಂಡೆನಗರದ ಬಿಜೆಪಿ …

Read More »

ಡಿ.20 ರಂದು ಮೂಡಲಗಿ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯ ಆರಂಭ

ಮೂಡಲಗಿ: ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯವನ್ನು ಆರಂಭಿಸಲಿಕ್ಕೆ ಇಲಾಖೆಯು ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಡಿ. 20 ರಂದು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.   ಅರಭಾವಿ ಶಾಸಕ ಮತ್ತು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಈಗಾಗಲೇ ಹೊಸದಾಗಿ ಆರಂಭಿಸಲಾಗಿರುವ ಉಪ ನೋಂದಣಿ ಕಛೇರಿಯಲ್ಲಿ ಸಂಬಂಧಪಟ್ಟ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಕಾವೇರಿ ತಂತ್ರಾಂಶ ಮತ್ತು …

Read More »

ಬೆಳಗಾವಿ: ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್‌.ಡಿ.ಆರ್‌.ಎಫ್‌ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾ ಮತ್ತು ಅಣಕು ಪ್ರದರ್ಶನ ಸೋಮವಾರ ದೇಸೂರಿನ ಬಿಪಿಸಿಎಲ್‌-ಐಓಸಿಎಲ್‌ ಪೆಟ್ರೋಲಿಯಂ ಶೇಖರಣಾ ಕೇಂದ್ರದಲ್ಲಿ ನಡೆಯಿತು. ಪೆಟ್ರೋಲಿಯಂ ಸ್ಟೋರೇಜ್‌ಗಳಲ್ಲಿ, ಪೆಟ್ರೋಲಿಯಂ ವ್ಯಾಗನ್‌ ಟ್ಯಾಂಕರ್‌ ಸೋರಿಕೆ, ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನ ಕೈಗೊಳ್ಳಲಾಯಿತು. ಬೆಳಗಾವಿ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್‌ ಹಾಗೂ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೊಡ ಅವರ ನಿರ್ದೇಶನದಂತೆ ಅಣಕು ಪ್ರದರ್ಶನ ಜರುಗಿತು. ಅವಘಡ ಸಂಭವಿಸಿದ ಕುರಿತು ಮಾಹಿತಿ ಬಂದ ತಕ್ಷಣವೇ ಜಿಲ್ಲಾಡಳಿತದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚಿಸಿ, ಘಟನೆ ಸ್ಥಳಕ್ಕೆ ಭೇಟಿ ನೀಡಿ ಅವಘಡವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು. ಸನ್ನಿವೇಶದಲ್ಲಿ ಶೇಖರಣೆಯಾದ ಪೆಟ್ರೋಲಿಯಂ ಕಳುಹಿಸುವ ಸಂದರ್ಭದಲ್ಲಿ ವ್ಯಾಗನ್‌ ಟ್ಯಾಂಕರ್‌ ಸೋರಿಕೆಯಾಗಿದ್ದು, ಅದರಿಂದ ಪೆಟ್ರೋಲಿಯಂ ಶೇಖರಣಾ ಕೇಂದ್ರದ ಒಳಗಡೆ ಬೆಂಕಿ ಸಂಭವಿಸಿತು. ಅವಘಡದಲ್ಲಿ ಗಾಯಗೊಂಡಿರುವ 25 ಕಾರ್ಮಿಕರನ್ನು ಆಂಬ್ಯುಲೆನ್ಸ್‌ ಮೂಲಕ ಸ್ಥಳಾಂತರಿಸಿ, ಮೆಡಿಕಲ್‌ ಪೋಸ್ಟ್‌ ಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಸನ್ನಿವೇಶವನ್ನು ಅಣಕು ಪ್ರದರ್ಶನದಲ್ಲಿ ಕೈಗೊಳ್ಳಲಾಯಿತು. ತಾಲೂಕು ಆರೋಗ್ಯಾಧಿಕಾರಿ ಮಾಸ್ತಿಹೊಳಿ, ವಡಗಾಂವ ಸಿಪಿಐ ಶ್ರೀನಿವಾಸ ಹಾಂಡ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ, ಭಾರತ ಪೆಟ್ರೋಲಿಯಂ ಟೆರಟರಿ ಮ್ಯಾನೇಜರ್‌ ಸುರೇಶ ಅಲಾಟೆ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನೀಲಗಾರ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಕಿರಣ್‌ ನಾಯಕ್‌, ಎನ್‌.ಡಿ.ಆರ್‌. ಎಫ್‌ ಇನಸ್ಪೆಕ್ಟರ್‌ ಶಿವಕುಮಾರ, ಸಬ್‌ ಇನಸ್ಪೆಕ್ಟರ್‌ ಶಾಂತಿ ಲಾಲ್‌ ಜಟಿಯಾ, ಬಿಪಿಸಿಎಲ್‌ ರಕ್ಷಣಾ ಅಧಿಕಾರಿ ವಿಮಲ್‌ ಸಿ. ಪಿ, ಐಓಸಿಎಲ್‌ ಡಿಪೋ ಮ್ಯಾನೇಜರ್‌ ಪುನೀತ್‌ ಮುರುಡೇಶ್ವರ ಅಣಕು ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

ಬೆಳಗಾವಿ: ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್‌.ಡಿ.ಆರ್‌.ಎಫ್‌ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾ ಮತ್ತು ಅಣಕು ಪ್ರದರ್ಶನ ಸೋಮವಾರ ದೇಸೂರಿನ ಬಿಪಿಸಿಎಲ್‌-ಐಓಸಿಎಲ್‌ ಪೆಟ್ರೋಲಿಯಂ ಶೇಖರಣಾ ಕೇಂದ್ರದಲ್ಲಿ ನಡೆಯಿತು.   ಪೆಟ್ರೋಲಿಯಂ ಸ್ಟೋರೇಜ್‌ಗಳಲ್ಲಿ, ಪೆಟ್ರೋಲಿಯಂ ವ್ಯಾಗನ್‌ ಟ್ಯಾಂಕರ್‌ ಸೋರಿಕೆ, ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ …

Read More »